ಡಿ.ಇಎಲ್.ಇಡಿ ಕೋರ್ಸ್ಗೆ ಸರ್ಕಾರಿ ಕೋಟಾದ ಸೀಟುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ  : 2026-27ನೇ ಸಾಲಿನ ಡಿ.ಇಎಲ್.ಇಡಿ ಕೋರ್ಸ್ಗೆ ಸರ್ಕಾರಿ ಕೋಟಾದ ಸೀಟುಗಳ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಯಾದಗಿರಿ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಪ್ರಾಂಶುಪಾಲರು ಹಾಗೂ ಉಪನಿರ್ದೇಶಕರು (ಅಭಿವೃದ್ಧಿ) ಅವರು ತಿಳಿಸಿದ್ದಾರೆ.

ಡಿ.ಇಎಲ್.ಇಡಿ ಕೋರ್ಸ್ನ ವಿವಿಧ ಮಾಧ್ಯಮಗಳ ಪ್ರಥಮ ವರ್ಷದ ವ್ಯಾಸಂಗಕ್ಕಾಗಿ ದಾಖಲಾತಿ ಬಯಸುವ ಅಭ್ಯರ್ಥಿಗಳು ಇಲಾಖೆಯ ವೆಬ್‌ಸೈಟ್  www.schooleduction.kar.nic.in ನಲ್ಲಿ ಅಂರ್ತಜಾಲದ ಮುಖಪುಟದಲ್ಲಿ Application For D.El.Ed/D.S.P.E/D.P.Ed/Admission For Government Quota Seats : 2026-27ರ ಮೂಲಕ ಅರ್ಜಿಯನ್ನು ಡೌನ್ ಲೋಡ್ ಮಾಡಿಕೊಂಡು ಈ ಅರ್ಜಿಯನ್ನು ಭರ್ತಿಮಾಡಿ ಹಾಗೂ ಡಿಡಿಯೊಂದಿಗೆ ಡಯಟ್ ಕಛೇರಿಗೆ ಭೇಟಿ ನೀಡಿ ದಾಖಲಾತಿಗಾಗಿ 2026ರ ಜೂನ್ 1ರ ಒಳಗೆ ಸಲ್ಲಿಸಬೇಕು, ಕೊನೆಯ ದಿನಾಂಕದವರೆಗೆ ಕಾಯದೇ ಮುಂಚಿತವಾಗಿ ಅರ್ಜಿಗಳನ್ನು ಭರ್ತಿಮಾಡಲು ಅರ್ಹ ಅಭ್ಯರ್ಥಿಗಳು ಸಲ್ಲಿಸಬೇಕು, ಯಾದಗಿರಿ ಸರ್ಕಾರಿ ಶಿಕ್ಷಕರ ತರಬೇತಿ ಸಂಸ್ಥೆಯಲ್ಲಿ ಕಲಿಕಾ ಸೌಲಭ್ಯಗಳಿರುತ್ತವೆ, ಸರ್ಕಾರಿ ಸಂಸ್ಥೆ ಆಸಕ್ತಿ ಅಭ್ಯರ್ಥಿಗಳಿಗೆ ಆದ್ಯತೆಯ ಮೇರೆಗೆ ಈ ಸಂಸ್ಥೆಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಯಾದಗಿರಿ ಹಿರಿಯ ಉಪನ್ಯಾಸಕರು ಹಾಗೂ ಪಿ.ಎಸ್.ಟಿ.ಇ (ಡಯಟ್) ವಿಭಾಗದ ಮುಖ್ಯಸ್ಥರು ಶ್ರೀ ನಿಂಗಣ್ಣ ಮೊ.ನಂ. 9880666641, ಯಾದಗಿರಿ (ಡಯಟ್) ಉಪನ್ಯಾಸಕರು ಶ್ರೀಮತಿ ಸುಶೀಲಾ ಮೊ.ನಂ.  9482608722, ಯಾದಗಿರಿ(ಡಯಟ್)ದೈಹಿಕ ಶಿಕ್ಷಣ ಶಿಕ್ಷಕರು ಶ್ರೀವೆಂಕಟೇಶ ಮೊ.ನಂ. 9110600322ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Suddi Belaku