ಮಾದಾರ ಚನ್ನಯ್ಯ ಸ್ವಾಮೀಜಿಗಳ ಜನ್ಮದಿನ: ಯಾದಗಿರಿಯಲ್ಲಿ ಸಸಿ ನೆಡುವ ಮೂಲಕ ಆಚರಣೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ನಗರದ ವಿಶ್ವರಾಧ್ಯ ನಗರದಲ್ಲಿ ಶ್ರೀ ಮಾದಾರ ಚೆನ್ನಯ ಸೇವಾ ಸಮಿತಿಯ ವತಿಯಿಂದ ಚಿತ್ರದುರ್ಗ ಶ್ರೀ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದ ಪೀಠಾಧ್ಯಕ್ಷರು ಹಾಗೂ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಅಧ್ಯಕ್ಷರಾದ ಪರಮ ಪೂಜ್ಯ ಶ್ರೀ ಶ್ರೀ ಶ್ರೀ ಡಾ. ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳವರ ಜನ್ಮ ದಿನದ ಪ್ರಯುಕ್ತ ಸಸಿ ನೇಡುವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು.

​ಸಾಮರಸ್ಯ ಪ್ರಶಸ್ತಿ ಮತ್ತು ಭಾರತದ ಗೌರವಾನ್ವಿತ ಉಪರಾಷ್ಟ್ರಪತಿಗಳಿಂದ ನಾಡಪ್ರಭು ಕೆಂಪೇಗೌಡರ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿರುವ ಪೂಜ್ಯ ಸ್ವಾಮೀಜಿಗಳ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ಈ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಮುಖಂಡರು ಸಸಿಗಳನ್ನು ನೆಟ್ಟು ನೀರೆರೆದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಡಾ. ಶಿವಪ್ಪ ಮುದ್ನಾಳ ಮಾತನಾಡಿ, ಪೂಜ್ಯ ಸ್ವಾಮೀಜಿಗಳ ಸಮಾಜಮುಖಿ ಕಾರ್ಯಗಳು ಹಾಗೂ ಅವರ ಮಾರ್ಗದರ್ಶನ ಸಮಾಜಕ್ಕೆ ಸದಾ ದಾರಿದೀಪವಾಗಿದೆ ಎಂದು ಸ್ಮರಿಸಿದರು.

​ಕಾರ್ಯಕ್ರಮದಲ್ಲಿ ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಬಸವರಾಜ ಮೇತ್ರಿ ನಾಯ್ಕಲ್, ಶಿವಪ್ಪ ಮುದ್ನಾಳ, ಪರಮೇಶ ಗುಂಟೆನೋರ, ಶ್ರೀನಿವಾಸ ಈಟೆಕರ್, ಡಾ. ಸಿ. ಆರ್. ಕಂಬಾರ್, ತಿಪ್ಪಣ ಕೊನಿಮನಿ, ಶಿವು ಕೊಯಿಲೂರು, ಬಸವಲಿಂಗಪ್ಪ ಗೋಲ್ಡ್, ಸಲೀಂಪಾಷ್, ಸಲ್ಲು ದಂಡಿನ್ ಹಾಗೂ ಮಲ್ಲಿಕಾರ್ಜುನ ಬೀರನೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Suddi Belaku