ಚಿತ್ತಾಪುರ : ತಾಲೂಕಿನ ನಾಲವಾರ ವಲಯ ಹೋಬಳಿ ವ್ಯಾಪ್ತಿಯ ಕುಲಕುಂದಿ ಗ್ರಾಮದಲ್ಲಿ 71ನೇ ಕನ್ನಡ ರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ, ಕನ್ನಡ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ನಾಲವಾರ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಅಂಜುನಾಥ ಎಸ್. ನಾಯ್ಕಲ್ ಮಾತನಾಡಿ, ನಾಡು, ನುಡಿ, ಭಾಷೆ ಹಾಗೂ ಜಲವನ್ನು ಸಂರಕ್ಷಿಸುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಕನ್ನಡ ಭಾಷೆಯ ಉಳಿವು ಮತ್ತು ಬೆಳವಣಿಗೆಗಾಗಿ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು. ಕನ್ನಡ ನಾಡು-ನುಡಿಯ ಬಗ್ಗೆ ಪ್ರತಿಯೊಬ್ಬರೂ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಮೌನೇಶ ಆಚಾರಿ ಮಾತನಾಡಿ, ಮಕ್ಕಳಲ್ಲಿ ಸಾಹಿತ್ಯದ ಬಗ್ಗೆ ಆಸಕ್ತಿ ಹಾಗೂ ಅಭಿರುಚಿ ಬೆಳೆಸುವ ಅಗತ್ಯವಿದೆ. ಮಕ್ಕಳನ್ನು ವಿವಿಧ ಸಾಹಿತ್ಯಿಕ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ಕನ್ನಡ ಭಾಷೆ ಮತ್ತು ಸಾಹಿತ್ಯದ ಕುರಿತು ಹೆಚ್ಚಿನ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕರವೇ ಅಧ್ಯಕ್ಷ ಸಾಬಣ್ಣ ಹೊನಭಾ, ಕರವೇ ಉಪಾಧ್ಯಕ್ಷ ಸಿದ್ದೇಶ್ ಸ್ವಾಮಿ, ವಲಯ ಘಟಕ ಅಧ್ಯಕ್ಷ ಹಯ್ಯಳಿ ಪೂಜಾರಿ, ಬಸ್ಸು ರೆಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ಮಲ್ಲು ಸ್ವಾಮಿ, ಕೂಲಿ ಸಮಾಜ ಅಧ್ಯಕ್ಷ ಜಂಭುಲಿಂಗ, ಬಸ್ಸು ಕಾರಿ, ವೀರೇಶ್ ಹಡಪದ, ಪ್ರಭು ತಳವಾರ್, ಭೀಮು ಕಾರಿ, ಸಂಜು ಕಾರಿ, ಸಿದ್ದು ಸ್ವಾಮಿ, ಶಾಂತಪ್ಪ ಹೋರುಂಚಿ, ಮಲ್ಲಪ್ಪ ಹೋರುಂಚಿ, ನಾಗಪ್ಪ ಪೂಜಾರಿ, ಶಂಕರ ಗವಾಯಿ, ಕಾಸ್ಮೀಸಾಬ್ ನಾಯಿಕೋಡಿ, ಅಯ್ಯಪ್ಪ ಹೋನಭಾ, ಬಾಬು ಪೂಜಾರಿ, ಬಸು ಮಡಿವಾಳ, ಸತೀಶ್ ಕ್ರಿಶ್ಚಿಯನ್, ಸಿದ್ದಲಿಂಗ ನರಬೋಳಿ, ಸಂತೋಷ್ ಸರ್, ಶಾಂಭವಿ ಟೀಚರ್, ಸಂಪ್ರೀತ್ ಬಡಿಗೇರ್, ಶಾಂತು ಮಡಿವಾಳ, ಮೌನೇಶ, ಸಿದ್ದಪ್ಪ ದನಕಾಯಿ, ಸುಭಾಷ್ ಹೊನಭಾ, ಮಲ್ಲಣ್ಣ ಹಲಕಟ್ಟಿ, ವಿರೇಶ ಹೊನಭಾ ಜೋಗಿ ಸೇರಿದಂತೆ ಗ್ರಾಮಸ್ಥರು, ವಿದ್ಯಾರ್ಥಿಗಳು ಹಾಗೂ ಕನ್ನಡ ಮನಸ್ಸುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವು ಕನ್ನಡ ನಾಡು-ನುಡಿಯ ಅಭಿಮಾನ ಹಾಗೂ ಕನ್ನಡದ ಸಂಭ್ರಮವನ್ನು ಸಾರುವ ರೀತಿಯಲ್ಲಿ ಯಶಸ್ವಿಯಾಗಿ ನಡೆಯಿತು ಎಂದು ನಾಲವಾರ ವಲಯ ಘಟಕ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Leave a Reply