
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ನಮ್ಮ ರಾಜ್ಯ, ರಾಷ್ಟ್ರದ ಪ್ರಗತಿಗೆ ಯುವ ಶಕ್ತಿಯ ಕೊಡುಗೆ ಅತ್ಯವಶ್ಯವಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಹಾಗೂ ಕಾಂಗ್ರೆಸ್ ಮುಖಂಡರಾದ ಶರಣಪ್ಪ ಮಾನೇಗಾರ ಅವರು ತಿಳಿಸಿದರು.
ಯಾದಗಿರಿ ತಾಲೂಕಿನ ಕಿಲ್ಲನಕೇರಾ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಿಲ್ಲನಕೇರಾ ಪ್ರಿಮಿಯರ್ ಲೀಗ್ ಸೀಸನ್ ನಾಲ್ಕರ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವಕರು ಈ ರಾಷ್ಟ್ರದ ಸಂಪತ್ತು ಅವರನ್ನು ಬೆನ್ನು ತಟ್ಟಿ ಬೆಂಬಲಿಸಿ ಪ್ರೋತ್ಸಾಹಿಸುವುದು ನಮ್ಮ ಆದ್ಯ ಕರ್ತವ್ಯ ಈ ನಿಟ್ಟಿನಲ್ಲಿ ಗುರುಮಠಕಲ್ ಮತಕ್ಷೇತ್ರದಲ್ಲಿ ಯುವಕರು ಮಾಡುವ ಪ್ರತಿಯೊಂದು ಸಮಾಜಮುಖಿ ಕೆಲಸ ಕಾರ್ಯಗಳಿಗೆ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಿಲ್ಲನಕೇರಾ ಗ್ರಾಮದ ಯುವಕರು ಉತ್ಸಾಹಿಗಳಾಗಿದ್ದು ಕ್ರೀಡೆಯಲ್ಲಿ ತುಂಬಾ ಆಸಕ್ತಿ ಹೊಂದಿದ್ದಾರೆ. ಈ ರಾಜ್ಯ ದೇಶ ಜಗತ್ತು ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಹಿರಿದು, ಇಂದು ಕಾರ್ಮಿಕರ ದಿನ, ಅದರಂತೆ ತಥಾಗತ ಬುದ್ಧ ಪೌರ್ಣಿಮೆ ಕೂಡ ಇಂದೇ ಇದೆ. ಇಂತಹ ಪವಿತ್ರ ದಿನದಲ್ಲಿ ಕೆಪಿಎಲ್ ಸೀಸನ್ 4ರ ಉದ್ಘಾಟನೆ ಉದ್ಘಾಟನೆ ಮಾಡಿದ್ದು ನಮ್ಮ ಪುಣ್ಯ ಅವಕಾಶ ಕಲ್ಪಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಕ್ರೀಡೆ ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಪರಸ್ಪರ ಪರಿಚಯ ಪ್ರೀತಿ, ವಿಶ್ವಾಸ ಮತ್ತು ಸೌಹಾರ್ದತೆ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಕ್ರೀಡಾಪಟುಗಳು ಯಾವುದೇ ರೀತಿಯ ಅನವಶ್ಯಕ ಗೊಂದಲಗಳಿಗೆ ಅವಕಾಶ ನೀಡದೆ ಕ್ರೀಡಾ ನಿಯಮಗಳಿಗೆ ಬದ್ಧರಾಗಿರಬೇಕು ಎಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯ ಚಂದ್ರಶೇಖರ ವಾರದ, ಮಾಜಿ ಬ್ಲಾಕ್ ಕಾಂಗ್ರೆಸ್ ವಿಶ್ವನಾಥ ನೀಲಹಳ್ಳಿ, ಅನಿಲಕುಮಾರ ಹೆಡಗಿಮದ್ರಾ, ಬಂದಪ್ಪಗೌಡ ಲಿಂಗೇರಿ, ವೀರಯ್ಯ ಸ್ವಾಮಿ ಹೀರೆನೂರ್, ಅಮೀನರೆಡ್ಡಿ ಗೌಡಗೇರಾ, ರಘುಪತಿ ಗೌಡಗೇರಾ, ವೆಂಕಟೇಶ ಕೂಡಲೂರು ವಿಜಯಮಲ್ಯ, ಕೋಲಿ ಸಮಾಜ ಸೈದಾಪೂರ ವಲಯ ಅಧ್ಯಕ್ಷ ರಮೇಶ ಭೀಮನಳ್ಳಿ, ರಾಮಣ್ಣ ಗೌಡಗೇರಾ, ಮರೆಪ್ಪ ಗೌಡಗೇರಾ, ಅಂಬಣ್ಣ ಗೌಡಗೇರಾ, ಮರೆಪ್ಪ ಗೌಡಗೇರಾ, ಸಾಹೇಬಗೌಡ ಗೌಡಗೇರಾ, ಜೈರಾಮ್ ಗೌಡಗೇರಾ ತಾಂಡ, ಹಣಮಂತ ದೊಡ್ಮನಿ, ದೇವಪ್ಪಗೌಡ, ಜಗದೀಶ ಸಜ್ಜನ್, ಈರಣ್ಣಗೌಡ ಯರಗೋಳ, ವಿರೇಶ ಸಜ್ಜನ್, ವಿಜಯ ಕಂದಳ್ಳಿ,ಆಂಜನೇಯ ರಾಂಪೂರ, ವೆಂಕಟೇಶ ಕೂಡಲೂರು, ಸಿದ್ದಪ್ಪಗೌಡ, ರಾಜುಗೌಡ, ವೆಂಕಟೇಶ ಯಾದವ್ ಬದ್ದೆಪಲ್ಲಿ, ವಿನಯ್ ರ‌್ಯಾಕ್, ಭೀಮರೆಡ್ಡಿ ಶೆಟ್ಟಿಗೇರಾ,ಮಲ್ಲಿಕಾರ್ಜುನ ಮಾಲಿ ಪಾಟೀಲ, ಅಬ್ದುಲ್ ಅತ್ತಾರ್, ಬನ್ನಪ್ಪ ಬಾವೂರ ಮಸಾಲಿ, ಶಿವಶರಣ ವಕೀಲರು ಯಾದಗಿರಿ, ವೆಂಕಟೇಶ ಅಗಸಿಮುಂದಳ್, ಭೀಮರಾಯ ಧೋತ್ರೆ, ಹುಸೇನ್ ಫೈಲ್, ಹಣಮಂತ ಬಾವೂರ ನೀಲಿ, ಬಸವರಾಜ ಗ್ಯಾರೇಜ್, ಪಿಲಿಂಗ ಅಂಬಿಗೇರ್ ಬಾವೂರ, ಪವನ ದಳಪತಿ, ಭೀಮರಾಯ ಟೆಂಗಿನಗಿಡ, ಯಂಕಪ್ಪ ಟ್ಯಾಕ್ಟರ್, ಆಯೋಜಕರಾದ ಬೀರಲಿಂಗಪ್ಪ ಕಿಲ್ಲನಕೇರಾ, ಸೈದಪ್ಪ ಬಾಂಬೆ ಗೌಡಗೇರಾ, ಉಮೇಶ ಧೋತ್ರೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
- ಹಾರ ತುರಾಯಿಗೆ ಗುಡ್ ಬೈ..!
ಕಿಲ್ಲನಕೇರಾ ಗ್ರಾಮದಲ್ಲಿ ಶುಕ್ರವಾರ ಆಯೋಜನೆ ಮಾಡಿದ್ದ ಕೆಪಿಎಲ್ ಸೀಸನ್ -4ರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಗಣ್ಯರಿಗೆ ಹಾರ ತುರಾಯಿ ಬದಲಿಗೆ ಜಗಜ್ಯೋತಿ ಬಸವಣ್ಣನವರ ಪುಸ್ತಕ ಹಾಗೂ ಗುಲಾಬಿ ಹೂ ವನ್ನು ಕೈಯಲ್ಲಿಟ್ಟು ಗೌರವಿಸಲಾಯಿತು. ಇದಲ್ಲದೆ ಹಾರ ತುರಾಯಿಗೆ ಖರ್ಚು ಮಾಡಬೇಕಿದ್ದ ಹಣವನ್ನು ಗ್ರಾಮದ ಆಶಕ್ತ ವ್ಯಕ್ತಿ ಖಾಸಿಂ ಅವರಿಗೆ ಆರ್ಥಿಕ ನೆರವು ನೀಡುವ ಮೂಲಕ ಸಾರ್ಥಕತೆ ಮೆರೆಯಲಾಯಿತು. ಕ್ರೀಡಾಕೂಟ ಸಂಘಟಕರ ಕಾರ್ಯಕ್ಕೆ ಕಾಂಗ್ರೆಸ್ ಹಿರಿಯ ಮುಖಂಡರಾದ ಶರಣಪ್ಪ ಮಾನೇಗಾರ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.










Leave a Reply