
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಮಾಡ ಆಗಕತ್ಯಾದ ಮಳಿ ಬರ್ತಿಲ್ಲ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಜನರು ಸಂಕಷ್ಟಕ್ಕೀಡಾದ ಸಂದರ್ಭದಲ್ಲಿ ಸರ್ಕಾರದ ಪ್ರತಿನಿಧಿಗಳು, ಮುಖ್ಯಮಂತ್ರಿಗಳಾದಿಯಾಗಿ ಇಲ್ಲಿಯವರೆಗೆ ಹಲವರು ಈ ಭಾಗದ ಜಿಲ್ಲೆಗಳಿಗೆ ಭೇಟಿ ನೀಡುವುದು, ಅಧಿಕಾರಿಗಳ ಸಭೆ ನಡೆಸಿ ಸಾಂತ್ವಾನ ಹೇಳುವ ಕೆಲಸ ಮಾಡುತ್ತಿವೆಯೇ ಹೊರತು ಪರಿಹಾರ ನೀಡುವ ಕೆಲಸ ಮಾಡುತ್ತಿಲ್ಲವೆಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅಸಮಾಧಾನವ್ಯಕ್ತಪಡಿಸಿದರು.
ಗುರುಮಠಕಲ್ ಮತಕ್ಷೇತ್ರದ ಯಂಪಾಡದಲ್ಲಿ ೮೦ ಲಕ್ಷ, ಶಿವಪೂರದಲ್ಲಿ ೧ಕೋಟಿ೨೦ಲಕ್ಷ, ಎಲ್ಹೇರಿ ಗ್ರಾಮದಲ್ಲಿ ೧ ಕೋಟಿ ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಖ್ಯಮಂತ್ರಿಗಳು ಬಂದ ಪುಟ್ಟ ಹೋದ ಪುಟ್ಟ. ಆಗಬಾರದು ಮಾತೃಹೃದಯಿಯಾಗಲಿ, ಭೀüಮಾ, ಕೃಷ್ಣಾಕ್ಕೆ ನೀರಿಲ್ಲ ಜನ ಜಾನುವಾರಿಗಳಿಗೆ ತೊಂದರೆಯಾಗುತ್ತಿದೆ. ನಮ್ಮ ಭಾಗದಲ್ಲಿನ ಕುಡಿವ ನೀರಿನ ಸಮಸ್ಯೆ ಬಗೆ ಹರಿಸಿ, ಮೊದಲ ಶಾಲೆ ಕಟ್ಟಿಕೊಂಡಿವಿ, ಆಸ್ಪತ್ರೆಗಳನ್ನು ಕಟ್ಟಿಕೊಂಡಿವಿ ಶಿಕ್ಷಕರು, ವೈದ್ಯರನ್ನು ಕೊಡಿ ನಮ್ಮ ಜನರ ಉದ್ದಾರಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತನ್ನಿ ಎಂದರು.
ಒಣ ಬೇಸಾಯವುಳ್ಳ ರೈತರು ಬಾಳ್ ಹೈರಾಣ ಆಗ್ಯಾರ ಸರ್ಕಾರ ಅವರ ಕಷ್ಟಕ್ಕೆ ಬರಬೇಕಿದೆ ಮುಖ್ಯಮಂತ್ರಿಗಳ ರಾಜಕೀಯ ಗುರು ಖರ್ಗೆಯವರು ಹೇಳಿದಂತೆ ಅಭಿವೃದ್ಧಿ ಹೊಳೆ ಹರಿಸುವುದು ಬೇಡ, ಮೈಸೂರು ಭಾಗದಂತೆ ಅಭಿವೃದ್ಧಿ ಮಾಡಿ ಎಂದರು.
ಈ ಹಿಂದ ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಿದ್ದಾಗ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಪ್ರತ್ಯೇಕ ಸಚಿವಾಲಯ ಘೋಷಣೆಮಾಡಿ ೨.೫ ವರ್ಷ ಕಳೆಯಿತು. ಇಲ್ಲಿಯವರೆಗೆ ಯಾವುದೇ ಕೆಲಸವಾಗಿಲ್ಲ, ಮಾತುಕೊಟ್ಟು ಅವರಂತೆ ಸಿದ್ದರಾಮಯ್ಯನಂತೆ ಮರಿಬ್ಯಾಡ್ರಿ, ಬರಿ ಘೋಷಣೆಗಳ ಸರ್ಕಾರ ಆಗಬಾರದು, ರೈತರಿಗೆ ಜೀವನ ನಡೆಸಲಿಕ್ಕಾದರೂ ಸಹಾಯ ಮಾಡಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿಯವರಿಗೆ ಮನವಿ ಮಾಡಿದರು.
ಗ್ರಾಪಂನಲ್ಲಿ ಪಿಡಿಒಗಳು ಹಳ್ಳಿಗಳಲ್ಲಿ ಇರುವ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿಸಲು ಪ್ರಯತ್ನಿಸಬೇಕು. ಗ್ರಾಮದಲ್ಲಿ ಬೋರವೆಲ್ ಬೇಡಿಕೆ ಇದೆ. ಆದರೆ, ಇಲ್ಲಿಂದಲೇ ಬೆಳೆದು ಹೋದವರು ನಮಗೆ ಅನುದಾನವನ್ನೇ ಕೊಡಲಿಲ್ಲ ಎಂದರು. ಕೆಕೆಆರ್ಡಿಬಿಯಿಂದ ಅನುದಾನ ಬಿಡುಗಡೆಯಾಗಲಿದ್ದು ಗ್ರಾಮಸ್ಥರನ್ನು ಕರೆದು ನಿಮಗೆ ಅವಶ್ಯಕತೆ ಇರುವ ಕೆಲಸ ಮಾಡಿಕೊಡುವೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಪಿಆರ್‌ಇ ಎಇಇ ಶರಣಬಸಪ್ಪ, ಲೋಕಪಯೋಗಿ ಇಲಾಖೆ ವಿಶೇಷ ಉಪ ವಿಭಾಗ ಕೈಲಾಸ ಅನ್ವಾರ, ಉಪ ತಹಸೀಲ್ದಾರ ಅಶೋಕ ರಾಜಗಿರೆ, ಭೂ ಸೇನಾ ನಿಗಮದ ಬನ್ನಪ್ಪ ಕೋಮಾರ, ಜಿಲ್ಲಾ ನಿರ್ಮಿತಿ ಕೇಂದ್ರದ ಅಧಿಕಾರಿ ಕಿರಣಕುಮಾರ ಹೂಗಾರ, ಪಿಡಿಒ ಮಲ್ಲಿಕಾರ್ಜುನ ಸಜ್ಜನ್, ವಿಶ್ವನಾಥ, ನಾಗರತ್ನ ಎಲ್ಹೇರಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಅಜಯರಡ್ಡಿ ಎಲ್ಹೇರಿ, ಈಶ್ವರ ನಾಯಕ, ಮಲ್ಲಿಕಾರ್ಜುನ ಅರುಣಿ, ಎಲ್ಹೇರಿ ಗ್ರಾಮದ ಶರಣಗೌಡ ಮಾಲೀ ಪಾಟೀಲ, ಸಿದ್ದಣಗೌಡ ದಳಪತಿ ಎಲ್ಹೇರಿ, ಬಸವರಾಜ ಕಣೇಕಲ್, ಸಿದ್ದರಾಮರಡ್ಡಿ ಎಲ್ಹೇರಿ, ಮುನ್ನಾ ಜಿಬಿ ತಾಂಡಾ, ನಾಗರಡ್ಡಿ ವೆಂಕಟರಾಯ, ಚಂದ್ರು ಮಾಲೀ ಪಾಟೀಲ, ಸಂದೀಪ್ ಪಾಟೀಲ, ಹಣಮಂತ್ರಾಯ ವಂಕಮನಿ, ಬಸವರಾಜಪ್ಪ ಹಳ್ಳಿ, ಶಿವಪೂರ ಗ್ರಾಮದ ಶಂಭುಲಿAಗಪ್ಪ ಸಾಹುಕಾರ, ಯಂಪಾಡ ಗ್ರಾಮದ ಶರಣಗೌಡ ಯಂಪಾಡ, ಭೀಮಣ್ಣ ಪೂಜಾರಿ, ಜಯೇಂದ್ರ ಎಂಪಾಡ ತಾಂಡಾ, ಶಾಂತು ಜಾಧವ್ ವಕೀಲರು, ಮಲ್ಲಿಕಾರ್ಜುನ ಸಾಹುಕಾರ ತಾತಳಗೇರಾ, ಹೊನ್ನಪ್ಪ ತಾತಾಳಗೇರಾ, ಅಧಿಕಾರಿಗಳು, ಜೆಸ್ಕಾಂ ಸಿಬ್ಬಂದಿಗಳು ಇತರರಿದ್ದರು.
————–
ಮುಖ್ಯಾಂಶಗಳು
• ಯಂಪಾಡ ಸರ್ಕಾರಿ ಶಾಲೆ ಮಕ್ಕಳಿಗೆ ಆಟದ ಮೈದಾನಕ್ಕೆ ಸಹಕಾರ ನೀಡುವುದರ ಜೊತೆಗೆ ವೈಯಕ್ತಿಕವಾಗಿ ಆಟದ ಪರಿಕರಗಳನ್ನು ನೀಡುವುದಾಗಿ ಶಾಲಾಮಕ್ಕಳಿಗೆ ಭರವಸೆ ನೀಡಿದರು.
• ಎಲ್ಹೇರಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಮಕ್ಕಳು ಶುದ್ಧ ಕುಡಿವ ನೀರಿನ ಘಟಕ ದುರಸ್ತಿ ಮತ್ತು ಶಿಕ್ಷಕರ ಲಭ್ಯತೆ ಕೇಳಿದಾಗ ಸ್ಥಳದಲ್ಲಿಂದರೆ ಮೇಲಾಧಿಕಾರಿಗಳಿಗೆ ಪೋನಾಯಿಸಿ ಶಿಘ್ರದಲ್ಲಿಯೇ ಸಮಸ್ಯೆ ನೀಗಿಸುವಂತೆ ಎಚ್ಚರಿಸಿ ಕೆಲಸ ಮುಗಿದ ಕೂಡಲೇ ಸ್ಥಳದ ಭಾವಚಿತ್ರ ಕಳಿಸುವಂತೆ ತಾಕೀತು ಮಾಡಿದರು.
• ಜಿ.ಬಿ.ತಾಂಡಾಕ್ಕೆ ವಿದ್ಯುತ್ ಸಮಸ್ಯೆ ಪರಿಹರಿಸುವದರ ಜೊತೆಗೆ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು.
• ಎಲ್ಹೇರಿ ಸರ್ಕಾರಿ ವಸತಿ ನಿಲಯ ಸಮಸ್ಯೆಗಳಾದ ಬೆಡ್, ಬೆಡ್‌ಸಿಟ್, ಹೊರಾಂಗಣ ಸ್ವಚ್ಚತೆ, ಶುದ್ಧ ಕುಡಿವ ನೀರಿನ ಸಮಸ್ಯೆ ಪರಿಹಾರಕ್ಕೆ ಸ್ಥಳದಲ್ಲಿಯೇ ಸೂಚಿಸಿ, ಪೋಟೋ ಕಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
• ಎಲ್ಹೇರಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ೫ರಲ್ಲಿ ಹೊಸ ಅಂಗನವಾಡಿ ಕೇಂದ್ರಕ್ಕೆ ಕೆಕೆಆರ್ಡಿಬಿ ಅನುದಾನದಲ್ಲಿ ಮಾಡಿಸಿಕೊಡುವ ಭರವಸೆ
• ಪರಮೇಶಪಲ್ಲಿಗೆ ಬಸ್ ನಿಲ್ದಾಣ ಕೊಡುವುದರ ಜೊತೆಗೆ ಮತಕ್ಷೇತ್ರದಲ್ಲಿ ಸರ್ವೆ ಮಾಡಿಸುತ್ತಿದ್ದೇನೆ ಎಲ್ಲಾ ಬಸ್ ನಿಲ್ದಾಣಗಳನ್ನು ಮಾಡಿಸೋಣ ಎಂದ ಜನರಿಗೆ ಭರವಸೆ ನೀಡಿದರು.
—————-
ಕೆಕೆಆರ್‌ಡಿಬಿ ಆಯುಕ್ತರಿಗೆ ನಟ್ಟು ಬೋಲ್ಟ್ ಟೈಟ್ ಮಾಡಿ
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿಯಾಗಲಿ ಎನ್ನುವ ಉದ್ದೇಶದಿಂದ ಸರ್ಕಾರ ೫ ಸಾವಿರ ಕೋಟಿ ಅನುದಾನ ನೀಡುತ್ತಿದೆ. ಆದರೆ ಅಲ್ಲಿನ ಆಯುಕ್ತರಾದಿಯಾಗಿ ಹಲವು ಅಧಿಕಾರಿಗಳು ಬಹಳ ಬೇಜಾವಾಬ್ದಾರಿತನದಿಂದ ಕೂಡಿದ್ದು, ಅವರುಗಳಿಗೆ ನಟ್ಟು ಬೋಲ್ಟು ಟೈಟ್ ಮಾಡಬೇಕು, ಮುಖ್ಯಮಂತ್ರಿಗಳು ಕೆಲಸ ಮಾಡದ ಅಧಿಕಾರಿಗಳ ನಟ್ಟು ಬೋಲ್ಟ್ ಟೈಟ್ ಮಾಡಿದಾಗ ಮಾತ್ರ ಅಭಿವೃದ್ಧಿಯಾಗುತ್ತದೆ. ಸರ್ಕಾರಕ್ಕೂ ಮತ್ತು ಜನಪ್ರತಿನಿಧಿಗಳಿಗೂ ಕೆಟ್ಟ ಹೆಸರು ಬರುವುದು ತಪ್ಪುತ್ತದೆ. ಸರ್ಕಾರಿ ಅನುದಾನ ಖರ್ಚು ಮಾಡದೇ ಇರುವ ಅಧಿಕಾರಿಗಳಿಗೆ ಚಳಿ ಬಿಡಿಸಬೇಕು.
– ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್ ಮತಕ್ಷೇತ್ರ












Leave a Reply