Tag: Religious News

  • ಅಬ್ಬೆತುಮಕೂರು ಸಿದ್ಧಿ ಪುರುಷ ಶ್ರೀವಿಶ್ವಾರಾಧ್ಯರ ಪರಂಪರಾ ಪಾದಯಾತ್ರೆ 10 ರಿಂದ ಆರಂಭ

    ಅಬ್ಬೆತುಮಕೂರು ಸಿದ್ಧಿ ಪುರುಷ ಶ್ರೀವಿಶ್ವಾರಾಧ್ಯರ ಪರಂಪರಾ ಪಾದಯಾತ್ರೆ 10 ರಿಂದ ಆರಂಭ

    ಸುದ್ದಿ ಬೆಳಕು ವಾರ್ತೆ ಯಾದಗಿರಿ: ಸಿದ್ದಿ ಪುರುಷ ಶ್ರೀ ವಿಶ್ವಾರಾಧ್ಯರ ಜನ್ಮಕ್ಷೇತ್ರ ಗಂವ್ಹಾರದಿಂದ ಅಬ್ಬೆತುಮಕೂರಿಗೆ ಪ್ರತಿವರ್ಷದ ಪದ್ದತಿಯಂತೆ ಅಬ್ಬೆತುಮಕೂರು ಡಾ.ಗಂಗಾಧರ ಮಹಾಸ್ವಾಮಿಗಳ ನೇತೃತ್ವದಲ್ಲಿ ಪರಂಪರಾ ಪಾದಯಾತ್ರೆ ಆ.10 ರಿಂದ ಪ್ರಾರಂಭಗೊಳ್ಳಲಿದೆ ಎಂದು ಶ್ರೀಮಠದ ಕಾರ್ಯದರ್ಶಿ ಮಹೇಶ ಸ್ವಾಮಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಆ-10 ರಂದು ಸೋಮವಾರ ಬೆಳಗ್ಗೆ ಗಂವ್ಹಾರದ ಪೀಠಾಧೀಶ ಕಾಶೀಪೀಠದ 65ನೇ ಜಗದ್ಗುರು ಬನ್ನಿಬಸವೇಶ್ವರರ ಕರ್ತೃ ಗದ್ದುಗೆಗೆ ಮಹಾಪೂಜೆ ನೆರವೇರಿಸಲಾಗುವುದು. ಅಲ್ಲಿ ಬಿ.ಎಂ ಪಾಟೀಲ ಅವರಿಂದ ಪ್ರಸಾದ ವ್ಯವಸ್ಥೆ ಜರುಗುವುದು. ನಂತರ ಮಧ್ಯಾಹ್ನ 1 ಗಂಟೆಗೆ ಸಕಲ…

  • ಸತ್ಯ, ಧರ್ಮ, ಸೇವೆಯೇ ಗುರುಗಳಿಗೆ ನಿಜವಾದ ಗೌರವ: ವೀರೇಶ್ವರ ಶ್ರೀಗಳು

    ಸತ್ಯ, ಧರ್ಮ, ಸೇವೆಯೇ ಗುರುಗಳಿಗೆ ನಿಜವಾದ ಗೌರವ: ವೀರೇಶ್ವರ ಶ್ರೀಗಳು

    ಸುದ್ದಿ ಬೆಳಕು ವಾರ್ತೆ ಯಾದಗಿರಿ : ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ ಗುರು ಸಾಕ್ಷಾತ್ ಪರಬ್ರಹ್ಮ ತಸ್ಮಸ್ವೀ ಗುರುವೇ ನಮಃ. ಗುರು ಎಂದರೆ ಕೇವಲ ಪಾಠ ಹೇಳುವ ವ್ಯಕ್ತಿಯಲ್ಲ, ಬದುಕಿನ ದಾರಿಯನ್ನು ತೋರಿಸುವ ದಿವ್ಯ ಶಕ್ತಿ. ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಜ್ಞಾನದ ಬೆಳಕನ್ನು ನೀಡುವವರು ಗುರು. ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ದೇವರಷ್ಟೇ ಶ್ರೇಷ್ಠ ಸ್ಥಾನವನ್ನು ನೀಡಲಾಗಿದೆ ಎಂದು ದಾಸಬಾಳಾದೀಶ್ವರ ಮಠದ ಪೀಠಾಧಿಪತಿಗಳಾದ ಶ್ರೀ ವೀರೇಶ್ವರ ಶ್ರೀಗಳು ಹೇಳಿದರು. ಅವರು ನಗರದ ಸದ್ಗುರು…

  • ಸೂಗೂರು ದೇವಸ್ಥಾನದಲ್ಲಿ ಬೆಳ್ಳಿ ರಥ ಲೋಕಾರ್ಪಣೆ: ಜಾತ್ಯಾತೀತ ಸಮಾಜಕ್ಕಾಗಿ ಸಿಎಂ ಸಿದ್ದರಾಮಯ್ಯ ಕರೆ
    ,

    ಸೂಗೂರು ದೇವಸ್ಥಾನದಲ್ಲಿ ಬೆಳ್ಳಿ ರಥ ಲೋಕಾರ್ಪಣೆ: ಜಾತ್ಯಾತೀತ ಸಮಾಜಕ್ಕಾಗಿ ಸಿಎಂ ಸಿದ್ದರಾಮಯ್ಯ ಕರೆ

    ಕಲಬುರಗಿ : ಸಮಾನತೆ ಮತ್ತು ಮಾನವೀಯತೆ ಮೌಲ್ಯಗಳನ್ನು ಉಳಿಸುವುದೇ ನಿಜವಾದ ಧರ್ಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಚಿತ್ತಾಪುರ ತಾಲೂಕಿನ ಸೂಗೂರ (ಎನ್) ಗ್ರಾಮದಲ್ಲಿ ಮಹಾತ್ಮ ಶ್ರೀ ಭೋಜಲಿಂಗೇಶ್ವರ ಸಿದ್ದ ಸಂಸ್ಥಾನ ಮಠದ ವತಿಯಿಂದ ಆಯೋಜಿಸಿದ ದೇವಸ್ಥಾನ ಲೋಕಾರ್ಪಣೆ ಹಾಗೂ ಬೆಳ್ಳಿ ರಥೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಜಾತಿ-ಧರ್ಮಗಳ ವಿಭಜನೆ ಬಿಟ್ಟು ಪ್ರೀತಿ ಮತ್ತು ವಿಶ್ವಾಸದೊಂದಿಗೆ ಬದುಕಬೇಕು ಎಂದು ಕರೆ ನೀಡಿದರು. “ಮನುಷ್ಯರಾಗಿ ಬದುಕುವುದು ಮುಖ್ಯ. ಮೂಢನಂಬಿಕೆಗಳಿಂದ ದೂರವಿದ್ದು ವೈಚಾರಿಕತೆ ಬೆಳೆಸಿಕೊಳ್ಳಬೇಕು,” ಎಂದು ಹೇಳಿದರು. ಸಮಾಜದಲ್ಲಿ…

  • ಸೂಗೂರಿನಲ್ಲಿ ಶ್ರೀ ಭೋಜಲಿಂಗೇಶ್ವರ ದೇವಸ್ಥಾನ ಕಳಸಾರೋಹಣ – ಭಕ್ತಿಯಿಂದ ಸಾಮರಸ್ಯ: ಆಂಧೋಲಾ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು

    ಸೂಗೂರಿನಲ್ಲಿ ಶ್ರೀ ಭೋಜಲಿಂಗೇಶ್ವರ ದೇವಸ್ಥಾನ ಕಳಸಾರೋಹಣ – ಭಕ್ತಿಯಿಂದ ಸಾಮರಸ್ಯ: ಆಂಧೋಲಾ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು

    ಚಿತ್ತಾಪುರ: ಭಾರತವು ಶರಣರು ಮತ್ತು ಸೂಫಿ ಸಂತರ ಪವಿತ್ರ ನಾಡಾಗಿದ್ದು, ಇಲ್ಲಿ ನಡೆಯುವ ಧಾರ್ಮಿಕ ಚಟುವಟಿಕೆಗಳು ಜನರಲ್ಲಿ ಶಾಂತಿ, ಸಾಮರಸ್ಯ ಮತ್ತು ನೆಮ್ಮದಿಯನ್ನು ಬೆಳೆಸುತ್ತವೆ ಎಂದು ಆಂಧೋಲದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಹೇಳಿದರು. ಸಮೀಪದ ಸೂಗೂರ ಎನ್ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಭೋಜಲಿಂಗೇಶ್ವರ ದೇವಸ್ಥಾನದ ನವಶಿಲಾ ಮೂರ್ತಿ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮದ ಬಳಿಕ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ಧಾರ್ಮಿಕ ಕಾರ್ಯಕ್ರಮಗಳ ಮಹತ್ವ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಒಗ್ಗಟ್ಟು, ನೈತಿಕ…

  • ಸೂಗೂರಿನಲ್ಲಿ ಶ್ರೀ ಭೋಜಲಿಂಗೇಶ್ವರ ದೇವಸ್ಥಾನ ಕಳಸಾರೋಹಣ – ಭಕ್ತಿಯಿಂದ ಸಮಾಜದಲ್ಲಿ ಸಾಮರಸ್ಯ: ಬಸವರಾಜ ಪಾಟೀಲ್ ಅನ್ವರಿ

    ಸೂಗೂರಿನಲ್ಲಿ ಶ್ರೀ ಭೋಜಲಿಂಗೇಶ್ವರ ದೇವಸ್ಥಾನ ಕಳಸಾರೋಹಣ – ಭಕ್ತಿಯಿಂದ ಸಮಾಜದಲ್ಲಿ ಸಾಮರಸ್ಯ: ಬಸವರಾಜ ಪಾಟೀಲ್ ಅನ್ವರಿ

    ಯಾದಗಿರಿ: ಭಾರತ ಪವಿತ್ರ ಶರಣರು ಹಾಗೂ ಸೂಫಿ-ಸಂತರ ನಾಡಾಗಿದ್ದು, ಇಲ್ಲಿ ಭಕ್ತಿ ಮತ್ತು ಧಾರ್ಮಿಕ ಚಟುವಟಿಕೆಗಳು ಜನರಲ್ಲಿ ಶಾಂತಿ, ಸಾಮರಸ್ಯ ಮತ್ತು ನೆಮ್ಮದಿಯನ್ನು ಬೆಳೆಸುತ್ತವೆ ಎಂದು ಕೇಂದ್ರ ಮಾಜಿ ಸಚಿವ Basavaraj Patil Anvari ಹೇಳಿದರು. ಸಮೀಪದ ಸೂಗೂರ ಎನ್ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಭೋಜಲಿಂಗೇಶ್ವರ ದೇವಸ್ಥಾನದ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಳಸಾರೋಹಣ ಕಾರ್ಯಕ್ರಮದ ನಂತರ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ಧಾರ್ಮಿಕ ಕಾರ್ಯಕ್ರಮಗಳ ಮಹತ್ವ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಜನರಲ್ಲಿ ಒಗ್ಗಟ್ಟು…

Suddi Belaku