ಗೊರಬಾಳ ಗಣೇಶೋತ್ಸವಕ್ಕೆ ವಿಶೇಷ ಚೇತನ ವಿದ್ಯಾರ್ಥಿಗಳ ಭೇಟಿ: ಸನ್ನೆಗಳ ಮೂಲಕ ಸಂತಸ ವ್ಯಕ್ತಪಡಿಸಿದ ಮಕ್ಕಳು

Posted by

ಸುದ್ದಿ ಬೆಳಕು ವಾರ್ತೆ

ಇಳಕಲ್ : ಸಮೀಪದ ಗೊರಬಾಳ ಗ್ರಾಮದ ವಾರ್ಡ್ ನಂ.02ರ ಶ್ರೀ ಸಿದ್ಧಿ ವಿನಾಯಕ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶನ ದರ್ಶನಕ್ಕೆ ಇಳಕಲ್‌ನ ಶ್ರೀ ಮುರುಗೇಂದ್ರ ಶಿವಾಚಾರ್ಯ ವಿಶೇಷ ಚೇತನ ಶಾಲೆಯ ಸುಮಾರು 50 ವಿದ್ಯಾರ್ಥಿ–ವಿದ್ಯಾರ್ಥಿನಿಯರು ಆಗಮಿಸಿ ಗಣೇಶನ ದರ್ಶನ ಪಡೆದರು.

ನಂತರ ಸನ್ನೆಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ ವಿಶೇಷ ಚೇತನ ವಿದ್ಯಾರ್ಥಿಗಳು, ಸಿದ್ಧಿ ವಿನಾಯಕ ಗೆಳೆಯರ ಬಳಗದವರು ತಮ್ಮನ್ನು ಆಹ್ವಾನಿಸಿ ಗಣೇಶನ ದರ್ಶನ ಮಾಡಿಸಿ, ಪ್ರಸಾದ ಉಣಬಡಿಸಿರುವುದು ತುಂಬಾ ಸಂತೋಷ ತಂದಿದೆ ಎಂದು ತಿಳಿಸಿದರು.

ವಿಶೇಷವಾಗಿ ಪ್ರಸಾದದಲ್ಲಿ ನೀಡಲಾಗಿದ್ದ ಜಿಲೇಬಿ ತುಂಬಾ ರುಚಿಯಾಗಿತ್ತು ಎಂದು ವಿದ್ಯಾರ್ಥಿಗಳು ಸನ್ನೆಗಳ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಮಕ್ಕಳ ಖುಷಿ ಕಂಡು ಬಳಗದ ಸದಸ್ಯರು ಹಾಗೂ ಕಾರ್ಯಕ್ರಮದಲ್ಲಿದ್ದವರು ಸಂತಸಪಟ್ಟರು.

ಈ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಾಗಣ್ಣ ಕತ್ತಿ, ಸಾಯಿ ತಪ್ಪಲದಡ್ಡಿ, ರವಿ ಲಕ್ಕುಂಡಿ, ಬಸವರಾಜ ಹೂನೂರ, ಚಂದ್ರು ಹೂಲಗೇರಿ ಸೇರಿದಂತೆ ಅನೇಕ ಯುವಕ ಮಿತ್ರರು ಉಪಸ್ಥಿತರಿದ್ದರು.

You Might Also Like

Leave a Reply

Your email address will not be published. Required fields are marked *

Suddi Belaku