ಸುದ್ದಿ ಬೆಳಕು ವಾರ್ತೆ
ಯಾದಗಿರಿ: ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬ ಅರ್ಹ ಮತದಾರರು ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಹೆಸರು ಹಾಗೂ ವಿವರಗಳನ್ನು ಪರಿಶೀಲಿಸಿಕೊಳ್ಳಬೇಕು. ಎಸ್‌ಐಆರ್ ಹಾಗೂ ಬಿಎಲ್‌ಎ-2 ಜಾಗೃತಿ ಅಭಿಯಾನದ ಮೂಲಕ ಮನೆಮನೆಗೆ ತೆರಳಿ ಮತದಾರರಲ್ಲಿ ಅರಿವು ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಪಕ್ಷ ಕೈಗೊಂಡಿದೆ ಎಂದು ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮೀನಾಕ್ಷಿ ವಿ. ನಾಯಕ ಹೇಳಿದರು.
ಅವರು ಕಾಂಗ್ರೆಸ್ ಪಕ್ಷದ ವತಿಯಿಂದ ಯಲ್ಹೇರಿ, ಕೊಂಕಲ್, ಯಲಸತ್ತಿ, ವಂಕಸಂಭ್ರ, ಸಂಭ್ರಮ್ ಹಾಗೂ ಮಾದ್ವಾರ ಗ್ರಾಮಗಳಲ್ಲಿ ಹಮ್ಮಿಕೊಂಡಿದ್ದ ಎಸ್‌ಐಆರ್ ಹಾಗೂ ಬಿಎಲ್‌ಎ-2 ಜಾಗೃತಿ ಅಭಿಯಾನದಲ್ಲಿ ಮಾತನಾಡಿದರು.
ಅಭಿಯಾನದಲ್ಲಿ ಕಾರ್ಯಕರ್ತೆಯರಾದ ವಿಜಮ್ಮ ಮಲ್ಹಾರ್, ರಾಘವೇಂದ್ರ ಕೊಂಕಲ್, ನಾಗಪ್ಪ ಸಜ್ಜನ್ ಕಡೆಚೂರು ಹಾಗೂ ಕಾಸಿಮ್ ಪಟೇಲ್ ಭಾಗವಹಿಸಿ, ಮತದಾರರ ಪಟ್ಟಿಯ ಪರಿಷ್ಕರಣೆ, ಹೊಸ ಮತದಾರರ ನೋಂದಣಿ ಹಾಗೂ ಅಗತ್ಯ ದಾಖಲೆಗಳ ಕುರಿತು ಗ್ರಾಮಸ್ಥರಿಗೆ ಮಾಹಿತಿ ನೀಡಿದರು. ಪ್ರತಿಯೊಬ್ಬ ಅರ್ಹ ಮತದಾರರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವುದನ್ನು ಖಚಿತಪಡಿಸಿಕೊಂಡು ಪ್ರಜಾಪ್ರಭುತ್ವದ ಹಕ್ಕನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಯಲ್ಹೇರಿ ಗ್ರಾಮದ ಸೋಮನಾಥರೆಡ್ಡಿ ಗೌಡ, ಬಿಎಲ್‌ಎ ಮಲ್ಲಪ್ಪ, ಕೊಂಕಲ್ ಗ್ರಾಮದ ರಾಘವೇಂದ್ರ ದುಖಾನ್, ಯಲಸತ್ತಿ ಗ್ರಾಮದ ನಾಗರಾಜ ಹೂಗಾರ್, ಯಂಕರೆಡ್ಡಿಗೌಡ, ವಂಕಸಂಭ್ರ ಗ್ರಾಮದ ಭೀಮಯ್ಯ ದಾಸರ್, ಡಾ. ರಾಮು, ಸತ್ಯಪ್ಪ, ಜಮೀರುಲ್, ರಾಮ ಕುಂಬಾರ, ಸಂಭ್ರಮ್ ಗ್ರಾಮದ ಲಕ್ಷ್ಮೀಕಾಂತರೆಡ್ಡಿ, ಬಿಎಲ್‌ಒ ವೆಂಕಟರೆಡ್ಡಿ, ರಾಘವೇಂದ್ರರೆಡ್ಡಿ, ವೆಂಕಟೇಶರೆಡ್ಡಿ, ಮಾದ್ವಾರ ಗ್ರಾಮದ ಡಾ. ಮಲ್ಲೇಶ ಆರ್ ಸೇರಿದಂತೆ ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.












Leave a Reply