ಭೀಮಾ ನದಿಯಲ್ಲಿ ಮುಳುಗಿ ಮೀನುಗಾರ ಸಾವು: ಕುಟುಂಬಕ್ಕೆ ಶಾಸಕ ತುನ್ನೂರ್ ಸಾಂತ್ವನ

Posted by

ಸುದ್ದಿ ಬೆಳಕು ವಾರ್ತೆ

​ಯಾದಗಿರಿ: ತಾಲೂಕಿನ ತಳಕ ಗ್ರಾಮದ ಮೀನುಗಾರ ಹಣಮಂತ ಚಂದಪ್ಪ ಸಗರ ಅವರು ಇತ್ತೀಚೆಗೆ ಭೀಮಾ ನದಿಯಲ್ಲಿ ಬಿದ್ದು ಅಕಾಲಿಕ ಮರಣ ಹೊಂದಿದ ಹಿನ್ನೆಲೆಯಲ್ಲಿ, ಯಾದಗಿರಿ ಕ್ಷೇತ್ರದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರು ಮೃತರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

​ಘಟನೆಯಿಂದ ತೀವ್ರ ಆಘಾತಕ್ಕೊಳಗಾಗಿರುವ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದ ಶಾಸಕರು, ಹಣಮಂತ ಅವರ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದರು.

ಮೀನುಗಾರಿಕೆಗೆ ತೆರಳಿದ್ದಾಗ ಸಂಭವಿಸಿದ ಈ ದುರ್ಘಟನೆ ನಿಜಕ್ಕೂ ಬೇಸರ ತಂದಿದೆ ಎಂದು ವಿಷಾದಿಸಿದರು. ಕುಟುಂಬದ ಆಧಾರಸ್ತಂಭವನ್ನು ಕಳೆದುಕೊಂಡಿರುವ ಸಗರ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಎಲ್ಲಾ ರೀತಿಯ ಕಾನೂನುಬದ್ಧ ಪರಿಹಾರ ಹಾಗೂ ಸೌಲಭ್ಯಗಳನ್ನು ಶೀಘ್ರವಾಗಿ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಇದೇ ವೇಳೆ ಕುಟುಂಬಸ್ಥರಿಗೆ ಭರವಸೆ ನೀಡಿದರು.

​ಈ ಸಂದರ್ಭದಲ್ಲಿ ಸಮಾಜಿಕ ಹೋರಾಟಗಾರ ಉಮೇಶ ಮುದ್ನಾಳ ಗ್ರಾಮದ ಪ್ರಮುಖರು, ಸ್ಥಳೀಯ ಮುಖಂಡರು ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku