ಬೆಂಕಿ ಅವಘಡ ಪೀಡಿತ ರೈತನ ಹೊಲಕ್ಕೆ ಶಾಸಕ ತುನ್ನೂರು ಭೇಟಿ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ: ತಾಲೂಕಿನ ನಾಯಕಲ್ ಗ್ರಾಮದ ಖಾಸಿಂಸಾಬ್ ಹೊರಕೂರ ಅವರಿಗೆ ಸೇರಿದ ಹೊಲದಲ್ಲಿ ಬೆಂಕಿ ಹತ್ತಿದ ಪರಿಣಾಮ ಅಲ್ಲಿದ್ದ ಕಣಕಿ, ಹೊಟ್ಟು, ಸೊಪ್ಪು ಮತ್ತು ಪೈಪ್ ಲೈನ್ ಸಾಮಾನುಗಳು ಸುಟ್ಟು ಹಾನಿಯಾಗಿದ್ದನ್ನು ತಿಳಿದ ಯಾದಗಿರಿ ವಿಧಾನ ಸಭಾ ಮತಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಚನ್ನಾರೆಡ್ಡಿ ಪಾಟೀಲ ತುನ್ನೂರು ಅವರು ರವಿವಾರ ಭೇಟಿ ನೀಡಿ ವಿಕ್ಷೀಸಿದರು.
ಹೊಲದ ಮಾಲಿಕರಾದ ಖಾಸಿಂಸಾಬ್ ಹೊರಕುರ ಅವರೊಂದಿಗೆ ಮಾತನಾಡಿದ ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಬೆಂಕಿ ಹತ್ತಿದ ಬಗ್ಗೆ ಕೇಳಿದರು. ಸುಟ್ಟ ಸಾಮಾನುಗಳು ಏನೇನು ಇದ್ದವು ಎಂದು ವಿಚಾರಿಸಿದರು. ಪರಿಹಾರ ಸಿಗುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನ ಮಾಡುತ್ತೆನೆ ಭರವಸೆ ನೀಡಿದರು.
ಶಾಸಕರ ಭೇಟಿ ವೇಳೆ ವಡಗೇರಾ ತಹಸಿಲ್ದಾರರು, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ವಡಗೇರಾ ತಾಲುಕು ಅಧ್ಯಕ್ಷ ಖಾಜಾ ಮೈನೋದ್ದಿನ್ ಮಿರ್ಚಿ, ಜಾವೇದ್ ನಾಯಕಲ್ , ಶರಣಗೌಡ, ಮರೆಪ್ಪ ಬಿಳ್ಹಾರ, ಮಲ್ಲಣ್ಣಗೌಡ ಗೊಸ್ವಾಮಿ, ಭಾಷುಮಿಯ್ಯ ಹೊನಳ್ಳಿ, ರಸೂಲಸಾಬ ಬಾರಕೆರ ಇದ್ದರು.

Leave a Reply

Your email address will not be published. Required fields are marked *

Suddi Belaku