
ಸುದ್ದಿ ಬೆಳಕು ವಾರ್ತೆ
ಹಟ್ಟಿ ಚಿನ್ನದ ಗಣಿ, ಏಪ್ರಿಲ್ 22 : ಸಮೀಪದ ಯರಜಂತಿ ಗ್ರಾಮದ ಬಸವನಬಗಡಿ ದೊಡ್ಡಿಯಲ್ಲಿ ನಿನ್ನೆ ರಾತ್ರಿ ಸುರಿದ ಮಳೆಯ ವೇಳೆ ಸಿಡಿಲು ಬಡಿದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ನಡೆದಿದೆ.
ಮೃತರನ್ನು ದುರಗಮ್ಮ (49), ಗಂಡ ಸಾಬಣ್ಣ ನಾಯಕ ಎಂದು ಗುರುತಿಸಲಾಗಿದೆ. ತಾವು ವಾಸಿಸುತ್ತಿದ್ದ ಜಮೀನಿನಲ್ಲಿ ಜಾನುವಾರುಗಳಿಗೆ ಸಂಗ್ರಹಿಸಿದ್ದ ಮೇವಿನ ಬಣವಿಯನ್ನು ಮಳೆಯಿಂದ ರಕ್ಷಿಸಲು ತಾಡಪತ್ರೆ ಹೊದಿಸಿ, ಅಲ್ಲಿಂದ ಸಮೀಪದ ಗುಡಿಸಲಿಗೆ ಮರಳುತ್ತಿದ್ದ ವೇಳೆ ಸಿಡಿಲು ಅಪ್ಪಳಿಸಿ ಸ್ಥಳದಲ್ಲೇ ಅಸು ನೀಗಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಗುರುಗುಂಟಾ ಗ್ರಾಮ ಲೆಕ್ಕಾಧಿಕಾರಿ ಮಲ್ಲಿಕಾರ್ಜುನ ಸಂಜೆ ವಾಹಿನಿ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಭೇಟಿ, ಸಾಂತ್ವಾನ:
ಘಟನೆ ತಿಳಿದು ಲಿಂಗಸಗೂರು ತಹಶೀಲ್ದಾರ್ ಸತ್ಯಮ್ಮ ಅವರು ಲಿಂಗಸಗೂರು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಗಾರಕ್ಕೆ ಭೇಟಿ ನೀಡಿ, ಮೃತರ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಗುರುಗುಂಟಾ ಉಪ ತಹಶೀಲ್ದಾರ್ ರಾಘವೇಂದ್ರ ಕೊಪ್ಪದ ಹಾಗೂ ಕಂದಾಯ ನಿರೀಕ್ಷಕ ಮಲ್ಲಿಕಾರ್ಜುನ ಕಟ್ಟಿಮನಿ ಉಪಸ್ಥಿತರಿದ್ದರು.










Leave a Reply