ಅಡ್ – ಹ್ಯಾಕ್ ಪ್ರಗತಿ ಪರಿಶೀಲನೆ ಸಭೆಗೆ-ಇಓ ಶಶಿಧರ ಹೀರೆಮಠ ಚಾಲನೆ

Posted by

ಸುದ್ದಿ ಬೆಳಕು ವಾರ್ತೆ

ವಡಿಗೇರಾ:- 2014 ರಿಂದ 2025 ರ ವರೆಗಿನ ಸ್ಥಳೀಯ ಸಾಮಾಜಿಕ ಲೆಕ್ಕಪರಿಶೋಧನೆ ವದಿಯಲ್ಲಿನ ಕಂಡಿಗಳಲ್ಲಿನ ಆಕ್ಷೇಪಣೆಗಳನ್ನು ಪರಿಹಸಿಕೊಳ್ಳಲು ತಾಪಂ‌ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಹಿರೇಮಠ ರವರು ಹೇಳಿದರು. ತಾಲ್ಲೂಕು ಪಂಚಾಯತ ಕಚೇರಿ ಸಭಾಂಗಣದಲ್ಲಿ (ಶು-17)ಅಡ್ -ಹ್ಯಾಕ್ ಪ್ರಗತಿ ಪರಿಶೀಲನೆ ಸಭೆಗೆ ಕಾರ್ಯನಿರ್ವಾಹಕ ಅಧಿಕಾರಿಗಳು ಚಾಲನೆ ನೀಡಿ ಮಾತನಾಡಿದರು. ಕಳೆದ ಬಾರಿಯ ಸಭೆಯಲ್ಲಿ ಸೂಚಿಸಿದಂತೆ 2014 ರಿಂದ 2025 ರವರಿಗಿನ ಕಂಡಿಗಳು ಹಾಗೂ ಆಕ್ಷೇಪಣೆಗೆ ಸಂಬಂಧಿಸಿದ ಅಗತ್ಯ ದಾಖಲೆಗಳನ್ನು‌ ಒದಗಿಸಿ ತಿರುವಳಿಗೊಳಿಸಲು ಸೂಚಿಸಿದರು. ಬಾಕಿ ವಸೂಲಾತಿ ಮೊತ್ತ ಭರಿಸಿ ಸಮಸ್ಯೆಗಳು ಇತ್ಯರ್ಥ ಪಡಿಸಿಕೊಳ್ಳಬೇಕು, ಪದೆ ಪದೆ ಸಭೆಗೆ ಬಂದು ವಾಪಸು ಹೋಗುವುದು ಸರಿಯಲ್ಲ ಪರಿಹಾರ ಕಂಡುಕೊಳ್ಳಲು ತಿಳಿಸಿದರು.

ಇನ್ನೂ ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನ ಹಾಗೂ ಎನ್ ಎಮ್ ಆರ್ ತೆಗೆದು ನಿರಂತರ ಕೆಲಸ ಕೊಡಲು, ಪ್ರಗತಿಯಲ್ಲಿರುವ ಶಾಲಾ ಕಟ್ಟಡ, ಶೌಚಾಲಯ ಹಾಗೂ ಇತರ ಕಾಮಗಾರಿಗಳು ಗುಣಮಟ್ಟ ಕಾಪಾಡಿ ನಿಗದಿ ಸಮಯದಲ್ಲಿ ಪೂರ್ಣಗೊಳಿಸಲು ತಿಳಿಸಿದರು, ಅಲ್ಲದೆ ಕರವಸೂಲಾತಿಯ ತಿಂಗಳ ನಿಗದಿ ಗುರಿ ತಲುಪಲು ಎಲ್ಲಾ ಅಧಿಕಾರಿಗಳು ಸಿಬ್ಬಂದಿಗಳು ಪ್ರಯತ್ನಿಸಬೇಕೆಂದರು. ಅಲ್ಲದೆ ಮಳೆಗಾಲ ಆರಂಭವಾಗಿದ್ದು ಗ್ರಾಮೀಣ ಭಾಗದಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವುದು, ಸ್ವಚ್ಛತೆ ಕಾಪಾಡಿ ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರಿಕೆ ವಹಿಸಲು ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು (ಗ್ರಾಉ) ಕಿರಾಣಬಾಬು, ಸಹಾಯಕ ಲೆಕ್ಕಧಿಕಾರಿ ಶರಣಬಸವ, ಪಿಡಿಓ ಗಳು, ಸ್ಥಳೀಯ ಲೆಕ್ಕಾ ಪರಿಶೋಧನೆ ಸಹಾಯಕ ಲೆಕ್ಕಾಧಿಕಾರಿಗಳು ಪ್ರಶಾಂತ, ಟಿಸಿ ರವೀಂದ್ರ ದೇಸಾಯಿ, ಟಿಐಇಸಿ ದುರ್ಗೇಶ್, ಟಿಎಇ, ಟಿಎಎ, ಸೋಷಿಯಲ್ ಕೋರ್ಡಿನೆಟರ್ ಸಿದ್ದಲಿಂಗರೆಡ್ಡಿ, ದೀಕ್ಷಿತ್, ಡಿಇಓ ಗಳು ಹಾಗೂ ತಾಪಂ, ಗ್ರಾಪಂ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *

Suddi Belaku