ಯಾದಗಿರಿ : ನಗರದ ಹೋಟೆಲ್ ಎನ್ವಿಎಂ ಸಭಾಂಗಣದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್ ಮತ್ತು ಯಾದಗಿರಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಯುವ ಮುಖಂಡ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ ರೆಡ್ಡಿ ವೆಂಕಟರೆಡ್ಡಿ ಮುದ್ನಾಳ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಬಿಜೆಪಿಗೆ ಸೇರ್ಪಡೆಗೊಂಡರು.
ನಗರದ ಸ್ಟೇಷನ್ ಏರಿಯಾ ಹಾಗೂ ಮಾತಾ ಮಾಣಿಕೇಶ್ವರಿ ನಗರದ ಪ್ರಮುಖ ಮುಖಂಡರು, ಪದವೀಧರರು ಹಾಗೂ ನಿವೃತ್ತರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಯುವ ಮುಖಂಡ ಮಹೇಶ ರೆಡ್ಡಿ ಮುದ್ನಾಳ ಅವರು ನೂತನವಾಗಿ ಪಕ್ಷಕ್ಕೆ ಸೇರ್ಪಡೆಯಾದ ಚಂದ್ರು ಬಿ. ರಾಠೋಡ್, ಸುಖದೇವ ಬೆಳಿಕೇರಿ, ದಿಲೀಪ್ ಜಾಧವ್, ನೇತಾಜಿ ಜಾಧವ್, ಕಿಶನ್ ಚವ್ಹಾಣ, ದೇವಲಾ ಚವ್ಹಾಣ, ಸುರೇಶ್ ರಾಠೋಡ್, ಸೋಮಣ್ಣ ವಡಗೇರಾ, ತಾಯಪ್ಪ ಜಿನಕೇರಾ, ಸುನೀಲ್ ಚವ್ಹಾಣ, ಹಣಮಂತ, ಸುಜಾಲ್, ಮಹೇಶ ಕಟ್ಟಿಮನಿ, ಕಾಶೀರಾಯ ಕುಂಬಾರ, ಗಿರೀಶ, ಶರಣು ಕುಂಬಾರ, ಗೋವಿಂದಪ್ಪ ಮಡಿವಾಳ ಹಾಗೂ ರಾಜಕುಮಾರ ಡೊಳ್ಳಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ನಾವೆಲ್ಲರೂ ಒಗ್ಗಟ್ಟಿನಿಂದ ಪಕ್ಷದ ಸಂಘಟನೆಯ ಬಲವರ್ಧನೆಗೆ ಶ್ರಮಿಸಿ, ಪಕ್ಷದ ಅಭಿವೃದ್ಧಿಗೆ ಕೈಜೋಡಿಸೋಣ ಎಂದು ನೂತನ ಸದಸ್ಯರಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜಪ್ಪಗೌಡ ವಿಭೂತಿಹಳ್ಳಿ, ಹಿರಿಯ ಮುಖಂಡ ಸಿದ್ದಣಗೌಡ ವಡಗೇರಾ, ಕಲಬುರಗಿ ಮಾಜಿ ಮೇಯರ್ ವಿಶಾಲ್ ದರ್ಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರುಕುಂದಿ, ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ, ಯುವ ಮೋರ್ಚಾ ಅಧ್ಯಕ್ಷ ಲಕ್ಷ್ಮೀಪುತ್ರ ಮಾಲಿ ಪಾಟೀಲ, ನಗರದ ಪ್ರಧಾನ ಕಾರ್ಯದರ್ಶಿಗಳಾದ ರಮೇಶ ದೊಡ್ಡಮನಿ ಮತ್ತು ಮಲ್ಲಿಕಾರ್ಜುನ ಕಟ್ಟಿಮನಿ, ಮಾಜಿ ನಗರಸಭೆ ಸದಸ್ಯರಾದ ಸ್ವಾಮಿದೇವ ದಾಸನಕೇರಿ ಹಾಗೂ ಚೆನ್ನಯ್ಯ ಮಾಲಿಕೆರಿ ಸೇರಿದಂತೆ ಜಿಲ್ಲಾ ಪದಾಧಿಕಾರಿಗಳು, ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Reply