ಸುದ್ದಿ ಬೆಳಕು ವಾರ್ತೆ
ಯಳಂದೂರು : ಗೌರಿ ಗಣೇಶಹಬ್ಬದ ನಿಮಿತ್ತ ಭಾನುವಾರ ಪಟ್ಟಣದ ಸಂತೆಮೈದಾನ, ಹಳೇ ಅಂಚೆ ಕಚೇರಿ ರಸ್ತೆ, ಸೊಸೈಟಿ ಬೀದಿ, ದೊಡ್ಡಅಂಗಡಿ ಬೀದಿಯಲ್ಲೂ ಸಂತೆ ಕಟ್ಟಿದ್ದು ವಿಶೇಷವಾಗಿತ್ತು. ಖರೀದಿದಾರರು ಮುಗಿಬಿದ್ದು ಹಬ್ಬದ ಖರೀದಿಯಲ್ಲಿ ತೊಡಗಿದ್ದರು.
ತರಕಾರಿ, ಹಣ್ಣು, ಕಾಯಿ, ಬಾಳೆ ಎಲೆ, ಮಾವಿನಸೊಪ್ಪು ಸೇರಿದಂತೆ ಪೂಜಾ ಸಾಮಾಗ್ರಿಗಳ ಖರೀದಿ ಜೋರಾಗಿತ್ತು. ಹೂವಿನ ಬೆಳೆ ಹೆಚ್ಚಿದ್ದರೂ ಬೇಡಿಕೆ ಅಪಾರವಾಗಿದ್ದರಿಂದ ಹೂವು ಹಾಗೂ ಹಾರಗಳ ಖರೀದಿಯ ಭರಾಟೆಯೂ ಹೆಚ್ಚಾಗಿತ್ತು. ಪಟ್ಟಣದಲ್ಲಿ
ಸಂಚಾರÀ ದಟ್ಟಣೆ: ಸಂತೆ ಹಳೇ ಅಂಚೆ ಕಚೇರಿಯ ರಸ್ತೆಯಲ್ಲಿ ಇದ್ದರಿಂದ ಈ ರಸ್ತೆ ವಾಹನ ಸಂಚಾರಕ್ಕೆ ತಾತ್ಕಾಲಿಕವಾಗಿ ಬಂದ್ ಆಗಿತ್ತು. ಹಾಗಾಗಿ ದೊಡ್ಡ ಅಂಗಡಿ ಬೀದಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಇದೇ ರಸ್ತೆಯಲ್ಲಿ ಬಳೇಪೇಟೆ, ಬಿಳಿಗಿರಿರಂಗನಬೆಟ್ಟ, ಕಾಗಲವಾಡಿ ಮಾರ್ಗವಾಗಿ ಚಾಮರಾಜನಗರಕ್ಕೆ ತೆರಳುವ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಗಣೇಶ ಮೂರ್ತಿಗಳ ಮಾರಾಟ ಮಳಿಗೆಗಳಲ್ಲೂ ಕೂಡ ವ್ಯಾಪಾರದ ಭರಾಟೆ ಜೋರಾಗಿತ್ತು. ತರಕಾರಿ ಕಾಲಿಪಲ್ಯಗಳನ್ನು ಖರೀದಿಯೂ ಜೋರಾಗಿತ್ತು.














Leave a Reply