ಕೃಷಿ ಸೌಲಭ್ಯಕ್ಕೆ ಪ್ರತಿಯೊಬ್ಬ ರೈತರು ಎಫ್.ಐ.ಡಿ. ಕಡ್ಡಾಯವಾಗಿ ನೋಂದಣಿಗೆ ಆಹ್ವಾನ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ ಏಪ್ರಿಲ್ 21 : ಕೃಷಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರತಿಯೊಬ್ಬ ರೈತರಿಗೆ ಎಫ್.ಐ.ಡಿ. ಕಡ್ಡಾಯವಾಗಿ ನೋಂದಣಿಗೆ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಸಹಾಯಕ ಕೃಷಿ ನಿರ್ದೇಶಕರು ಸುರೇಶ.ಬಿ ಅವರು ತಿಳಿಸಿದ್ದಾರೆ.

ರಾಜ್ಯ ಮತ್ತು ಕೇಂದ್ರ ಸರ್ಕಾರದ ಕೃಷಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಪ್ರತಿಯೊಬ್ಬ ರೈತರಿಗೆ ಎಫ್.ಐ.ಡಿ (ಫ್ರೂಟ್) ಅಗತ್ಯವಾಗಿದ್ದು, ಎಫ್.ಐ.ಡಿ ಮಾಡಿಸಿಕೊಳ್ಳದೆ ಇರುವ ರೈತರು ನೋಂದಣಿ ಮಾಡಿಸಿಕೊಳ್ಳಬೇಕು. ಯಾದಗಿರಿ ತಾಲ್ಲೂಕಿನಲ್ಲಿ 98624 ಸರ್ವೆ ನಂಬರ್‌ಗಳಿದ್ದು, ಇದರಲ್ಲಿ 67039 ಸರ್ವೆ ನಂಬರ್‌ಗಳ ಎಫ್.ಐ.ಡಿಯಾಗಿವೆ. ಉಳಿದ 31585 ಸರ್ವೆ ನಂಬರ್‌ಗಳು ನೋಂದಣಿಯಾಗಿಲ್ಲ. ಗುರುಮಠಕಲ್ ತಾಲ್ಲೂಕಿನಲ್ಲಿ 174767 ಸರ್ವೆ ನಂಬರ್‌ಗಳಿವೆ. ಇದರಲ್ಲಿ 120738 ಸರ್ವೆ ನಂಬರ್‌ಗಳು ಮಾತ್ರ ಎಫ್.ಐ.ಡಿ.ಯಾಗಿದೆ. ಉಳಿದ 54029 ಸರ್ವೆ ನಂಬರ್‌ಗಳು ನೋಂದಣಿ ಆಗಿಲ್ಲ. ಇದುವರೆಗೆ ನೋಂದಣಿ ಮಾಡಿಸಿಕೊಳ್ಳದೆ ಇರುವ ರೈತರು ಶೀಘ್ರವೇ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.

ರೈತರಿಗೆ ಅವಶ್ಯಕವಾಗಿರುವ ಯೂರಿಯಾ, ಡಿ.ಎ.ಪಿ ಮತ್ತು ಇತರೆ ರಸಗೊಬ್ಬರಗಳನ್ನು ಪಡೆದುಕೊಳ್ಳಲು ಬೆಳೆ ಪರಿಹಾರ, ಬೆಳೆ ವಿಮೆ ಸೌಲಭ್ಯ, ಪಿ.ಎಂ. ಕಿಸಾನ್ ಸಮ್ಮಾನ್ ನಿಧಿ ಸೌಲಭ್ಯ ಪಡೆಯಲು, ಎ.ಪಿ.ಎಂ.ಸಿ ಮತ್ತು ಖರೀದಿ ಕೇಂದ್ರಗಳಲ್ಲಿ ಭತ್ತ, ತೊಗರಿ, ಹತ್ತಿ ಸೇರಿದಂತೆ ಇನ್ನಿತರ ಬೆಳೆಗಳ ಮಾರಾಟಕ್ಕೆ ಎಫ್.ಐ.ಡಿ ಅಗತ್ಯವಾಗಿದೆ. ಹೀಗಾಗಿ ರೈತರು ಎಫ್.ಐ.ಡಿ ಮಾಡಿಸಿಕೊಳ್ಳಬೇಕು.ಬಳಿಚಕ್ರ, ಹತ್ತಿಕುಣಿ, ಸೈದಾಪುರ, ಯಾದಗಿರಿ, ಗುರುಮಠಕಲ್, ಕೊಂಕಲ ವಲಯಗಳಲ್ಲಿ ಎಫ್.ಐ.ಡಿ. ನೋಂದಣಿ ಮಾಡಿಸಿಕೊಳ್ಳದ ರೈತರು ನೋಂದಣಿ ಮಾಡಿಸಿಕೊಳ್ಳಬೇಕು. ರೈತರು ರೈತ ಸಂಪರ್ಕ ಕೇಂದ್ರಗಳಲ್ಲಿ, ಗ್ರಾಮ ಲೆಕ್ಕಾಧಿಕಾರಿಗಳ ಬಳಿ ಅಥವಾ ಆನ್‌ಲೈನ್ ಕೇಂದ್ರಗಳಿಗೆ ಭೇಟಿ ನೀಡಿ ಜಮೀನಿನ ಪಹಣಿ, ಆಧಾರ ಕಾರ್ಡ, ಬ್ಯಾಂಕ್ ಖಾತೆ ಪ್ರತಿ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Suddi Belaku