ವಡಗೇರಾ : ನಮ್ಮ ಭರತ ಭೂಮಿಯಲ್ಲಿ 9. ದಿನಗಳ ಕಾಲ ಜರುಗುವ ನವರಾತ್ರಿ ಉತ್ಸವ ಅತ್ಯಂತ ಪವಿತ್ರವಾದದ್ದು ನವರಾತ್ರಿ ಉತ್ಸವ ದೇಶಾದ್ಯಂತ ಸಂಭ್ರಮ ಸಡಗರದಿಂದ ಜರಗುತ್ತದೆ ಭಕ್ತಿ ಶ್ರದ್ಧೆಯಿಂದ ಹೆಣ್ಣು ದೇವತೆಗಳನ್ನು ಪೂಜಿಸಿದ್ದೆ ಆದಲ್ಲಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತೇವೆ ಹೆಣ್ಣು ಜಗತ್ತಿನ ಸೃಷ್ಟಿಯ ಮೂಲವಾಗಿದ್ದಾಳೆ ಎಂದು ಪುರಾಣ ಪ್ರವಚನಕಾರರಾದ ಪರಮ ಪೂಜ್ಯ ಶ್ರೀ ಕಾಳಹಸ್ತೇಂದ್ರ ಮಾಹಾ ಮಹಾಸ್ವಾಮಿಗಳು ವಿಶ್ವಕರ್ಮ ಏಕದಂಡಗಿ ಮಠ ಶಹಾಪುರ ನುಡಿದರು.ನವರಾತ್ರಿ ಪ್ರಯುಕ್ತ ವಡಗೇರಾ ಪಟ್ಟಣದ ಅಂಬಾಮಹೇಶ್ವರಿ ದೇವಸ್ಥಾನ ಸಮಿತಿ ವತಿಯಿಂದ ಅಕ್ಟೋಬರ್ 11 ರಿಂದ ಅಕ್ಟೋಬರ್. 21 ರವರೆಗೆ 11 ದಿನಗಳ ಕಾಲ ಶ್ರೀ ಅಂಬಾಮೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿರುವ ಮಹಾಯೋಗಿ ಶ್ರೀ ಚಿದಾನಂದ ಅವಧೂತರ ವಿರಚಿತ 6.ನೇ ವರ್ಷದ ದೇವಿ ಪುರಾಣ ಪ್ರವಚನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪುರಾಣ ಪ್ರವಚನಗಳ ಆಲಿಕೆಯಿಂದ ಮಾನಸಿಕ ನೆಮ್ಮದಿ ವೃದ್ಧಿಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ನಾವುಗಳು ಅವಸರ ಹಾಗೂ ಒತ್ತಡದ ಜೀವನದಿಂದ ಅನೇಕ ರೋಗ-ರುಜನಿಗಳಿಗೆ ತುತ್ತಾಗುತ್ತಿದ್ದೆವೆ ಆದ್ದರಿಂದ ಪ್ರತಿಯೊಬ್ಬರು ಅವಸರದ ಜೀವನಕ್ಕೆ ಕಡಿವಾಣ ಹಾಕಿ ಮಠ ಮಂದಿರಗಳಲ್ಲಿ ಜರಗುವ ಪುರಾಣ ಪ್ರವಚನ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದರು ನವರಾತ್ರಿ ಸಮಯದಲ್ಲಿ ದೇಶಾದ್ಯಂತ ದೇವಾನುದೇವತೆಗಳಿಗೆ ಅತ್ಯಂತ ಸಡಗರ ಸಂಭ್ರಮದಿಂದ ಪೂಜೆಗಳು ಜರುಗುತ್ತವೆ ದೇವಿಯ ಪುರಾಣವು ನೈಜ ಘಟನೆಯ ಕಥೆಯಾಗಿದೆ ನಮ್ಮ ದೇಶದಲ್ಲಿ ಮಹಿಳೆಗೆ ಅತ್ಯುನ್ನತ ಸ್ಥಾನವಿದೆ ಪ್ರತಿಯೊಬ್ಬರು ಮಹಿಳೆಯರನ್ನು ಪೂಜ್ಯ ಭಾವನೆಯಿಂದ ಕಾಣಬೇಕು ಎಂದರು. ಶ್ರೀ ಚಿದಾನಂದ ಅವಧೂತರು 18 ಅಧ್ಯಾಯಗಳ ಪುರಾಣವನ್ನು ರಚಿಸಿದ್ದಾರೆ.
ಅವರು ಪವಾಡ ಪುರುಷರಾಗಿದ್ದರು. ಮನುಷ್ಯ ಲೋಹಾ ಮೋಹಾ ಮಧ ಮತ್ಸರ ತೊರೆದಾಗ ಮಾತ್ರ ಮನುಷ್ಯನ ಜನ್ಮಕ್ಕೆ ಮುಕ್ತಿ ಸಾಧ್ಯ ಪಟ್ಟಣದ ಜಗನ್ಮಾತೆ ಶ್ರೀ ಅಂಬಾಮಹೇಶ್ವರಿ ಮಹಾನ್ ಶಕ್ತಿಯುಳ್ಳ ಆದಿ ದೇವತೆಯಾಗಿದ್ದಾಳೆ. ಪ್ರತಿಯೊಬ್ಬರು ಸ್ವಚ್ಛತೆಗೆ ಆದ್ಯತೆ ನೀಡಿ ದುಶ್ಚಟಗಳಿಂದ ದೂರವಿದ್ದಾಗ ಮಾತ್ರ ಪ್ರತಿಯೊಬ್ಬರು ಆರೋಗ್ಯದಿಂದ ಇರಲು ಸಾಧ್ಯ ಎಂದು ಹೇಳಿದರು. ಪುರಾಣ ಕಾರ್ಯಕ್ರಮಕ್ಕೆ ತಬಲಾ ಸಾಥ್ ಮಹಾಂತೇಶ್ ಹುಲ್ಲೂರ್ ಸಂಗೀತ ಸೇವೆಯನ್ನು ರಾಜಶೇಖರ್ ಹುಲ್ಲೂರ್ ನೀಡಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ಶ್ರೀಶೈಲ್ ಬಡಿಗೇರ್, ಪಟ್ಟಣದ ಮುಖಂಡರು, ಮಹಿಳೆಯರು ಹಾಗೂ ಶ್ರೀ ಅಂಬಾ ಮಹೇಶ್ವರಿ ದೇವಸ್ಥಾನದ ಸಮಿತಿಯವರು ಸುತ್ತಮುತ್ತಲ ಗ್ರಾಮದ ಭಕ್ತಾದಿಗಳು ಇನ್ನಿತರರು ಉಪಸ್ಥಿತರಿದ್ದರು. ಈ ಕಾರ್ಯಕ್ರಮವನ್ನು ಸಾರಿಗೆ ಇಲಾಖೆ ನಿವೃತ್ತ ಅಧಿಕಾರಿ ಹೊನ್ನಪ್ಪ ವಿಶ್ವಕರ್ಮ ವಡಗೇರಾ ನಿರೂಪಿಸಿ ವಂದಿಸಿದರು.
Leave a Reply