
BJP protest in Yadgir against Kharge statement on Narendra Modi
ಯಾದಗಿರಿ:ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನೀಡಿದ ವಿವಾದಾತ್ಮಕ ಹೇಳಿಕೆಯನ್ನು ಖಂಡಿಸಿ ನಗರದ ಸುಭಾಷ್ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಯುವ ಮೋರ್ಚಾ ವತಿಯಿಂದ ಪ್ರತಿಭಟನೆ ನಡೆಸಿ,ಖರ್ಗೆ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡರು ತಮಿಳುನಾಡಿನಲ್ಲಿ ನಡೆದ ಚುನಾವಣಾ ಪ್ರಚಾರದ ಕೊನೆಯ ದಿನ ಚೆನ್ನೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು “ಭಯೋತ್ಪಾದಕ” ಎಂದು ಉಲ್ಲೇಖಿಸಿರುವುದಾಗಿ ಆರೋಪಿಸಿದರು. ಇಂತಹ ಹೇಳಿಕೆಗಳು ದೇಶದ ರಾಜಕೀಯ ಸಂಸ್ಕೃತಿಗೆ ಧಕ್ಕೆಯುಂಟುಮಾಡುವಂತವು ಎಂದು ಹೇಳಿದರು.
ಮಹಿಳಾ ಮೀಸಲಾತಿ ಮಸೂದೆ ಮತ್ತು ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ವಿರೋಧ ಪಕ್ಷಗಳ ಒಗ್ಗಟ್ಟನ್ನು ಪ್ರಶ್ನಿಸಿದ ಖರ್ಗೆ, ಬಿಜೆಪಿ ಬೆಂಬಲಿಸಿದ್ದಕ್ಕಾಗಿ ಎಐಎಡಿಎಂಕೆ ಪಕ್ಷವನ್ನು ಟೀಕಿಸಿ, ಪ್ರಧಾನಿ ಮೋದಿಯವರ ವಿರುದ್ಧ ಅಸಂಬದ್ಧ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ಮೋದಿ ದೇಶದ ಜನರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದಾರೆ. ಅವರ ವಿರುದ್ದ ಇಂತಹ ಅವಹೇಳನಕಾರಿ ಪದಗಳನ್ನು ಬಳಸುವುದು ಕಾಂಗ್ರೆಸ್ ಪಕ್ಷದ ನಿಜಸ್ವಭಾವವನ್ನು ತೋರಿಸುತ್ತದೆ,” ಎಂದು ಕಾರ್ಯಕರ್ತರು
ಕಿಡಿಕಾರಿದರು.
ಖರ್ಗೆ ಅವರು ಇಡಿ, ಐಟಿ, ಸಿಬಿಐ ಸಂಸ್ಥೆಗಳ ದುರುಪಯೋಗ ಕುರಿತು ಮಾಡಿದ ಆರೋಪಗಳನ್ನೂ ತಳ್ಳಿ ಹಾಕಿದ ಅವರು, ಇದು ರಾಜಕೀಯ ಲಾಭಕ್ಕಾಗಿ ಮಾಡಲಾಗುತ್ತಿರುವ ತಪ್ಪು ಪ್ರಚಾರ ಎಂದು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶರಡ್ಡಿ ಮುದ್ನಾಳ, ಹಿರಿಯ ಮುಖಂಡ ರಾಚನಗೌಡ ಮುದ್ನಾಳ, ನಾಗರತ್ನ ಕುಪ್ಪಿ, ದೇವಿಂದ್ರನಾಥ ನಾದ,ಖಂಡಪ್ಪ ದಾಸನ್,ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಆರ್ ಸಾಹುಕಾರ, ಶರಣುಗೌಡ ಐಕೂರ, ಮಲ್ಲಿಕಾರ್ಜುನ ಹೊನಿಗೆರಿ, ಪ್ರಭಾವತಿ ಕಲಾಲ್, ಸುನಿತಾ ಚೌಹಾಣ್, ವಿಜಯಲಕ್ಷ್ಮಿ ನಾಯಕ, ಶಕುಂತಲಾ ಜಿ,ಭೀಮಬಾಯಿ ಶೆಂಡಿಗಿ, ಸ್ವಾಮಿದೇವ ದಾಸನಕೇರಿ,ಅಪ್ಪಣ್ಣ ಜೈನ್,ಸುರೇಶ ರಾಠೋಡ, ಮಹದೇವಪ್ಪ ಗಣಗಪುರ,ರಾಜು ಸ್ವಾಮಿ ಅನಂಪಲಿ,ನಾಗಪ್ಪ ಗಚ್ಚಿನಮನಿ,ಸಿ.ಮಲ್ಲು ಕೊಲಿವಾಡ, ಮಂಜುನಾಥ ಗುತ್ತೆದಾರ, ಬಸ್ಸು ಬಳಿಚಕ್ರ,ಪರತಪ್ಪ ನಾಯಕ ಠಾಣಗುಂದಿ,ಸಲ್ಲೂ ಯಡಳ್ಳಿ,ಇಮ್ಮವೇಲ್ಲ್ ಜಿಮ್ಮಿ, ಹಣಮಂತ ವಲ್ಯಪುರ ಸೇರಿದಂತೆ ಅನೇಕ ಕಾರ್ಯಕರ್ತರು ಉಪಸ್ಥಿತರಿದರು.










Leave a Reply