by
Category: ಕಲಬುರಗಿ

ಕುಲಕುಂದಿಯಲ್ಲಿ ಸಂಭ್ರಮದ 71ನೇ ಕನ್ನಡ ರಾಜ್ಯೋತ್ಸವ ಆಚರಣೆ
ಸುದ್ದಿ ಬೆಳಕು ವಾರ್ತೆ ಚಿತ್ತಾಪುರ : ತಾಲೂಕಿನ ನಾಲವಾರ ವಲಯ ಹೋಬಳಿ ವ್ಯಾಪ್ತಿಯ ಕುಲಕುಂದಿ ಗ್ರಾಮದಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ನಾಲವಾರ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಂಜುನಾಥ ಎಸ್. ನಾಯ್ಕಲ್ ಮಾತನಾಡಿ, ನಾಡು, ನುಡಿ, ಭಾಷೆ ಹಾಗೂ ಜಲವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದು ಹೇಳಿದರು. ಕನ್ನಡ ಭಾಷೆಯ ಉಳಿವು…

ಸೇಡಂ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ದಸರಾ ಉತ್ಸವಕ್ಕೆ ಚಾಲನೆ
ಸುದ್ದಿ ಬೆಳಕು ವಾರ್ತೆ ಸೇಡಂ : ದಸರಾ ಹಬ್ಬ ಎಂದರೆ ಅಸತ್ಯದ ವಿರುದ್ಧ ಸತ್ಯದ ಜಯ, ದಸರಾ ಹಬ್ಬ ನವರಾತ್ರಿಗಳ ಸಂಭ್ರಮದಿಂದ ಕೂಡಿರುತ್ತದೆ ಎಂದು ರಾಜ್ಯ ಕೃಷಿಕ ಸಮಾಜದ ನಿರ್ದೇಶಕ ಬಸವರಾಜ ಪಾಟೀಲ ಊಡಗಿ ಅಭಿಪ್ರಾಯಪಟ್ಟರು. ನಗರದ ಶ್ರೀ ಪಂಚಲಿಂಗೇಶ್ವರ ಶಾಂಭವಿ ರಂಗ ಮಂಟಪದಲ್ಲಿ 45ನೇ ವರ್ಷದ ದಸರಾ ಉತ್ಸವ ಉದ್ಘಾಟಿಸಿ ಮಾತನಾಡಿದ, ಅವರು ಅನಾದಿಕಾಲದಿಂದಲೂ ರಕ್ಕಸರನ್ನು ಸದೆ ಬಡಿದು ದೇವಿ ನವರಾತ್ರಿಗಳ ಅವತಾರ ತಾಳಿ ಜಗತ್ತಿನ ಉದ್ಧರಿಸಿದ ದುರ್ಗಾ ಮಾತೆಯ ಆರಾಧನೆ ಮನೆ, ಮನಗಳಲ್ಲಿ ಬೆಳಗಲಿದೆ…
by

ಮೈಸೂರು ದಸರಾ ಯುವ ಕವಿಗೋಷ್ಠಿಗೆ ವಿಜಯಭಾಸ್ಕರ ರೆಡ್ಡಿ ಆಯ್ಕೆ
ಸುದ್ದಿ ಬೆಳಕು ವಾರ್ತೆ ಸೇಡಂ : ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ನಡೆಯಲಿರುವ ಯುವ ಕವಿಗೋಷ್ಠಿ–2026ಕ್ಕೆ ಯುವ ಕವಿ ವಿಜಯಭಾಸ್ಕರರೆಡ್ಡಿ ಅವರು ಆಯ್ಕೆಯಾಗಿದ್ದಾರೆ ಎಂದು ಯುವ ಕವಿಗೋಷ್ಠಿ ಆಯ್ಕೆ ಸಮಿತಿ ಮುಖ್ಯಸ್ಥರು ತಿಳಿಸಿದ್ದಾರೆ. ಅಕ್ಟೋಬರ್ 14ರಂದು ಬೆಳಿಗ್ಗೆ 10.30ಕ್ಕೆ ಮೈಸೂರಿನ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಯುವ ಕವಿಗೋಷ್ಠಿ ನಡೆಯಲಿದೆ. ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಈ ಪ್ರತಿಷ್ಠಿತ ಯುವ ಕವಿಗೋಷ್ಠಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಯ್ಕೆಯಾಗಿರುವ ಯುವ ಕವಿಗಳು ತಮ್ಮ ಕವನಗಳನ್ನು…
by

ಕಲಬುರಗಿಯಲ್ಲಿ ‘ಬಸವಾದಿ ಶಿವಶರಣರ ಬೃಹತ್ ಸಮಾವೇಶ’: ಹಡಪದ ಅಪ್ಪಣ್ಣ ಸಮಾಜದ ನಿಲುವು ಸ್ಪಷ್ಟ
ಸುದ್ದಿ ಬೆಳಕು ವಾರ್ತೆ ಕಲಬುರಗಿ : ಮಹಾರಾಷ್ಟ್ರದ ಕನ್ನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿಯವರ ನೇತೃತ್ವದಲ್ಲಿ ಸೆ.27ರಂದು ನಗರದ ನೂತನ ವಿದ್ಯಾಲಯ ಮೈದಾನ (ಎಸ್.ವಿ. ಶರಣಬಸವೇಶ್ವರ ಮೈದಾನ)ದಲ್ಲಿ ಸಂಜೆ 4 ಗಂಟೆಗೆ ನಡೆಯಲಿರುವ **‘ಬಸವಾದಿ ಶಿವಶರಣರ ಬೃಹತ್ ಸಮಾವೇಶ’**ಕ್ಕೆ ಸಂಬಂಧಿಸಿದಂತೆ ವಿವಿಧ ವಲಯಗಳಲ್ಲಿ ವ್ಯಕ್ತವಾಗಿರುವ ಭಿನ್ನಾಭಿಪ್ರಾಯಗಳ ಕುರಿತು ಕಲಬುರಗಿ ಜಿಲ್ಲಾ ಹಡಪದ ಅಪ್ಪಣ್ಣ ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಾಯಕ ಸಮಾಜಗಳ ಒಕ್ಕೂಟದ ರಾಜ್ಯಾಧ್ಯಕ್ಷ ಭೀಮಣ್ಣ ಬೋನಾಳ ಅವರು ಪತ್ರಿಕಾ ಹೇಳಿಕೆಯಲ್ಲಿ ಸಣ್ಣ…
by

ಶಹಾಬಾದದಲ್ಲಿ ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪ: ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ವಿಶೇಷ ಪೂಜೆ
ಸುದ್ದಿ ಬೆಳಕು ವಾರ್ತೆ ಶಹಾಬಾದ : ನಗರದ ಬಸವೇಶ್ವರ ನಗರದಲ್ಲಿರುವ ಶರಣ ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮಗಳ ಮುಕ್ತಾಯ ಸಮಾರಂಭವನ್ನು ಕಾಂಡ (ಬಿಲ್ವಪತ್ರೆ) ಇಳಿಸುವ ಮೂಲಕ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಚಿತ್ತಾಪುರದ ಕಂಬಳೇಶ್ವರ ಮಠದ ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ನಾಡಿನಲ್ಲಿ ಉತ್ತಮ ಮಳೆಯಾಗಿ ರೈತರ ಸಂಕಷ್ಟಗಳು ದೂರವಾಗಲಿ. ರೈತರ ಶಕ್ತಿಯಾದ ಎತ್ತುಗಳು ಸೇರಿದಂತೆ ನಾಡಿನ ಜನತೆ ಎದುರಿಸುತ್ತಿರುವ ಎಲ್ಲ ಸಂಕಷ್ಟಗಳು…
by












