ಯಾದಗಿರಿ ಬರ ಪಟ್ಟಿಗೆ ಉಳಿದ ತಾಲೂಕುಗಳ ಸೇರ್ಪಡೆ: ಶಾಸಕ ತುನ್ನೂರ ಭರವಸೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಸರ್ಕಾರದ ಬರ ಘೋಷಣೆಯ ನಿರ್ಧಾರದ ಬಗ್ಗೆ ರೈತರು ಯಾವದೇ ಆತಂಕ್ಕಕ್ಕೆ ಒಳಗಾಗಬಾರದು. ಮುಂದಿನ ೮-೧೦ ದಿನದಲ್ಲಿ ಬಿಟ್ಟು ಹೋಗಿರುವ ಇನ್ನುಳಿದ ತಾಲ್ಲೂಕಗಳನ್ನು ಬರ ಪಟ್ಟಿಗೆ ಸೇರ್ಪಡೆ ಮಾಡುವ ಭರವಸೆಯನ್ನು ಕಂದಾಯ ಸಚಿವರಾದ ಜಿ.ಪರಮೇಶ್ವರ ಅವರು ನೀಡಿದ್ದು, ಹಿಂದಿನ ಪಟ್ಟಿಯಲ್ಲಿ ಕೈಬಿಟ್ಟ ತಾಲೂಕುಗಳು ಬರ ಪೀಡಿತ ಎಂದು ಘೋಷಣೆಯಾಗಲಿವೆ ಎಂದು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದ್ದಾರೆ.

ಈ ಕುರಿತು ಪತ್ರಿಕೆ ಹೇಳಿಕೆ ನೀಡಿರುವ ಶಾಸಕರು, ಸೆ.೪ ಶುಕ್ರವಾರ ಕಂದಾಯ ಸಚಿವ ಜಿ.ಪರಮೇಶ್ವರ ಅವರನ್ನು ಖುದ್ದಾಗಿ ತುಮಕೂರಲ್ಲಿ ಭೇಟಿ ಮಾಡಿದ್ದೇನೆ. ಯಾದಗಿರಿ ಮತ್ತು ವಡಗೇರಾ ತಾಲ್ಲೂಕುಗಳ ವಾಸ್ತವ ಪರಿಸ್ಥಿತಿಯನ್ನು ವಿವರಿಸಿದ್ದೇನೆ.ಜಿಲ್ಲಾಡಳಿತವೂ ಬರ ಘೋಷಣೆಗೆ ಪೂರಕವಾದ ವರದಿ ನೀಡಿದೆ. ಎಲ್ಲಿಯೂ ಅಡ್ಡಿ ಆತಂಕಗಳಿಲ್ಲ. ಮುಂದಿನ ದಿನ ಗಳಲ್ಲಿ ಬರ ಘೊಷಣೆಯಾಗುವುದು ನಿಶ್ಚಿತ ಎಂದು ಹೇಳಿದ್ದಾರೆ.

ಬರ ಪರಿಸ್ಥಿತಿ ಜಿಲ್ಲೆಯಾದ್ಯಂತ ಆವರಿಸಿದೆ. ಜಿಲ್ಲೆಯ ೧ ತಾಲೂಕನ್ನು ಮಾತ್ರ ಬರಪೀಡಿತ ಎಂದು ಘೋಷಿಸಲಾಗಿದೆ.ಜಿಲ್ಲೆಯ ಇನ್ನುಳಿದ ತಾಲೂಕುಗಳ ಪರಿಸ್ಥಿತಿಯೂ ಭೀಕರವಾಗಿದೆ ಎಂಬ ವಿಷಯವನ್ನೂ ಕಂದಾಯ ಸಚಿವರೊಂದಿಗೆ ಸುದೀರ್ಘ ಚರ್ಚೆ ಮಾಡಿದ್ದೇನೆ. ಸಚಿವರು ಸ್ಥಳದಿಂದಲೇ ಮೊಬೈಲ್ ಮೂಲಕ ಸಂಬAಧಿಸಿದ ಹಿರಿಯ ಅಧಿಕಾರಿಗಳನ್ನು ಸಂಪ ರ್ಕಿಸಿ ವಾಸ್ತವಾಂಶ ಚರ್ಚಿಸಿದರು. ಶೀಘ್ರದಲ್ಲೇ ಇನ್ನುಳಿದ ತಾಲ್ಲೂಕಗಳನ್ನೂ ಬರ ಪೀಡಿತ ಪ್ರದೇಶಗಳೆಂದು ಘೊಷಣೆ ಮಾಡುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ರೈತರ ನೋವು ನಿವಾರಣೆಗೆ ಸರ್ಕಾರ ಮತ್ತು ಅಧಿಕಾರಿಗಳು ಒಗ್ಗಟ್ಟಾಗಿ ಕೆಲಸ ಮಾಡಬೇಕು. ಬರದ ನೈಜ ಪರಿಸ್ಥಿತಿಯನ್ನು ಕೇಂದ್ರ ಅಧ್ಯಯನ ತಂಡಕ್ಕೆ ಮನವರಿಕೆ ಮಾಡಿಕೊಡಲು ಕ್ರಮ ಕೈಗೊಳ್ಳಲಾಗುವುದು ಎಂದೂ ಕಂದಾಯ ಸಚಿವರು ಹೇಳಿದ್ದಾರೆ.ಮಳೆ ಕೊರತೆಯಿಂದ ರಾಜ್ಯ ಭೀಕರ ಬರ ಪರಿಸ್ಥಿತಿ ಎದುರಾಗಿದೆ ಎಂದಿದ್ದಾರೆ ಎಂದು ತಿಳಿಸಿದ್ದಾರೆ. ಬರದ ವಿಷಯದಲ್ಲೂ ರಾಜಕೀಯ ಮಾಡುವ ವಿಪಕ್ಷದವರ ಟೀಕೆಗಳಿಗೆ ಯಾರು ಕಿವಿಗೊಡಬಾರದು. ಡಿ.ಕೆ.ಶಿವಕಮಾರ ನೇತೃತ್ವದ ಸರ್ಕಾರ ರೈತರ ಪರವಾಗಿದೆ. ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಇಂದು ಸಿಎಂ ಅವರೂ ಕೂಡ ಕೆಲವು ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಶೀಘ್ರದಲ್ಲೇ ತಮ್ಮ ನಿರ್ಧಾರವನ್ನೂ ಪ್ರಕಟಿಸುತ್ತಾರೆ ಎಂದು ಶಾಸಕರು ತಿಳಿಸಿದ್ದಾರೆ.


ರಾಜ್ಯದ ರೈತರು ಸಂಕಷ್ಟದಲ್ಲಿರವ ಈ ಸಂದರ್ಭದಲ್ಲಿ ಬರ ಸೇರಿದಂತೆ ಜ್ವಲಂತ ಸಮಸ್ಯೆಗಳನ್ನು ಚರ್ಚಿಸಲು ಕಳೆದ ಅಧಿವೇಶನದಲ್ಲಿ ಅವಕಾಶ ಸಿಗಲಿಲ್ಲ. ಹಾಗಾಗಿ ಇದೇ ಸೆ.೨೧,೨೨ ಮತ್ತು ೨೩ ರಮದು ವಿಶೇಷ ಅಧಿವೇಶನ ಕರೆಯಲು ಗುರುವಾರ ನಡೆದ ಸಚಿವ ಸಮಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ರಾಜ್ಯದ ಅಭಿವೃದ್ಧಿಗಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ನಮ್ಮ ಸರ್ಕಾರ ಸದಾ ಬದ್ಧವಾಗಿದೆ ಎಂದು ಶಾಸಕ ತುನ್ನೂರ ಹೇಳಿದ್ದಾರೆ.


ನನಗೆ ವೈರಲ್ ಇನ್ಫೆಕ್ಷನ್ ಕಾರಣಕ್ಕೆ ಸಾರ್ವಜನಿಕ ಸಮಾರಂಬದಲ್ಲಿ ಪಾಲ್ಗೊಂಡಿಲ್ಲ ಎಂದು ಸ್ಪಷ್ಟ ಪಡಿಸಿರುವ ಶಾಸಕ ತುನ್ನೂರ ಅವರು, ಜನಪರ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬಂದಿರುವ ನಮ್ಮ ಸರ್ಕಾರ ಇದೀಗ ನೂತನ ಪ್ರಜಾಸೇವಾ ಇಲಾಖೆಯನ್ನು ಪ್ರಾರಂಭಿಸಿದೆ. ಪ್ರತಿ ತಿಂಗಳ ಮೊದಲ ಹಾಗೂ ಮೂರನೇ ಶನಿವಾರ ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ಆಯಾ ಜಿಲ್ಲಾ ಉಸ್ತುವಾರಿ ಸಚವರು ಹಾಗೂ ಶಾಸಕರ ಅಧ್ಯಕ್ಷತೆಯಲ್ಲ ಪ್ರಜಾಸೇವೆ ಆಂದೋಲನಾ ಸಭೆಗಳು ನಡೆಯಲಿದ್ದು ಜನರಿಂದ ಅಹವಾಲು ಸ್ವೀಕರಿಸಿ ಅರ್ಹ ಅರ್ಜಿಗಳಿಗೆ ಪರಿಹಾರ ಒದಗಿಸುವ ಜನಸೇವೆಯ ಹೊಸ ಅಧ್ಯಾಯ ಆರಂಭಕ್ಕೆ ಜನರ ಸಹಕಾರ ಅತ್ಯಗತ್ಯ ಎಂದಿದ್ದಾರೆ.

You Might Also Like

Leave a Reply

Your email address will not be published. Required fields are marked *

Suddi Belaku