
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಜಿಲ್ಲೆಯ ಬರಗಾಲ ಪರಿಸ್ಥಿತಿಯನ್ನು ಎರಡನೇ ಪಟ್ಟಿಯಲ್ಲಿ ಸರ್ಕಾರ ಘೋಷಣೆ ಮಾಡದಿದ್ದರೆ ಮುಂದಿನ ಹಂತದ ಹೋರಾಟ ನಡೆಸಲಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದು ನಾಯಕ ಹತ್ತಿಕುಣಿ ತಿಳಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲೆಯ ಬರಗಾಲ ಸ್ಥಿತಿ ನಿರ್ಲಕ್ಷಿಸಿದ ಸರ್ಕಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಿಗೆ ಘೆರಾವ್ ಮಾಡಿ ಬಿಸಿ ಮುಟ್ಟಿಸಲಾಗಿದೆ. ಅಲ್ಲದೇ ಸಚಿವರು ಸಹ ಎರಡನೇ ಪಟ್ಟಿಯಲ್ಲಿ ಜಿಲ್ಲೆಯ ಸೇರ್ಪಡೆ ಮಾಡುವುದಾಗಿ ಕರವೇಗೆ ಸ್ಪಷ್ಟ ಭರವಸೆ ನೀಡಿದ್ದಾರೆ.
ಬಂದ್ ಎನ್ನುವುದು ಕೊನೆಯ ಅಸ್ತçವಾಗಬೇಕೇ ಹೊರತು ಹೀಗೆ ಹಿಂದೆ ಮುಂದೆ ಯೋಚಿಸದೇ ಸಾರ್ವಜನಿಕರಿಗೆ ತೊಂದರೆಯಾಗುವAತಹ ದಾರಿ ಹಿಡಿಯುವುದಕ್ಕಿಂತ ಹಂತ ಹಂತವಾಗಿ ಹೋರಾಟ ನಡೆಸಬೇಕೆಂಬುದು ಕರವೇ ಸಿದ್ದಾಂತವಾಗಿದೆ.
ಹೋರಾಟ ಜಾತ್ಯತೀತ ಹಾಗೂ ಪಕ್ಷಾತೀತವಾಗಿರಬೇಕು ಆದರೆ ತರಾತುರಿಯಲ್ಲಿ ಕೆಲ ಜಾತಿ ಸಂಘಟನೆಗಳು ಹೋರಾಟ ಸಮಿತಿ ಹೆಸರಿನಲ್ಲಿ ತರಾತುರಿಯಲ್ಲಿ ಅರ್ಥರಹಿತ ಬಂದ್ ನಡೆಸುತ್ತಿರುವುದರಿಂದ ಯಾವುದೇ ಪ್ರಯೋಜನವಾಗದು, ಬದಲಿಗೆ ಜನರಿಗೆ ಸಣ್ಣ ಪುಟ್ಟ ವ್ಯಾಪಾರಿಗಳಿಗೆ, ಬೀದಿಬದಿ ವರ್ತಕರಿಗೆ, ಸೇರಿದಂತೆ ಜನಜೀವನಕ್ಕೆ ತೊಂದರೆಯಾಗುತ್ತದೆ.
ಬರ ಪರಿಸ್ಥಿತಿ ಬಗ್ಗೆ ಸರ್ಕಾರ ನುಡಿದಂತೆ ನಡೆದು 2ನೇ ಪಟ್ಟಿಯಲ್ಲಿ ಜಿಲ್ಲೆ ಸೇರ್ಪಡೆ ಮಾಡುವವರೆಗೆ ಕಾದು ನೋಡುತ್ತೇವೆ. ಆಗ ಏನಾದರೂ ಜಿಲ್ಲೆ ರೈತರಿಗೆ ಅನ್ಯಾಯ ಆಗಿದ್ದೇ ಆದಲ್ಲಿ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ನೇತೃತ್ವದಲ್ಲಿ ಹಂತ ಹಂತವಾಗಿ ರಾಜ್ಯಮಟ್ಟಕ್ಕೆ ಹೋರಾಟ ಕೊಂಡೊಯ್ದು ರೈತರ ಹಿತಕ್ಕಾಗಿ ಉಗ್ರ ಹೋರಾಟ ನಡೆಸುತ್ತೇವೆ ಎಂದು ಮಲ್ಲು ಮಾಳಿಕೇರಿ, ಅಂಬ್ರೇಷ್ ಹತ್ತಿಮನಿ, ಚೌಡಯ್ಯ ಬಾವೂರ, ನಿಂಗಪ್ಪ ಗುಡಗುಡಿ, ಭೀಮಾಶಂಕರ ಹತ್ತಿಕುಣಿ, ಅಬ್ದುಲ್ ಚಿಗಾನೂರ, ವೆಂಕಟೇಶ ನಾಯಕ ಬೈರಿಮಡ್ಡಿ, ಶರಣಬಸಪ್ಪ ಯಲ್ಹೇರಿ, ಅಂಬ್ರೇಷ್ ಕಟ್ಟಿಮನಿ, ಬಸವರಾಜ ಚೆನ್ನೂರು, ಪ್ರಕಾಸ ಪಾಟೀಲ್ ಜೈಗ್ರಾಮ್, ಭೀಮರಾಯ ರಾಮಸಮುದ್ರ, ಸಿದ್ದಪ್ಪ ಕೊಯಿಲೂರ, ಸಿದ್ದಪ್ಪ ಕ್ಯಾಸಪನಳ್ಳಿ, ಸುರೇಶ ಬೆಳಗುಂದಿ, ಅಶೋಕ ನಾಯಕ, ರವಿ ಜಮ್ಮಾರ, ಕಾಶಿನಾಥ ನಾನೇಕ ತಿಳಿಸಿದ್ದಾರೆ.












Leave a Reply