ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟದ ಮೊಟ್ಟಮೊದಲ ಕಿಡಿ : ಮಲ್ಲಣ್ಣ ಐಕೂರ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ಸಂಗೊಳ್ಳಿ ರಾಯಣ್ಣ ಸ್ವಾತಂತ್ರ್ಯ ಹೋರಾಟದ ಮೊಟ್ಟಮೊದಲ ಕಿಡಿ ಸ್ವಾತಂತ್ರ್ಯಕ್ಕಾಗಿ ತನ್ನ ಜೀವವನ್ನೇ ಬಲಿದಾನ ಮಾಡಿದ ಮಹಾನ್ ದೇಶಪ್ರೇಮಿ ಎಂದು ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ ಹೆಳಿದರು.ನಗರದ ಕನಕ ವೃತ್ತದಲ್ಲಿ ಜಿಲ್ಲಾ ಮತ್ತು ತಾಲೂಕು ಕುರುಬ ಸಂಘದ ವತಿಯಿಂದ ಹಮ್ಮಿಕೊಂಡಿದ್ದ 80 ನೇ ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಂಗೊಳ್ಳಿ ರಾಯಣ್ಣರ 129 ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಸಂಗೊಳ್ಳಿ ರಾಯಣ್ಣನವರು ಒಂದು ಜಾತಿಗೆ ಸೀಮಿತವಾಗದೆ ದೇಶಕ್ಕಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಟ ಮಾಡಿ ನಮಗೆ ಸ್ವಾತಂತ್ರ್ಯ ಸಿಗುವಲ್ಲಿ ಸಂಗೊಳ್ಳಿ ರಾಯಣ್ಣ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆ.ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಹೋರಾಟದ ಮನೋಭಾವ ಬೆಳೆಸಿಕೊಂಡು ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದ ಅಪ್ರತಿಮ ಹೋರಾಟಗಾರ ಇಂದಿನ ಯುವಕರು ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಸ್ವಾತಂತ್ರ ಹೋರಾಟಗಾರರಿಗೆ ಪ್ರತಿಯೊಬ್ಬರು ಗೌರವಿಸಬೇಕು ಸರ್ಕಾರ ಅವರ ಜೀವನ ಚರಿತ್ರೆ ಹೋರಾಟದ ಕುರಿತು ಪಠ್ಯಪುಸ್ತಕಗಳಲ್ಲಿ ಮುದ್ರಣ ಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಶರಣಗೌಡ ಬೋಳಾರಿ,ಮಲ್ಲಯ್ಯ ಕಸಬಿ,ಶರತ್ ಅಲಿಪುರ,ಚಂದ್ರಶೇಖರ್ ಮಗ್ಗ, ಮಾಳಪ್ಪ ಗೋಡಿಯಾಳ,ಹಯ್ಯಾಳಪ್ಪ ನಾಯ್ಕಲ್,ಭೀಮಣ್ಣ ಲಕ್ಷ್ಮಪುರ್,ಹಣಮಂತ ನಾಯ್ಕಲ್,ಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ಇನ್ನಿತರರು ಉಪಸ್ಥಿತರಿದ್ದರು

You Might Also Like

Leave a Reply

Your email address will not be published. Required fields are marked *

Suddi Belaku