ಡಾ.ಎಸ್.ನಂಜುಡಯ್ಯ ಗೆ ಬುಕ್ ಆಫ್ ರೆಕಾರ್ಡ್ಸ್ ಪ್ರಶಸ್ತಿ

Posted by

ಸುದ್ದಿ ಬೆಳಕು ವಾರ್ತೆ

ಯಳಂದೂರು : ತಾಲೂಕಿನ ಶಿವಕಳ್ಳಿ ಗ್ರಾಮದ ನಿವಾಸಿ ಪ್ರಸ್ತುತ ಹನೂರು ಪಟ್ಟಣದ ಜಿ.ವಿ. ಗೌಡ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಗಣಿತಶಾಸ್ತçದ ಉಪನ್ಯಾಸಕ ಡಾ.ಎಸ್. ನಂಜುAಡಯ್ಯರವರಿಗೆ ಶಿಕ್ಷಣ, ಸಮಾಜ ಸೇವೆ, ಸಾಂಸ್ಕೃತಿಕ ಹಾಗೂ ಬುದ್ಧನ ತತ್ವಸಿದ್ಧಾಂತಗಳ ಬಗ್ಗೆ ಪ್ರಚುರ ಪಡಿಸುತ್ತಿರುವುದರಿಂದ ಯೂರೋಪಿಯನ್ ಬುಕ್ ಆಪ್ ಗ್ಲೋಬಲ್ ರೆಕಾರ್ಡ್ಸ್ ಪ್ರಶಸ್ತಿಯೂ ಸೇರಿದಂತೆ ಐದು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿದೆ.
ಸೆ.19 ರಂದು ತಮಿಳುನಾಡಿನ ಪಾಂಡಿಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ವರ್ತಿ ವೆಲ್‌ನೆಸ್ ಫೌಂಡೇಷನ್ ಟ್ರಸ್ಟ್ ವತಿಯಿಂದ ಪ್ರಶಸ್ತಿ ಪತ್ರ, ಓರಿಯಂಟಲ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್, ಗ್ಲೋಬಲ್ ಮೆರಿಟ್ ರೆಕಾರ್ಡ್ಸ್ನ ಪ್ರಶಸ್ತಿಗಳೂ ಕೂಡ ಲಭಿಸಿದವು.
ವೃತ್ತಿಯಲ್ಲಿ ಉಪನ್ಯಾಸಕರಾಗಿದ್ದರೂ ಸಹ ಇವರು ಶಿಕ್ಷಣ, ಕ್ರೀಡೆ, ಕಲೆ, ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಮೆರಿಕನ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿ ಪಡೆದಿರುವ ಇವರು ಶಿಕ್ಷಣ, ಸಾಹಿತ್ಯ, ಕಲಾ, ಸಾಮಾಜಿಕ ಕ್ಷೇತ್ರದಲ್ಲಿ ಅದ್ವೀತಿಯ ಸಾಧನೆ ಮಾಡಿದ್ದಾರೆ. ಬುದ್ಧರ ಬಗ್ಗೆ ಅಪಾರ ಜ್ಞಾನ ಪಡೆದುಕೊಂಡಿರುವ ಇವರು, ಕ್ರೀಡಾ ಮಾರ್ಗದರ್ಶಕರಾಗಿ ಕೆಎಎಸ್, ಸಿಇಟಿ, ನವೋದಯ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಇವರು ಉಚಿತವಾಗಿ ಮಾರ್ಗದರ್ಶಕ ಶಿಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕ್ರೀಡಾ ಮಾರ್ಗದರ್ಶಕರಾಗಿ, ಶ್ರೀ ಸಿದ್ಧಪ್ಪಾಜಿ ಪವಾಡಗಳು ಮತ್ತು ಶ್ರೀ ಮಹದೇಶ್ವರ ಮಹಿಮೆ ಎಂಬ ಕಿರುಚಿತ್ರಗಳಲ್ಲೂ ನಟಿಸಿದ್ದಾರೆ. ಇವರಿಗೆ ಅಂತರರಾಷ್ಟಿçÃಯ ಸೇವಾ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತ, ರಾಜ್ಯ ಮಟ್ಟದ ಸೇವಾ ರತ್ನ ಪ್ರಶಸ್ತಿ, ಕರುನಾಡ ಸೇವಾ ಪ್ರಶಸ್ತಿ, ಭೀಮ ಲೋಕ ಪ್ರಶಸ್ತಿ, ಕರೋಕೆ ಪ್ರಶಸ್ತಿ ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಈಗ ಅಂತರರಾಷ್ಟಿçÃಯ ಮಟ್ಟದ ಪ್ರಶಸ್ತಿ ಲಭಿಸಿರುವುದು ನನಗೆ ಅತೀವ ಸಂತಸ ತಂದಿದ್ದು ನನ್ನ ಸೇವೆಯನ್ನು ಇನ್ನಷ್ಟು ಉತ್ತಮ ಪಡಿಸಿಕೊಳ್ಳಲು ಯತ್ನಿಸುತ್ತೇನೆ ಎಂದು ಇವರು ಹೇಳಿದರು.
ಈ ಸಂದರ್ಭದಲ್ಲಿ ಡಾ. ಜೆ. ಹರ್ಡಿಸೋಸ್, ಗುಣಶೇಖರನ್, ಶ್ರಿ ಶಿವರಾಜಾಆಚಾರ್, ಡಾ. ರಾಮಲಕ್ಷಿö್ಮ ಚೆಪ್ಪಲ್ಲ, ಡಾ.ಡಿ. ರಾಮಯ್ಯ, ಡಾ. ಅರುಣ್ ಚಿನ್ನದೊರೈ ಸೇರಿದಂತೆ ಹಲವರು ಇದ್ದರು.

You Might Also Like

Leave a Reply

Your email address will not be published. Required fields are marked *

Suddi Belaku