
ಸುದ್ದಿ ಬೆಳಕು ವಾರ್ತೆ
ವಡಿಗೇರಾ : ತಾಲ್ಲೂಕಿನ ಗೋನಾಲ್ ಗ್ರಾಮದಲ್ಲಿ ವಿಕಾಸಿತ ಭಾರತ- ಗ್ಯಾರಂಟಿ ಫಾರ್ ರೋಜಗಾರ್ ಆ್ಯಂಡ್ ಅಜೀವಿಕ ಮಿಷನ್ ಗ್ರಾಮೀಣ ಯೋಜನೆ ಬಗ್ಗೆ ಐಇಸಿ ಜನ ಜಾಗೃತಿ ಕಾರ್ಯಕ್ರಮ ನಡೆಸಲಾಯಿತು. ರೋಜಗಾರ್ ದಿವಸ್ ಬ್ಯಾನರ್ ಹಿಡಿದು ಗ್ರಾಮದಲ್ಲಿ ಯೋಜನೆ ಬಗ್ಗೆ ಅರಿವು ಮೂಡಿಸಲಾಯಿತು. ಇದೇ ಜುಲೈ ಒಂದರಿಂದ ಜಿಲ್ಲೆಯಲ್ಲಿ ವಿಬಿ-ಜಿ ರಾಮಜಿ ಜಿ (ಗ್ರಾಮೀಣ) ಯೋಜನೆ ಜಾರಿಗೆ ಹಿನ್ನಲೆ ದಿನದ ಕೂಲಿ ಮೊತ್ತ 370 ರಿಂದ 382 ರೂಪಾಯಿ ಗೆ ಹೆಚ್ಚಿಸಲಾಗಿದೆ.
ಅಲ್ಲದೆ ಪ್ರತಿ ಗ್ಯಾರಂಟಿ ಕಾರ್ಡಿಗೆ ವಾರ್ಷಿಕ ಮಾನವ ದಿನಗಳು ಗುರಿ 100 ರಿಂದ 125 ಗಳ ವರಗೆ ಹೆಚ್ಚಿಸಲಾಗಿದೆ. ಕೂಲಿ ಕೆಲಸಕ್ಕೆ ಬರುವ ಕಾರ್ಮಿಕರಿಗಾಗಿ ಜಾಗೃತಿ ಮೂಡಿಸಲು ಜಿಲ್ಲಾ ಪಂಚಾಯತ ಹಾಗೂ ತಾಲ್ಲೂಕು ಪಂಚಾಯತಿಯಿಂದ ತಾಲ್ಲೂಕಿನ ವಿವಿಧ ಗ್ರಾಮದಲ್ಲಿ ವ್ಯಾಪಕ ಪ್ರಚಾರ ಕಾರ್ಯಕ್ರಮ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಜನರ ಜೀವಾಳದ ವಿಬಿ-ಬಿ ರಾಜಮ ಜಿ ಯೋಜನೆ ಯಲ್ಲಿ ಕಾರ್ಮಿಕರು ಭಾಗಿಯಾಗುವ ಮೂಲಕ ಸ್ವಾವಲಂಬಿಯಾಗಿ ಬದುಕ ಬಹುದೆಂದು ಹೇಳಲಾಯಿತು. ಸಮಗ್ರ ಕೆರೆ ಅಭಿವೃದ್ಧಿ, ಗೋಕಟ್ಟೆ, ಕೃಷಿಹೊಂಡ ಹಾಗೂ ಕಾಲುವೆ ಅಭಿವೃದ್ಧಿ, ವೈಯಕ್ತಿಕ ದನದ ಶೇಡ್, ಕಿರು ಗ್ರಾಮೀಣ ಬಸ್ ನಿಲ್ದಾಣ ಸೇರಿದಂತೆ ಒಟ್ಟು 318 ಕಾಮಗಾರಿಗಳನ್ನು ಈ ಯೋಜನೆಯಲ್ಲಿ ಅಳವಡಿಸಿದ್ದಾರೆ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು, ರೈತರು ಯೋಜನೆ ಲಾಭ ಪಡೆಯಲು ತಿಳಿಸಲಾಯಿತು.
ಈ ವೇಳೆ ಪಿಡಿಓ ಸಿ ಬಿ ಪಾಟೀಲ್, ಟಿಐಇಸಿ ದುರ್ಗೇಶ್, ಟಿಎಇ ಮಂಜುನಾಥ ಹಾಗೂ ಗ್ರಾಪಂ ಸಿಬ್ಬಂದಿಗಳು, ಗ್ರಾಮಸ್ಥರು ಇದ್ದರು.











Leave a Reply