
ಸುದ್ದಿ ಬೆಳಕು ವಾರ್ತೆ
ಯಾದಗಿರಿ : NEET ಸೇರಿದಂತೆ ಇನ್ನಿತರ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಗಂಭೀರ ಘಟನೆ ನಡೆದಾಗ ಸಚಿವರು ರಾಜೀನಾಮೆ ನೀಡುವುದು ಪರಿಹಾರವಾಗುವುದಿಲ್ಲ.
ಇಂತಹ ಘಟನೆಗಳು ಮತ್ತೆ ಮರುಕರಳಿಸದಂತೆ ನೋಡಿಕೊಳ್ಳುವ ವ್ಯವಸ್ಥೆಯಾಗಬೇಕು. ಮತ್ತು ಪ್ರತಿಭಟನಾ ನಿರತ ಕುಟುಂಬಗಳಿಗೆ ಸಚಿವರು ತೆರಳಿ ಸಾಂತ್ವನ ಜೊತೆಗೆ ಸೂಕ್ತ ಪರಿಹಾರ ಘೋಷಣೆ ಮಾಡಬೇಕು ಎಂದು ಜಯ ಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ವಿಶ್ವನಾಥ್ ನಾಯಕ್ ಗಂಭೀರವಾಗಿ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು,
NEET ಸೇರಿದಂತೆ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗುವುದು ಲಕ್ಷಾಂತರ ವಿದ್ಯಾರ್ಥಿಗಳ ವರ್ಷಗಳ ಪರಿಶ್ರಮ, ಕನಸು ಮತ್ತು ಭವಿಷ್ಯವನ್ನು ಹಾಳು ಮಾಡುವಂತ ವ್ಯವಸ್ಥೆಯನ್ನು ಹಾಳು ಮಾಡುವವರ ವಿರುದ್ಧ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು. ಸಚಿವರು ರಾಜೀನಾಮೆ ನೀಡುವುದರಿಂದ ಮೃತರ ನಷ್ಟವನ್ನು ಸರಿಪಡಿಸಲು ಸಾಧ್ಯವಿಲ್ಲ ಸಂಬಂಧಪಟ್ಟವರು ಮೃತ ವಿದ್ಯಾರ್ಥಿಗಳ ಕುಟುಂಬಗಳಿಗೆ ತೆರಳಿ ಸಾಂತ್ವನ ಹೇಳಿ, ಸೂಕ್ತ ಪರಿಹಾರದ ನೀಡುವ ಮುಖಾಂತರ ಮಾನವೀಯತೆ ಗುಣ ಬೆಳಸಿ ಕೊಳ್ಳಬೇಕು ಎಂದರು.
ಇಂದು ಶಿಕ್ಷಣ ಕ್ಷೇತ್ರದಲ್ಲಿ ಮತ್ತೊಂದು ದೊಡ್ಡ ಸವಾಲು ಎಂದರೆ ದುಬಾರಿ ಕೋಚಿಂಗ್ ಸೆಂಟರ್‌ಗಳ ಮೇಲೆ ಹೆಚ್ಚುತ್ತಿರುವ ಅವಲಂಬನೆ. ಅನೇಕ ವಿದ್ಯಾರ್ಥಿಗಳು ಕೇವಲ ದಾಖಲೆಗಾಗಿ ಕಾಲೇಜು ಅಥವಾ ಶಾಲೆಗಳಲ್ಲಿ ಪ್ರವೇಶ ಪಡೆದು, ಎರಡು ವರ್ಷಗಳ ಕಾಲ ಲಕ್ಷಾಂತರ ರೂಪಾಯಿ ಶುಲ್ಕ ಪಾವತಿಸಿ ಕೋಚಿಂಗ್ ಸಂಸ್ಥೆಗಳಲ್ಲಿ ಅಭ್ಯಾಸ ಮಾಡುತ್ತಿದ್ದು, ಶಿಕ್ಷಣವು ಪ್ರಸ್ತುತ ಪ್ರತಿಭೆಗಿಂತ ಆರ್ಥಿಕ ಸಾಮರ್ಥ್ಯದ ಮೇಲೆ ಹೆಚ್ಚು ಅವಲಂಬಿತವಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಸರ್ಕಾರ ವಿದ್ಯಾರ್ಥಿಗಳ ಜವಾಬ್ದಾರಿಗೆ ಮಹತ್ವ ನೀಡಬೇಕು ಬರೀ ರಾಜೀನಾಮೆ ನೀಡುವ ಮೂಲಕ ಸಮಾಧಾನ ಪಡಿಸುವುದಲ್ಲ. ವಿದ್ಯಾರ್ಥಿಗಳ ಪರಿಶ್ರಮಕ್ಕೆ ಪರಿಹಾರದ ಜೊತೆಗೆ ನಿಜವಾದ ನ್ಯಾಯ ವದಗಿಸಿ ಆತ್ಮ ಹತ್ಯೆಯಂತ ಪ್ರಕರಣಗಳನ್ನು ತಡೆದು ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕೆ ಬೆಳಕಾಗಬೇಕು ಎಂದು ಆಗ್ರಹಿಸಿದರು.











Leave a Reply