
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಗುರುಮಠಕಲ್ ಮತಮಕ್ಷೇತ್ರದ ಕಾಳೆಬೆಳಗುಂದಿಯಲ್ಲಿ ಅರಣ್ಯ ಇಲಾಖೆಯಿಂದ ೨ ಕೋಟಿ ರೂಪಾಯಿ ಅನುದಾನದಲ್ಲಿ ಟ್ರೀ ಪಾರ್ಕ್ ನಿರ್ಮಿಲಾಗುತ್ತಿದ್ದು, ಇದೀಗ ೫೦ ಲಕ್ಷ ಅನುದಾನ ಬಂದಿದ್ದು, ಇನ್ನು ಅದರ ಕಾಮಗಾರಿಗಳ ಅಭಿವೃದ್ಧಿಯ ಕೆಲಸ ಪ್ರಾರಂಭವಾಗಲಿದ್ದು, ಜನರಿಗೆ ಒಂದು ದಿನದ ವಿರಾಮಕ್ಕಾಗಿ ಟ್ರೀ ಪಾರ್ಕ್ ಸಹಕಾರವಾಗಲಿದೆ ಎಂದು ಹೇಳಿದರು.
ಕಾಳಬೆಳಗುಂದಿ ಅರಣ್ಯ ಪ್ರದೇಶದಲ್ಲಿ ೨ ಕೋಟಿ ವೆಚ್ಚದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ನಿರ್ಮಾಣವಾಗುತ್ತಿರುವ ಬನದೇಶ್ವರ ಪ್ರಾಣವಾಯು ವೃಕ್ಷೆÆÃದ್ಯಾನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆಯವರ ಕನಸಿನ ಟ್ರೀ ಪಾರ್ಕ್ ಯೋಜನೆ ಪ್ರತಿಕ್ಷೇತ್ರಗಳಲ್ಲಿ ಅರಣ್ಯ ಹಸರೀಕರಣ ಮಾಡುವ ಉದ್ದೇಶದಿಂದ ರಾಜ್ಯದಾದ್ಯಂತ ಹಲವು ಟ್ರೀ ಪಾರ್ಕ್ ಯೋಜನೆಯನ್ನು ಜಾರಿಗೆ ತಂದಿದ್ದು ಇದರ ಅಂಗವಾಗಿ ಮೊದಲ ಹಂತದಲ್ಲಿ ೫೦ ಲಕ್ಷ ಅನುದಾನ ಬಿಡುಗೆಯಾಗಿದ್ದು, ಮುಂದೆ ಯಾರೂ ಅರಣ್ಯ ಸಚಿವರಾದರೂ ಅವರ ಬಳಿ ತೆರಳಿ ಈ ಟ್ರೀ ಪಾರ್ಕ್ ಯೋಜನೆ ಅನುಷ್ಠಾನಗೊಳಿಸಲು ಉಳಿದ ಅನುದಾನ ತರಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು.
ಜಗತ್ತು ಆಧುನೀಕರಣಕ್ಕೆ ಒಡ್ಡಿಕೊಳ್ಳುತ್ತಿದ್ದಂತೆ ಪ್ರಕೃತಿ, ಪರಿಸರ ಕ್ಷೀಣವಾಗುತ್ತಿದೆ. ಭೂಮಿ ತಾಯಿಯನ್ನು ನಿಕೃಷ್ಟವಾಗಿ ಕಂಡು ತಮ್ಮ ಏಳಿಗೆಯನ್ನು ಮಾಡ ಹೊರಟಿದ್ದಾನೆ ಮಾನವ. ದಿನದಿಂದ ದಿನಕ್ಕೆ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಉಷ್ಣತೆ, ಬರಗಾಲ, ನೆರೆ, ಪ್ರಕೃತಿ ವಿಕೋಪಗಳು ತಾರಕ್ಕೇರುತ್ತಿದೆ. ಇದನ್ನು ಮನಗಂಡ ಕರ್ನಾಟಕ ಅರಣ್ಯ ಇಲಾಖೆ ಮಹತ್ ಕಾರ್ಯಕ್ಕೆ ಕೈ ಹಾಕಿದೆ ಎಂದು ಹೇಳಿದರು.
ಅತೀ ಕಡಿಮೆ ಪ್ರತಿಶತ ೫ ರಷ್ಟು ಅರಣ್ಯ ಹೊಂದಿದ ಕಲ್ಯಾಣ ಕರ್ನಾಟಕದಲ್ಲಿ ಕೃಷಿ ಜೊತೆ ಅರಣ್ಯ ಬೆಳೆಸಲು ರೈತರಿಗೆ ಪ್ರೊತ್ಸಾಹ ಧನ ನೀಡಲಾಗುತ್ತಿದೆ. ಪರಿಸರ ಸಮತೋಲನಕ್ಕಾಗಿ ಗಿಡ, ಮರಗಳನ್ನು ಬೆಳೆಯಬೇಕು ಎಂದು ಶಾಸಕರು ಸಲಹೆ ನೀಡಿದರು.
ಸಾಮಾಜಿಕ ಅರಣ್ಯ ಇಲಾಖೆಯ ಡಿಸಿಎಫ್‌ಒ ಚೇತನ ಗಸ್ತಿ ಮಾತನಾಡಿ, ೫ ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಟ್ರೀ ಪಾರ್ಕ್ನಲ್ಲಿ ಆಮ್ಲ ಜನಕ ಹೊರಸೂಸೂವ ಸಸಿಗಳನ್ನು ನೆಡವುದು, ವಾಕಿಂಗ್ ಟ್ರ‍್ಯಾಕ್, ಯೋಗ ವೇದಿಕೆ, ಮಕ್ಕಳ ಆಟಿಕೆಗಳು, ಜಿಮ್ ವ್ಯವಸ್ಥೆ ಎರಡು ಪರಗೋಲಗಳು(ಆಸನಗಳು), ಆರ್.ಒ ಶುದ್ದ ಕುಡಿಯುವ ನೀರಿನ ಪ್ಲ್ಯಾಂಟ್, ಪ್ರತ್ಯೇಕ ಶೌಚಾಲಯಗಳು ಸೇರಿದಂತೆ ಟ್ರೀ ಪಾರ್ಕ್ ಭದ್ರತೆಗಾಗಿ ತಂತಿಬೇಲಿ ಅಳವಡಿಕೆ, ಟ್ರೀಕ್ ಪಾರ್ಕ್ ಎದುರುಗಡೆ ಅತ್ಯಂತ ಸುಂದರವಾದ ಆರ್ಚ್(ದ್ವಾರಬಾಗೀಲು) ನಿರ್ಮಾಣ ಮಾಡಿ ಟ್ರೀ ಪಾರ್ಕ್ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಪ್ರಸ್ತುತ ಹಂತದಲ್ಲಿ ಯೋಜನೆಯ ಭೂಮಿ ಗುರುತುಹಾಕಲಾಗಿದೆ ಹಾಗೂ ನಿರ್ಮಾಣದ ಪೂರ್ವತಯಾರಿಗಳು ಆರಂಭವಾಗಿವೆ. ಗುರುಮಠಕಲ್ ಮತಕ್ಷೇತ್ರಕ್ಕೆ ಹೊಸ ಗುರುತು ನೀಡಲಿರುವ ಈ ಯೋಜನೆ, ಪ್ರವಾಸೋದ್ಯಮ, ಉದ್ಯಮ ಮತ್ತು ಸಾಂಸ್ಕೃತಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಮಾಜಿಕ ಅರಣ್ಯ ಇಲಾಖೆಯ ಎಸಿಎಫ್‌ಒ ಮಹ್ಮದ್ ಅಸದ್, ಸಾಮಾಜಿಕ ಆರ್‌ಎಫ್‌ಒ ಚನ್ನಬಸವ ಕಟ್ಟಿಮನಿ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ಮುಖಂಡರಾದ ಅಜಯರಡ್ಡಿ ಎಲ್ಹೇರಿ, ಮಲ್ಲಣಗೌಡ ಕೌಳೂರು, ಶರಣಪ್ಪಗೌಡ ಹೊಸಳ್ಳಿ, ಪರ್ವತರಡ್ಡಿ, ಬಸವರಾಜ ಕಣೇಕಲ್, ಲಕ್ಷö್ಮಣ ನಾಯಕ ಕಾಳಬೆಳಗುಂದಿ, ಪೋಲಪ್ಪ ನೀಲಹಳ್ಳಿ, ಬೆಂಜಮನ್, ರಾಜೇಶ ಉಪ್ಪಿನ್, ಮಹಿಪಾಲರಡ್ಡಿ ಮಲ್ಹಾರ, ರಾಜು ಕಾಳಬೆಳಗುಂದಿ, ನರಸಿಂಹರಡ್ಡಿ ಚಿಂತಗುAಟಾ, ಲಕ್ಷö್ಮಣ ನಾಯಕ, ರಾಜೇಶ ಉಡುಪಿ, ಅಲ್ಲಾವುದ್ದೀನ್, ಚೌಡಯ್ಯ, ಶರಣಗೌಡ ಮಾಧ್ವಾರ, ಮಲ್ಲಣಗೌಡ ಬದ್ದೇಪಲ್ಲಿ, ಶರಣು ಗಾಡಿ ಮೊಟ್ನಳ್ಳಿ, ವೆಂಕಟರಮಣ ಮೊಟ್ನಳ್ಳಿ. ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಇದ್ದರು.
ಅತ್ಯುತ್ತಮ ಉದ್ಯಾನವನ ನಿರ್ಮಾಣಕ್ಕೆ ಆದ್ಯತೆ
ನೈಸರ್ಗಿಕ ಕಾಡುಗಳಿಗಿಂತ ಭಿನ್ನವಾಗಿ, ಮೂಲಭೂತ ಸೌಕರ್ಯಗಳ ಸ್ಥಾಪನೆಯನ್ನು ಓಳಗೊಂಡಿರುವ ಈ ಟ್ರೀ ಪಾರ್ಕ್ ವಿರಾಮಕ್ಕಾಗಿ ಬರುವ ಜನರಿಗೆ ಅನುಕೂಲತೆ ಮತ್ತು ಸೌಕರ್ಯಗಳನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. ಅಂದರೆ ಶೌಚಾಲಯಗಳು ಮತ್ತು ಟ್ರ‍್ಯಾಕ್‌ಗಳ ವ್ಯವಸ್ಥೆ ಇರುತ್ತದೆ. ಜನರು ತಮ್ಮ ಕುಟುಂಬದೊAದಿಗೆ ಬಂದು ಕೆಲವು ಕಾಲ ತಂಗಲು ಇಲ್ಲಿ ವ್ಯವಸ್ಥೆ ಮಾಡುವುದರ ಜೊತೆಗೆ ಒಂದು ಅತ್ಯುತ್ತಮ ಉದ್ಯಾನವನ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ,
– ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್











Leave a Reply