ಯಾದಗಿರಿ : ರೈತ ಮಹಿಳೆಯರ ಪರಿಶ್ರಮ ಮತ್ತು ಕೃಷಿ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ನಮ್ಮ ಕರುನಾಡ ರಕ್ಷಣಾ ವೇದಿಕೆಯ ವತಿಯಿಂದ ಜಿಲ್ಲಾಧ್ಯಕ್ಷ ರವಿ ಮುದ್ನಾಳ ಅವರ ನೇತೃತ್ವದಲ್ಲಿ ವಿಶೇಷ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಯಾದಗಿರಿಯ ಶ್ರೀ ಮರಳು ಸಿದ್ದೇಶ್ವರ ಮಠದ ಪೂಜ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮಕ್ಕೆ ಬಿಜೆಪಿ ಮುಖಂಡ ರಾಚನಗೌಡ ಮುದ್ನಾಳ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರೈತ ಮಹಿಳೆಯರು ಕೃಷಿ ಕ್ಷೇತ್ರದಲ್ಲಿ ಅಪಾರ ಶ್ರಮ ವಹಿಸುತ್ತಿದ್ದು, ಅವರ ಸೇವೆ ಮತ್ತು ಕೊಡುಗೆಯನ್ನು ಸಮಾಜ ಗುರುತಿಸಿ ಗೌರವಿಸಬೇಕು. ರೈತ ಮಹಿಳೆಯರನ್ನು ಸನ್ಮಾನಿಸುವ ಮೂಲಕ ಗೌರವ ಸಲ್ಲಿಸುತ್ತಿರುವ ನಮ್ಮ ಕರುನಾಡ ರಕ್ಷಣಾ ವೇದಿಕೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು. ಕಾರ್ಯಕ್ರಮವನ್ನು ರಾಚನಗೌಡ ಮುದ್ನಾಳ ಹಾಗೂ ಮಹೇಶರೆಡ್ಡಿಗೌಡ ಮುದ್ನಾಳ ಉದ್ಘಾಟಿಸಿದರು. ಪೂಜ್ಯರ ಸಾನ್ನಿಧ್ಯದಲ್ಲಿ ರೈತ ಮಹಿಳಾ ತಾಯಂದಿರಿಗೆ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಕರುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ರವಿ ಮುದ್ನಾಳ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಹೇಶ್ ಅವಂಟಿ, ಮನೋಜ್ ರಾಥೋಡ್, ಮಾಳಿಂಗರಾಯ ಕನಸುಗೂರು, ದಿಲೀಪ್ ಕುಮಾರ್ ದೋಖ, ವಿಜಯ ಭರತ್, ಭೀಮರಾಯ ತಾನಗುಂದಿ, ಕಾಸಿಂಸಾಬ್ ಗಡ್ಡೆ, ವೆಂಕಪ್ಪ ರಾಥೋಡ್, ಕಾಶಿನಾಥ್ ರಾಥೋಡ್, ಚಂದ್ರಕಲಾ ಗುತ್ತೇದಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಲೀಲಾ ಚವಾಣ್, ತಾಲೂಕು ಅಧ್ಯಕ್ಷೆ ಸುನಿತಾ ಹೆಚ್.ಎಸ್, ಗುರುಮಠಕಲ್ ತಾಲೂಕ ಅಧ್ಯಕ್ಷ ಅಶೋಕರೆಡ್ಡಿ ವಂಕಸಂಬ್ರ, ತಿಪ್ಪಯ್ಯ ವಂಕಸಂಬ್ರ ಅಧ್ಯಕ್ಷರು, ಭರತ್ ಮಾಧವಾರ್ ಗ್ರಾಮದ ಅಧ್ಯಕ್ಷರು, ಸೇರಿದಂತೆ ವೇದಿಕೆಯ ಪದಾಧಿಕಾರಿಗಳು ಹಾಗೂ ವಿವಿಧ ಗ್ರಾಮ ಘಟಕಗಳ ಮುಖಂಡರು ಭಾಗವಹಿಸಿದ್ದರು.
Leave a Reply