ರಕ್ತದಾನ ಮಹಾದಾನ: ತಾಯಪ್ಪ ಯಾದವ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಯಾದವ ಸಮಾಜದ ಯಾದಗಿರಿ ಜಿಲ್ಲಾಧ್ಯಕ್ಷ ತಾಯಪ್ಪ ಯಾದವ ಅವರ ಜನ್ಮದಿನದ ಅಂಗವಾಗಿ ಮಂಗಳವಾರ ನಗರದ ಡಿಸಿ ಕಚೇರಿ ಸಮೀಪದ ಬನದೇಶ್ವರ ಟೈಲ್ ಮತ್ತು ಮಾರ್ಬಲ್ಸ್ ಏಜೆನ್ಸಿ ಆವರಣದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿ 20 ಮಂದಿ ರಕ್ತದಾನ ಮಾಡಿದರು.

‘ರಕ್ತದಾನ ಮಹಾದಾನ’ ಎಂಬ ಸಂದೇಶದೊಂದಿಗೆ ನಡೆದ ಶಿಬಿರದಲ್ಲಿ ಯುವಕರು ಹಾಗೂ ಸಾರ್ವಜನಿಕರು ಪಾಲ್ಗೊಂಡು ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಕೈಜೋಡಿಸಿದರು.

ಈ ವೇಳೆ ಮಾತನಾಡಿದ ತಾಯಪ್ಪ ಯಾದವ, ರಕ್ತದಾನವು ಅಮೂಲ್ಯವಾದ ಸಮಾಜ ಸೇವೆಯಾಗಿದ್ದು, ತುರ್ತು ಸಂದರ್ಭದಲ್ಲಿ ಅಗತ್ಯವಿರುವವರಿಗೆ ರಕ್ತ ಲಭ್ಯವಾಗುವಂತೆ ಮಾಡುವುದು ಪ್ರತಿಯೊಬ್ಬರ ಸಾಮಾಜಿಕ ಹೊಣೆಗಾರಿಕೆಯಾಗಿದೆ. ಆರೋಗ್ಯವಂತ ಯುವಕರು ರಕ್ತದಾನದ ಮಹತ್ವ ಅರಿತು ನಿಯಮಿತವಾಗಿ ರಕ್ತದಾನ ಮಾಡುವಂತೆ ಕರೆ ನೀಡಿದರು.

ಜನ್ಮದಿನವನ್ನು ಸಂಭ್ರಮಕ್ಕೆ ಸೀಮಿತಗೊಳಿಸದೆ ಸಮಾಜಕ್ಕೆ ಉಪಯುಕ್ತವಾದ ಕಾರ್ಯದ ಮೂಲಕ ಆಚರಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಶಿವರಾಜ ಯಾದವ, ಅಶೋಕ ಯಾದವ, ಮಾಳಪ್ಪ ಯಾದವ, ಬುಗ್ಗಪ್ಪ ಯಾದವ, ಸಾಬಣ್ಣಾ ಯಾದವ, ವೆಂಕಟ ಹೊನಗೇರಾ, ನಾಗಪ್ಪ ಯಾದವ, ದೇವು ಯಾದವ, ತಿಮ್ಮಯ್ಯ ಬದ್ದೆಪಲ್ಲಿ, ಮಲ್ಲಪ್ಪ ಯಾದವ ತರ್ಕಪೇಟೆ, ಸಂಗು ಚವ್ಹಾಣ ವಡಗೇರಾ ಇತರರಿದ್ದರು.

Leave a Reply

Your email address will not be published. Required fields are marked *

↑
Suddi Belaku