
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಶಾಲಾ ಕೋಣೆ ಮತ್ತು ಕಂಪೌಂಡ ಕಟ್ಟಡದ ಕಾಮಗಾರಿ ಗುಣಮಟ್ಟದಲ್ಲಿ ಮಾಡುವಂತೆಯೇ ಯಾದಗಿರಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಜನಪ್ರೀಯ ಶಾಸಕರಾದ
ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರ ನುಡಿದರು.
ವಡಗೇರಾ ತಾಲೂಕಿನ ಅನವಾರದಲ್ಲಿ ಕೆಕೆಆರ್ ಡಿಬಿಯಿಂದ ನಿರ್ಮಿತಿ ಕೇಂದ್ರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೊಣೆ ನಿರ್ಮಾಣ, ಕಂಪೌಡ ನಿರ್ಮಾಣ ಕೆಲಸಕ್ಕೆ ಗುದ್ದಲಿ ಪೂಜೆ ಮಾಡಿ ಮತ್ತು ಗ್ರಾಮದಲ್ಲಿ ನಿರ್ಮಿಸಿದ ತಂಗುದಾಣ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಶಾಸಕರು ಮಾತನಾಡಿದರು.
ಈ ಶಾಲೆಗೆ ಇನ್ನೂ ಬೇಕಾದರೂ ವ್ಯವಸ್ಥೆ ಮಾಡಲಾಗುವುದು. ಊರಿನ ಸಮಸ್ಯೆಗಳಿಗೂ ಪರಿಹಾರ ಒದಗಿಸಲಾಗುವುದೆಂದು ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರ ಹೇಳಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಮರೆಪ್ಪ ಬಿಳ್ಹಾರ, ಪಂಚಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ವಡಗೇರಾ ತಾಲೂಕು ಘಟಕದ ಅಧ್ಯಕ್ಷ ಮೈನೋದ್ದಿನ್ ಮಿರ್ಚಿ, ನಿರ್ಮಿತಿ ಕೇಂದ್ರ ಅಧಿಕಾರಿ ಮಂಜುನಾಥ ಹಾಗೂ ಗ್ರಾಮದ ಕಾಂಗ್ರೆಸ್ ಮುಖಂಡರು, ಗ್ರಾಮಸ್ಥರು ಇದ್ದರು.












Leave a Reply