
ಸುದ್ದಿ ಬೆಳಕು ವಾರ್ತೆ
ಯಾದಗಿರಿ ಏಪ್ರಿಲ್ 22 : ಯಾದಗಿರಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಸ್ಥಾನಗಳನ್ನು ಪ್ರಕಟಿಸಲಾಗಿದ್ದು, ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದಿಂದ ಅದಾಲತ್ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಸ್ಥಾನಗಳನ್ನು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ಪ್ರಕರಣ 5(1) ರಂತೆ ನಿಗದಿಪಡಿಸಲಾಗಿದೆ. ಆಯೋಗದ ವೆಬ್ ಸೈಟ್ ವಿಳಾಸ;
https://rdpr.karnataka.gov.in/rde/public/
ದಿನಾಂಕ:18-04-2026ರ ರಾಜ್ಯ ಪತ್ರದಲ್ಲಿ (ರಾಜ್ಯ ಪತ್ರದ ವಿಳಾಸ:
https://erajyapatra.karnataka.gov.in) ನಲ್ಲಿ ಪ್ರಕಟಿಸಲಾಗಿದೆ.
ಈ ಸದಸ್ಯ ಸ್ಥಾನಗಳ ಪ್ರಕಟಣೆ ಕುರಿತಂತೆ ದಿನಾಂಕ:24.04.2026ರ ರೊಳಗಾಗಿ ಆಯೋಗದ ವೈಬ್ ಸೈಟ್ ವಿಳಾಸ: https://rdpr.karnataka.gov.in/rdc/public/ ನಲ್ಲಿ ಅಥವಾ ಖುದ್ದಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗೇಟ್ ನಂ.2, 2ನೇ ಮಹಡಿ, ಕೋಟಡಿ ಸಂಖ್ಯೆ:229, 230 ಬಹು ಮಹಡಿಗಳ ಕಟ್ಟಡ ಬೆಂಗಳೂರು ಇವರ ಕಚೇರಿಯಲ್ಲಿ ಮಾತ್ರ ಸಲ್ಲಿಸಲು ಅವಕಾಶವಿದ್ದು, ಈ ವಿಷಯದ ಕುರಿತು ದಿನಾಂಕ:24.04.2026ರೊಳಗಗಿ ಸ್ವೀಕೃತವಾದ ಆಕ್ಷೇಪಣೆ ಹಾಗೂ ಅಹವಾಲುಗಳ ಪರಿಶೀಲನಾ ಅದಾಲತ್ ದಿನಾಂಕ :27.04.2026ರ ಸಮಯ ಬೆಳಿಗ್ಗೆ 11ಗಂಟೆಯಿಂದ ಮಧ್ಯಾಹ್ನ 1:30ವರೆಗೆ ನಡೆಯಲಿದ್ದು, ಅದಾಲತ್‌ನಲ್ಲಿ ಭಾಗವಹಿಸಲು ಇಚ್ಚಿಸಿದ್ದಲ್ಲಿ ಸರ್ಕಾರದಿಂದ ನೀಡಿರುವ ಭಾವಚಿತ್ರವುಳ್ಳ ಗುರುತಿನ ಚೀಟಿಯ ಮೂಲ ಪ್ರತಿಯನ್ನು ಕಡ್ಡಾಯವಾಗಿ ತರಕದ್ದು, ಎಂಬ ಮಾಹಿತಿಯನ್ನು ಹಾಗೂ ಯಾದಗಿರಿ ತಾಲೂಕು ಗ್ರಾಮ ಪಂಚಾಯಿತಿಗಳಾದ ಠಾಣಗುಂದಿ 19, ಅರಕೇರಾ (ಬಿ)- 22, ಮುದ್ನಾಳ-18, ಯರಗೋಳ- 22, ಅಲ್ಲಿಪೂರ-25, ಹತ್ತಿಕುಣಿ- 23, ಬಂದಳ್ಳಿ- 22, ಹೊನಗೇರಾ-25, ಮುಂಡರಗಿ- 24, ರಾಮಸಮುದ್ರ- 23, ಅರಕೇರಾ (ಕೆ)- 14, ವರ್ಕನಳ್ಳಿ- 21, ಹಳಿಗೇರಾ- 15, ಕೌಳೂರ- 21, ಮಲ್ಹಾರ- 15, ಬಳಿಚಕ್ರ- 22, ಬಾಡಿಯಾಲ- 17, ಬೆಳಗುಂದಾ-14, ಕಡೇಚೂರ- 25, ಕಿಲ್ಲನಕೇರಾ- 22, ಸೈದಾಪೂರ- 25, ಮೋಟ್ನಳ್ಳಿ- 25 ಚುನಾಯಿತ ಸದಸ್ಯರ ಸ್ಥಾನಗಳನ್ನು ಪ್ರಕಟಿಸಲಾಗಿದೆ ಎಂದು ಯಾದಗಿರಿ ತಹಶಿಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.










Leave a Reply