ರಸ್ತೆ ಮೇಲೆ ಹರಿದ ಸೆಪ್ಟಿಕ್ ನೀರು; ತಕ್ಷಣ ತೆರವುಗೊಳಿಸಲು ಒತ್ತಾಯ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ನಗರದ ಮಾತಮಾಣಿಕೇಶ್ವರಿ ಕಾಲೋನಿಯಲ್ಲಿರುವ ಅಲ್ಪಸಂಖ್ಯಾತರ ಇಲಾಖೆಯ ಅಬ್ದುಲ್ ಕಲಾಂ ಹಾಸ್ಟೆಲ್ ಹಿಂಭಾಗದ ಸೆಪ್ಟಿಕ್ ಟ್ಯಾಂಕ್ ತುಂಬಿ ಕಲುಷಿತ ನೀರು ರಸ್ತೆ ಹಾಗೂ ಖಾಲಿ ಜಾಗದಲ್ಲಿ ಉಕ್ಕಿ ಹರಿಯುತ್ತಿದ್ದು, ತೀವ್ರ ದುರ್ವಾಸನೆ ಮತ್ತು ಡೆಂಗ್ಯೂ, ಮಲೇರಿಯಾದಂತಹ ಮಾರಕ ಸಾಂಕ್ರಾಮಿಕ ರೋಗಗಳ ಭೀತಿ ಸೃಷ್ಟಿಸಿದೆ. ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಾಗರಿಕರ ಆರೋಗ್ಯಕ್ಕೆ ಕಂಟಕವಾಗಿರುವ ಈ ಸಮಸ್ಯೆಯ ಕುರಿತು ಅಧಿಕಾರಿಗಳು ತೀವ್ರ ನಿರ್ಲಕ್ಷ್ಯ ವಹಿಸಿದ್ದು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಕಲುಷಿತ ನೀರನ್ನು ತೆರವುಗೊಳಿಸಿ ಸೆಪ್ಲಿಕ್ ಟ್ಯಾಂಕ್ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಅಖಂಡ ರಾಷ್ಟ್ರ ಯುವ ಜನ ಸೇವಾ ಸಂಸ್ಥೆಯ ನಗರ ಅಧ್ಯಕ್ಷ ಭರತಗೌಡ ಒತ್ತಾಯಿಸಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ

ನಗರಾಧ್ಯಕ್ಷ ಭರತಗೌಡ ಅವರು, ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ಅಧಿಕಾರಿಗಳ ಧೋರಣೆ ಖಂಡನೀಯವಾಗಿದ್ದು, ಕೂಡಲೇ ಸೂಕ್ತ ಕಾಳಜಿ ವಹಿಸಿ ನಾಗರಿಕರ ಆರೋಗ್ಯ ರಕ್ಷಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಯುವ ಮುಖಂಡರಾದ ತೇಜಸ ಹಿರೇಮಠ, ವಿನಯಕಟ್ಟಿ, ಅಶೋಕರೆಡ್ಡಿ ವಡ್ಡಡಗಿ, ಕಿರಣಕುಮಾರ, ಪ್ರೀತಂ, ಅಂಕಿತ್, ಸೂರಜ್ ಪೂಜಾರಿ, ಕುಮಾರ್ ಆದಿತ್ಯ, ವಿನಾಯಕ ಹವಾಲ್ದಾರ್, ಸಾಯಿನಾಥ್ ನಾಯಕ್, ರಾಜೇಶ್ ಬಿ.ಎಲ್, ದೇವರಾಜ್, ಮನೋಜ್ ಹುಬ್ಬಳ್ಳಿ ಹಾಗೂ ಗಣೇಶ್ ಮೋಟ್ಕರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku