ಮುಂಡರಗಿ ಮಾಳಿ ಕೆರೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಒ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ತಾಲೂಕಿನ ಮುಂಡರಗಿ ಗ್ರಾಮದಲ್ಲಿ ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜಗಾರ ಅಂಡ್ ಆಜೀವಿಕ್ ಮಿಷನ್ ಗ್ರಾಮೀಣ ಯೋಜನೆಯಡಿ ಪ್ರಗತಿಯಲ್ಲಿದ್ದ ಮಾಳಿ ಕೆರೆಯ ಸಮಗ್ರ ಅಭಿವೃದ್ಧಿ ಕಾಮಗಾರಿ ಸ್ಥಳಕ್ಕೆ ಯಾದಗಿರಿ ಜಿಲ್ಲಾ ಪಂಚಾಯಿತಿ ಮುಖ್ಯ ಕರ‍್ಯನರ‍್ವಾಹಕ ಅಧಿಕಾರಿಗಳಾದ ಶ್ರೀ ಲವೀಶ್ ಓರಡಿಯಾ ರವರು ಆ.೧೨ ರಂದು ಭೇಟಿ ನೀಡಿ ಕಾಮಗಾರಿಯ ಭೌತಿಕ ಸ್ಥಿತಿ ಹಾಗೂ ಪ್ರಗತಿ ವೀಕ್ಷಿಸಿದರು.
ಕಾಮಗಾರಿ ಸ್ಥಳದಲ್ಲಿ ಕುಡಿಯುವ ನೀರು, ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಶುದ್ಧ ಕುಡಿಯುವ ನೀರಿನ ಘಟಕದಿಂದ ಕೂಲಿ ಕರ‍್ಮಿಕರಿಗೆ ಕುಡಿಯುವ ನೀರನ್ನು ಓದಗಿಸಿಕೊಡಲು ಹಾಗೂ ಸಮಗ್ರ ಕೆರೆ ಅಭಿವೃದ್ಧಿ ಕಾಮಗಾರಿಯ ಅನುಷ್ಠಾನ, ಗುಣಮಟ್ಟ, ನಿಗದಿತ ಅವಧಿಯೊಳಗೆ ಯೋಜನೆಯ ನಿಯಮಾನುಸಾರ ಕಾಮಗಾರಿಯನ್ನು ಪರ‍್ಣಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಯೋಜನೆಯ ನಿಯಮಾನುಸಾರ ಕಾಮಗಾರಿ ನರ‍್ವಹಿಸಿದ ಕೂಲಿ ಕರ‍್ಮಿಕರಿಗೆ ಎನ್,ಎಮ್,ಆರ್ ಮುಗಿದ ಎರಡು ದಿನದಲ್ಲಿ ಎಮ್,ಐ,ಎಸ್ ಮಾಡಿದ ವೆಚ್ಚವ ಮೊತ್ತವನ್ನು ಕೆ೨ ಮೂಖಾಂತರ ಸರಿಯಾದ ಸಮಯಕ್ಕೆ ಕೂಲಿ ಕರ‍್ಮಿಕರ ಬ್ಯಾಂಕ್ ಖಾತೆಗೆ ಹಣ ಸಂದಾಯ ಮಾಡಲು ತಾಂತ್ರಿಕ ಸಹಾಯಕರಿಗೆ ಸೂಚಿಸಿದರು.
ಗ್ರಾಮೀಣ ಪ್ರದೇಶದ ಕೆರೆಯ ಸಮಗ್ರ ಅಭಿವೃದ್ಧಿಯಿಂದ ಗ್ರಾಮೀಣ ಪ್ರದೇಶದಲ್ಲಿ ಜಲ ಸಂರಕ್ಷಣೆಯ ಜತೆಗೆ ಭೂಮಿಯ ಅಂರ‍್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಮಳೆನೀರಿನ ಸಂಗ್ರಹಣೆಗೆ ಅನುಕೂಲವಾಗುವುದರೊಂದಿಗೆ ಕೆರೆ ಅಂಚಿನ ರೈತರ ಕೃಷಿ ಚಟುವಟಿಕೆಗಳಿಗೆ ನೀರಿನ ಲಭ್ಯತೆ ಸಹಕಾರಿಯಾಗಲಿದೆ. ಇದರಿಂದ ಪರಿಸರ ಸಂರಕ್ಷಣೆ, ಜೀವ ವೈವಿಧ್ಯತೆ ವೃದ್ಧಿ ಹಾಗೂ ಗ್ರಾಮೀಣ ಜನರ ಜೀವನಮಟ್ಟ ಸುಧಾರಣೆಗೆ ಸಹಕಾರಿಯಾಗಲಿದೆ ಎಂದರು.
ಈ ವೇಳೆ ಶ್ರೀ ಮಹಾದೇವ ಬಾಬಳಗಿ ಕರ‍್ಯನರ‍್ವಾಹಕ ಅಧಿಕಾರಿಗಳು, ಶ್ರೀ ಮಲ್ಲಣ್ಣ ಸಂಕನೂರ ಸಹಾಯಕ ನರ‍್ದೇಶಕರು(ಗ್ರಾಉ), ಶ್ರೀಮತಿ ರೇಣುಕಾ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಉಮೇಶ ತಾಂತ್ರಿಕ ಸಂಯೋಜಕರು, ಐಇಸಿ ಸಂಯೋಜಕ ಭೀಮರಡ್ಡಿ ವಡಿಗೇರಾ, ಶ್ರೀ ಶಿವಶರಣಪ್ಪ ದೊಡ್ಡಮನಿ, ಟಿ,ಎಮ್,ಐ,ಎಸ್, ತಾಂತ್ರಿಕ ಸಹಾಯಕ ಬಸಪ್ಪ, ಬಿಎಫ್ಟಿ ಚಂದ್ರಶೇಕರ, ಜಿಕೆಎಮ್ ಬಸಮ್ಮ ಹಾಗೂ ವಿಬಿ-ಜಿರಾಮಜಿ ಯೋಜನೆಯ ಕೂಲಿಕಾರರು ಇದ್ದರು.

Leave a Reply

Your email address will not be published. Required fields are marked *

Suddi Belaku