ಕಲ್ಯಾಣ ಕರ್ನಾಟಕ ವಿಮೋಚನಾ ಹೋರಾಟದಲ್ಲಿ ಕೂಲೂರು ಮಲ್ಲಪ್ಪಾಜಿ ಪಾತ್ರ ಮಹತ್ವದ್ದು: ಐಕೂರ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಕಲ್ಯಾಣ ಕರ್ನಾಟಕ ವಿಮೋಚನೆ ರೂವಾರಿ ಸ್ವಾತಂತ್ರ್ಯ ಹೋರಾಟಗಾರ ಕೂಲೂರು ಮಲ್ಲಪ್ಪಾಜಿ ರವರ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ ಹೆಳಿದರು.ಕಲ್ಯಾಣ ಕರ್ನಾಟಕ ವಿಮೋಚನ ದಿನಾಚರಣೆಯ ಅಂಗವಾಗಿ ನಗರದ ಕೂಲೂರು ಮಲ್ಲಪ್ಪಾಜಿ ಸಮಾದಿ ಸ್ಥಳಕ್ಕೆ ಭೇಟಿ ನೀಡಿ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.ಕಲ್ಯಾಣ ಕರ್ನಾಟಕ ವಿಮೋಚನ ಚಳುವಳಿಯಲ್ಲಿ ನನ್ನ ಮುಂಚೂಣಿ ನಾಯಕರಾಗಿ ರಜಾಕಾರರು,ಮತ್ತು ಹೈದರಾಬಾದ್ ನಿಜಾಮನ ವಿರುದ್ಧ ಹೋರಾಡಿ ನಮ್ಮ ಭಾಗಕ್ಕೆ ಸ್ವಾತಂತ್ರ್ಯ ಕೊಡಿಸುವಲ್ಲಿ ಹಗಲು ಇರುಳು ಎನ್ನದೆ ಶ್ರಮವಹಿಸಿದ್ದಾರೆ.ಅವರ ಹೋರಾಟ ಇಂದಿನ ಯುವಕರಿಗೆ ಮಾದರಿಯಾಗಿದೆ ಪ್ರತಿಯೊಬ್ಬ ಯುವಕರು ಸ್ವಾತಂತ್ರ್ಯ ಹೋರಾಟಗಾರರ ತತ್ವ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.ಅವರು ಮಹಾತ್ಮ ಗಾಂಧಿ,ಮಾಜಿ ಪ್ರಧಾನಿಗಳಾದ ಜವರಲಾಲ್ ನೆಹರು,ಶ್ರೀಮತಿ ಇಂದಿರಾ ಗಾಂಧಿಯ ಒಡನಾಡಿಯಾಗಿದ್ದರು.ಯಾದಗಿರಿ ಜಿಲ್ಲೆಗೆ ನೀರಾವರಿ ತರುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.ಅವರ ಸವಿನೆನಪಿಗಾಗಿ ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣಕ್ಕೆ ಕೂಲೂರು ಮಲ್ಲಪ್ಪಾಜಿ ಹೆಸರು ನಾಮಕರಣ ಮಾಡಬೇಕು ಎಂದು ಅವರು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಒತ್ತಾಯಿಸಿದ್ದಾರೆ.ಈ ಸಂದರ್ಭದಲ್ಲಿ ಕೂಲೂರು ಮಲ್ಲಪ್ಪಾಜಿ ಅಭಿಮಾನಿಗಳ ಸಂಘದ ಅಧ್ಯಕ್ಷ ಹಣಮಂತರಾಯ ಗೌಡ ಮಾಲಿ ಪಾಟೀಲ್ ತೇಕರಾಳ,ಹೊನ್ನಪ್ಪ ಯಡ್ಡಳ್ಳಿ,ರಾಜೀವ್ ಶಿವರಾಜ್ ನಾಯ್ಕೊಡಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

↑
Suddi Belaku