
ಕಲಬುರಗಿ : ಸಮಾನತೆ ಮತ್ತು ಮಾನವೀಯತೆ ಮೌಲ್ಯಗಳನ್ನು ಉಳಿಸುವುದೇ ನಿಜವಾದ ಧರ್ಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಚಿತ್ತಾಪುರ ತಾಲೂಕಿನ ಸೂಗೂರ (ಎನ್) ಗ್ರಾಮದಲ್ಲಿ ಮಹಾತ್ಮ ಶ್ರೀ ಭೋಜಲಿಂಗೇಶ್ವರ ಸಿದ್ದ ಸಂಸ್ಥಾನ ಮಠದ ವತಿಯಿಂದ ಆಯೋಜಿಸಿದ ದೇವಸ್ಥಾನ ಲೋಕಾರ್ಪಣೆ ಹಾಗೂ ಬೆಳ್ಳಿ ರಥೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಜಾತಿ-ಧರ್ಮಗಳ ವಿಭಜನೆ ಬಿಟ್ಟು ಪ್ರೀತಿ ಮತ್ತು ವಿಶ್ವಾಸದೊಂದಿಗೆ ಬದುಕಬೇಕು ಎಂದು ಕರೆ ನೀಡಿದರು.
“ಮನುಷ್ಯರಾಗಿ ಬದುಕುವುದು ಮುಖ್ಯ. ಮೂಢನಂಬಿಕೆಗಳಿಂದ ದೂರವಿದ್ದು ವೈಚಾರಿಕತೆ ಬೆಳೆಸಿಕೊಳ್ಳಬೇಕು,” ಎಂದು ಹೇಳಿದರು.
ಸಮಾಜದಲ್ಲಿ ವೈವಿಧ್ಯತೆ ಇದ್ದರೂ ಏಕತೆ ಅತ್ಯಗತ್ಯ. ಯಾವುದೇ ಧರ್ಮ ದ್ವೇಷವನ್ನು ಕಲಿಸುವುದಿಲ್ಲ, ಪ್ರೀತಿ ಮತ್ತು ಸಹಬಾಳ್ವೆಯೇ ಮಾನವ ಸಮಾಜದ ಆಧಾರ ಎಂದು ಹೇಳಿದರು.

ಭೋಜಲಿಂಗೇಶ್ವರ ಮಠವು ಸರ್ವಧರ್ಮ ಭಕ್ತರನ್ನು ಒಗ್ಗೂಡಿಸುವ ಜಾತ್ಯಾತೀತ ಕೇಂದ್ರವಾಗಿ ಬೆಳೆಯಲಿ ಎಂದು ಹಾರೈಸಿದರು.
ಇಂದಿಗೂ ಜಾತಿ ವ್ಯವಸ್ಥೆ ಸಂಪೂರ್ಣವಾಗಿ ಮಾಯವಾಗಿಲ್ಲ. ಶಿಕ್ಷಣ ಮತ್ತು ವೈಜ್ಞಾನಿಕ ಮನೋಭಾವದಿಂದ ಮಾತ್ರ ಸಮಾನತೆ ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯಾತ್ರಿ ನಿವಾಸ ಮತ್ತು ವಸತಿ ನಿಲಯ ನಿರ್ಮಾಣಕ್ಕೆ ಸರ್ಕಾರ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಚಿವ ಪ್ರಿಯಾಂಕ್ ಖರ್ಗೆ ಅವರು ಸುಕ್ಷೇತ್ರದ ಅಭಿವೃದ್ಧಿಗೆ 1 ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿದರು.
ಸಾವಿರಾರು ಭಕ್ತರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು.










Leave a Reply