ಮತದಾರರ ಅರ್ಜಿಗಳನ್ನು ತಪ್ಪಿಲ್ಲದೆ ಭರ್ತಿ ಮಾಡಿ: ರಾಚಣ್ಣಗೌಡ ಮುದ್ನಾಳ ಮನವಿ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಪ್ರತಿಯೊಬ್ಬರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ನಮೂದಿಸಬೇಕು. ಕಾರಣ ಮತದಾರರ ಅರ್ಜಿಗಳು ತಪ್ಪಾಗದಂತೆ ತುಂಬಬೇಕೆಂದು ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ಹೇಳಿದರು.

ಯಾದಗಿರಿ ವಿಧಾನಸಭಾ ಕ್ಷೇತ್ರದ ಅಭಿಶಾಳ ಗ್ರಾಮದಲ್ಲಿ ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆ (ಎಸ್ ಐಆರ್ )ಕಾರ್ಯದ ಅಂಗವಾಗಿ, ಪಕ್ಷದ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರ ಸೂಚನೆಯ ಮೇರೆಗೆ ಈ ಶನಿವಾರ ಮತ್ತು ಭಾನುವಾರ ನಡೆಯುತ್ತಿರುವ ಮಹಾಸಂಪರ್ಕ ಅಭಿಯಾನದ ಭಾಗವಾಗಿ ಅವರು ಮನೆ,ಮನೆಗೆ ಸಂಪರ್ಕ ಅಭಿಯಾನ ನಡೆಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಸರಳ ಆ್ಯಪ್ ಹಾಗೂ ಎಸ್ ಐಆರ್ ಪ್ರಕ್ರಿಯೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಿದರು. ಭಾಗ ಸಂಖ್ಯೆ 211ರಲ್ಲಿ ಮನೆಮನೆ ಭೇಟಿ ನೀಡಿ ಮತದಾರರ ಅರ್ಜಿ ನಮೂನೆಗಳು ಸರಿಯಾಗಿ ಭರ್ತಿಯಾಗಿರುವ ಕುರಿತು ಪರಿಶೀಲನೆ ನಡೆಸಲಾಯಿತು.

Leave a Reply

Your email address will not be published. Required fields are marked *

Suddi Belaku