
ಸುದ್ದಿ ಬೆಳಕು ವಾರ್ತೆ
ಹುಣಸಗಿ: ಅಕ್ರಮವಾಗಿ ಸಾಗಿಸುತ್ತಿದ್ದರೆನ್ನಲಾದ 76 ಚೀಲ ಅಕ್ಕಿಯನ್ನು ಹುಣಸಗಿ ಪೊಲೀಸರು ವಶಪಡಿಸಿಕೊಂಡು, ಮೂವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಸೆ.2ರಂದು ರಾತ್ರಿ 8.30ರ ಸುಮಾರಿಗೆ ಹುಣಸಗಿ ತಾಲೂಕಿನ ಆರ್.ಕೆ.ನಗರ ತಾಂಡಾ ವ್ಯಾಪ್ತಿಯಲ್ಲಿ ಆಹಾರ ನಿರೀಕ್ಷಕರು ಹಾಗೂ ಪೊಲೀಸ್ ಸಿಬ್ಬಂದಿ ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಅಕ್ಕಿ ಸಾಗಿಸುತ್ತಿದ್ದ ವಾಹನ ಪತ್ತೆಯಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಪರಿಶೀಲನೆ ವೇಳೆ ಒಟ್ಟು *76 ಚೀಲ ಅಕ್ಕಿ* ಪತ್ತೆಯಾಗಿದ್ದು, ಪ್ರತಿ ಚೀಲದಲ್ಲಿ 50 ಕೆ.ಜಿ.ಯಂತೆ ಒಟ್ಟು 3,800 ಕೆ.ಜಿ. ಅಕ್ಕಿ ಇತ್ತು ಎಂದು ದಾಖಲಿಸಲಾಗಿದೆ.

ಎಫ್‌ಐಆರ್ ಪ್ರಕಾರ ಅಕ್ಕಿಯ ಅಂದಾಜು ಮೌಲ್ಯ ₹1,29,200. ಅಕ್ಕಿಯನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇರೆಗೆ **ಶಿವಂಗೌಡ ಸೋಮನಗೌಡ ಪೊಲೀಸ್ ಪಾಟೀಲ (25), ತಿಮ್ಮರೆಡ್ಡಿ ಹಾಗೂ ಸಂತೋಷ ರಾತೋಡ್* ಎಂಬವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣವು *ಅಗತ್ಯ ವಸ್ತುಗಳ ಕಾಯ್ದೆ, 1955ರ ಕಲಂ 3 ಮತ್ತು 7*ರ ಅಡಿಯಲ್ಲಿ ದಾಖಲಾಗಿದ್ದು, ಹುಣಸಗಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಎಫ್‌ಐಆರ್ ಪ್ರಕಾರ ಘಟನೆ ಸೆ.2ರಂದು ರಾತ್ರಿ ನಡೆದಿದ್ದು, ಸೆ.3ರಂದು ಮುಂಜಾನೆ 2.34ಕ್ಕೆ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಲಾಗಿದೆ.












Leave a Reply