ಜೀವ ಬಲಿ ಪಡೆದ ನಂತರ ವಿದ್ಯುತ್ ಪರಿವರ್ತಕ ಸ್ಥಳಾಂತರ ಮಾಡುತ್ತೀರಾ? ಭೀಮುನಾಯಕ ಆಕ್ರೋಶ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ನಗರದ ವನಕೇರಿ ಲೇಔಟ್ ಎದುರಿಗೆ ಗ್ರಾಮೀಣ ಪೊಲೀಸ್ ಠಾಣೆ ಹತ್ತಿರ ಪಾದಚಾರಿ ರಸ್ತೆ ಮೇಲೆ ಬಲಿಗಾಗಿ ಬಾಯಿ ತೆರೆದುನಿಂತಿರುವ ವಿದ್ಯುತ್ ಪರಿವರ್ತಕ ಕೂಡಲೇ ಸ್ಥಳಾಂತರಿಸುವAತೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಈ ಕುರಿತು ಹೇಳಿಕೆ ನೀಡಿರುವ ಕರವೇ ಜಿಲ್ಲಾಧ್ಯಕ್ಷ ಟಿಎನ್ ಭೀಮುನಾಯಕ, ನಗರದ ಪ್ರಮುಖ ರಸ್ತೆಯಲ್ಲಿ ಪಾದಚಾರಿ ರಸ್ತೆಯ ಮೆಲೆ ಬಲಿ ಪಡೆಯಲೆಂದೇ ನಿಂತAತೆ ಭಾಸವಾಗುತ್ತಿದ್ದರೂ ಸಂಬAಧಿಸಿದ ಇಲಾಖೆಯವರು ನಿತ್ಯ ಇದೇ ರಸ್ತೆಯ ಹಾದು ಹೋಗುತ್ತಿದ್ದರೂ ಇದಕ್ಕೂ ತಮಗೂ ಸಂಬAಧವೇ ಇಲ್ಲದಂತೆ ಇರುವುದು ಸೋಜಿಗದ ಸಂಗತಿ.

ಚಿಕ್ಕ ಮಕ್ಕಳು ಪಶು ಪ್ರಾಣಿಗಳೂ ಸಹ ಇದರ ಸಮೀಪಕ್ಕೆ ತಿಳಿದೊ ತಿಳಿಯದೇ ಹೊದಲ್ಲಿ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಯಾವುದೇ ಸಾವು ನೋವು ಸಂಭವಿಸಿದ ಮೇಲೆಯೇ ಅಧಿಕಾರಿಗಳು ಸಿಬ್ಬಂದಿ ವರ್ಗ ಎಚ್ಚೆತ್ತುಕೊಳ್ಳುವಂತೆ ತೋರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಪಾಯಕಾರಿ ಸ್ಥಳದಲ್ಲಿರುವ ಪರಿವರ್ತಕಕ್ಕೆ ಸೂಕ್ತ ಬೇಲಿ ವ್ಯವಸ್ಥೆಯಾದರೂ ಮಾಡಬೇಕಿತ್ತು ಆದರೆ ಇದನ್ನು ಸಹ ಮಾಡದೇ ಇರುವುದು ಅಪಾಯಕ್ಕೆ ಆಹ್ವಾನ ನೀಡುತ್ತಿರುವಂತೆ ತೋರುತ್ತಿದೆ.
ವನಿಕೇರಿ ಲೇಔಟ್ ನಲ್ಲಿರುವ ತರಕಾರಿ ಮಾರುಕಟ್ಟೆಗೆ ಬೆಳಗ್ಗಿನ 2 ಗಂಟೆಯಿAದಲೇ ರೈತರು ವ್ಯಾಪಾರಿಗಳು ಕೆಲಸಗಾರರು ಬಂದುಹೋಗಿ ಮಾಡುತ್ತಿರುತ್ತಾರೆ ಅಲ್ಲದೇ ಬೆಳಗಿನ 5-6 ಗಂಟೆಯಿAದ ಅಬಾಲವೃದ್ದರಾದಿಯಾಗಿ ಮಹಿಳೆಯರು ಮಕ್ಕಳು ಎಲ್ಲರೂ ಬೆಳಗಿನ ವಾಯುವಿಹಾರಕ್ಕೆ ಇಲ್ಲಿಂದಲೇ ಹಾದುಹೋಗುವುದರಿಂದ ಅಪಾಯದ ಸಂಭವನೀಯತೆ ಇನ್ನು ಹೆಚ್ಚಾಗಿದೆ.

ಪಾದಚಾರಿ ರಸ್ತೆ ಮೇಲೆ ಟಿಸಿ ಇರುವುದರಿಂದ ಅಪಾಯದ ಪ್ರಮಾಣ ಇನ್ನು ಜಾಸ್ತಿ ಇರುವುದರಿಂದ ಕೂಡಲೇ ವಿದ್ಯುತ್ ಪರಿವರ್ತಕ ತೆರವು ಮಾಡುವುದೇ ಸೂಕ್ತವಾಗಿದೆ ಎಂದು ಅವರು ಹೇಳಿದ್ದಾರೆ.

ಕೂಡಲೇ ಸಂಬಂಧಪಟ್ಟ ಜೆಸ್ಕಾಂ ಅಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕು. ಇಲ್ಲವಾದಲ್ಲಿ ಮುಂದಾಗುವ ಜೀವಹಾನಿಗೆ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಹಾಗೂ ಇಲಾಖೆಯ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರವೇ ನಾಯಕರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಕರವೇ ಮುಖಂಡರಾದ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ಸಂತೋಷ ನಿರ್ಮಲಕರ್, ನಿಂಗಪ್ಪ ಗುಡಗುಡಿ, ಭೀಮಾಶಂಕರ ಹತ್ತಿಕುಣಿ, ಪ್ರಕಾಶ ಪಾಟೀಲ್ ಜೈಗ್ರಾಮ್, ಸಿದ್ದಪ್ಪ ಕೂಲೂರು, ಭೀಮರಾಯ ರಾಮಸಮುದ್ರ, ಸಿದ್ದಪ್ಪ ಕ್ಯಾಸಪ್ನಳ್ಳಿ, ಅಶೋಕ ನಾಯಕ ಹಾಗೂ ಬಸವರಾಜ ಜಗನ್ನಾಥ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku