ಗಂಗಾವತಿ : ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಅಪೌಷ್ಟಿಕತೆಯನ್ನು ದೂರ ಮಾಡಲು ರಾಜ್ಯ ಸರ್ಕಾರ ಘೋಷಣ ಅಭಿಯಾನವನ್ನು ಅಂಗನವಾಡಿ ಕೇಂದ್ರಗಳ ಮೂಲಕ ಅನುಷ್ಠಾನ ಮಾಡುತ್ತಿದ್ದು ಇದರಿಂದ ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಅಪೌಷ್ಟಿಕತೆ ದೂರ ಮಾಡಿ ಪೌಷ್ಟಿಕ ಆಹಾರದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ವಿದ್ಯಾವತಿ ಹೇಳಿದರು.
ಅವರು ತಾಲೂಕಿನ ಕೃಷ್ಣಾಪುರ ಡಗ್ಗಿ ಅಂಗನವಾಡಿ ಕೇಂದ್ರದಲ್ಲಿ ಪೋಷಣ ಮಾಸಾಚರಣೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಕ್ಕಳು ಹಾಗೂ ಗರ್ಭಿಣಿಯರ ಆರೋಗ್ಯದ ಮೇಲೆ ಆಗುವ ಪರಿಣಾಮಗಳು ಮತ್ತು ಆಹಾರ ಸೇವನೆ ಕುರಿತು ಅಭಿಯಾನದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಒಂದು ವಾರಗಳ ಕಾಲ ಮಾಡಲಾಗುತ್ತದೆ ಗ್ರಾಮದ ಮಹಿಳೆಯರು ಆರೋಗ್ಯ ಮತ್ತು ಆಹಾರದ ಕುರಿತು ಮಾಹಿತಿಯನ್ನು ಪಡೆಯುವಂತೆ ಸಲಹೆ ನೀಡಿದರು.
ಇದೇ ಸಮಯದಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮದಲ್ಲಿ ಅಜೀಂ ಪ್ರೇಮ್ ಜೀ ಫೌಂಡೇಶನ್ ಸಂಚಾಲಕಿ ಸವಿತಾ, ಕೃಷ್ಣಾಪುರ ಅಂಗನವಾಡಿ ಕಾರ್ಯಕರ್ತೆ ಕವಿತಾ ಡೊಳ್ಳಿನ, ಅಂಗನವಾಡಿ ಕಾರ್ಯಕರ್ತೆ ಶರಣಮ್ಮ, ನಾಗರತ್ನ, ಗೀತಾ, ಸುಜಾತ,ಶ್ರೀದೇವಿ, ಸವಿತಾ, ಹನುಮಕ್ಕ, ಪದ್ಮಾವತಿ, ಭವಾನಿ,ನಾಗರತ್ನ ವಡ್ಡರಹಟ್ಟಿ, ಕಮಲಮ್ಮ, ಅಮರಮ್ಮ,ಯಲ್ಲಮ್ಮ,ಸಂಗಮ್ಮ ಸಹಾಯಕಿ ಹೊಳಿಯಮ್ಮ ಗ್ರಾಮದ ಮಹಿಳೆಯರಾದ ಈಶ್ವರಿ,ರಾಧಾ,ಲಕ್ಷ್ಮೀ,ರೇಣುಕಾ, ಸಂಗಮ್ಮ ಇನ್ನು ಮುಂತಾದವರು ಇದ್ದರು.
Leave a Reply