by
Category: ಯಾದಗಿರಿ ಸುದ್ದಿ
News Acritical

ಯಾದಗಿರಿ ಯೀಮ್ಸ್‌ನಲ್ಲಿ ವಿದ್ಯಾರ್ಥಿಗಳು, ರೋಗಿಗಳಿಗೆ ಮೂಲಸೌಕರ್ಯ ಒದಗಿಸಿದ ತೃಪ್ತಿ: ಡಾ. ಪಾಟೀಲ್
ಸುದ್ದಿ ಬೆಳಕು ವಾರ್ತೆ ಯಾದಗಿರಿ : ನನ್ನ ೨ ವರ್ಷದ ಅಧಿಕಾರವಧಿಯಲ್ಲಿ ಇಲ್ಲಿನ ಸರ್ಕಾರಿ ಮೆಡಿಕಲ್ ಕಾಲೇಜು ವಿಧ್ಯಾರ್ಥಿಗಳಿಗೆ ಗುಣಮಟ್ಟದ ವೈಧ್ಯಕೀಯ ಶಿಕ್ಷಣ ದೊರೆಯಲು ಅಗತ್ಯ ಬೋಧಕರನ್ನು ನೇಮಕ ಮಾಡಲಾಗಿದೆ, ಅಲ್ಲದೇ ಇಲ್ಲಿನ ಯೀಮ್ಸ್ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಆದ್ಯತೆ ನೀಡಲಾಗಿದೆ ಎಂದು ಯೀಮ್ಸ್ ನಿರ್ದೇಶಕ ಸಂದೀಪ್ ಪಾಟೀಲ್ ಹೇಳಿದರು. ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ಬೆಂಗಳೂರಿನ ರಾಜೀವ್‌ಗಾಂಧಿ ವಿಶ್ವವಿದ್ಯಾನಿಲಯದ ರಜಿಸ್ಟರ್ ಮೌಲ್ಯಮಾಪನ ವಿಭಾಗಕ್ಕೆ ಪದೋನ್ನತಿ ಹೊಂದಿದ ಪ್ರಯುಕ್ತ ಹಮ್ಮಿಕೊಂಡಿದ್ದ ಬಿಳ್ಕೋಡುಗೆ ಸಮಾರಂಭದಲ್ಲಿ ಸನ್ಮಾನ…

ಯಾದಗಿರಿ ವಾರ್ಡ್ 25ರಲ್ಲಿ 24×7 ನಳ ಸಂಪರ್ಕವಿದ್ದರೂ ಸಮರ್ಪಕ ನೀರು ಪೂರೈಕೆ ಇಲ್ಲ
ಸುದ್ದಿ ಬೆಳಕು ವಾರ್ತೆ ಯಾದಗಿರಿ : ನಗರದ ವಾರ್ಡ್ ನಂ.25 ರ ಬಸವೇಶ್ವರನಗರ, ದೊಕಾ ಜೈನ್ಸ್ ಶಾಲೆ ಎದುರಿನ ಬಡಾವಣೆಯಲ್ಲಿ 24×7 ನಳದ ಸಂಪರ್ಕವಿದ್ದರೂ ಸಮರ್ಪಕವಾಗಿ ನೀರು ಸರಬರಾಜಾಗುತ್ತಿಲ್ಲ ಎಂದು ನಿವಾಸಿಗಳು ಆರೋಪಿಸಿದ್ದಾರೆ. 24×7 ನಳದ ಸಂಪರ್ಕ ಪಡೆದ ಆರಂಭದ ದಿನದಿಂದಲೂ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದ್ದು, ಕುಡಿಯುವ ನೀರು ಸೇರಿದಂತೆ ದಿನನಿತ್ಯದ ಅಗತ್ಯಗಳಿಗೆ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಿಯಮಿತವಾಗಿ ಹಾಗೂ ಸಮರ್ಪಕ ಪ್ರಮಾಣದಲ್ಲಿ ನೀರು ಪೂರೈಕೆ ಮಾಡುವಂತೆ ಹಲವು ಬಾರಿ ಮನವಿ ಮಾಡಿದರೂ ಸಮಸ್ಯೆ ಬಗೆಹರಿದಿಲ್ಲ…
by

ಸೆ.27ರಂದು ಹುಬ್ಬಳ್ಳಿಯಲ್ಲಿ ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ರಾಜ್ಯ ಮಟ್ಟದ ಬೃಹತ್ ಅಭಿನಂದನಾ ಸಮಾರಂಭ
ಸುದ್ದಿ ಬೆಳಕು ವಾರ್ತೆ ಯಾದಗಿರಿ : ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಹುಬ್ಬಳ್ಳಿಯಲ್ಲಿ ಸೆಪ್ಟೆಂಬರ್ 27 ರಂದು ವೀರಶೈವ ಲಿಂಗಾಯತ ರೆಡ್ಡಿ ಸಮುದಾಯದ ರಾಜ್ಯ ಮಟ್ಟದ ಬೃಹತ್ ಅಭಿನಂದನಾ ಸಮಾರಂಭ ನಡೆಯಲಿದೆ ಎಂದು ಜಿಲ್ಲಾಧ್ಯಕ್ಷ ರಾಜಶೇಖರ ಪಾಟೀಲ ವಜ್ಜಲ್ ತಿಳಿಸಿದ್ದಾರೆ. ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ವೀರಶೈವ ಲಿಂಗಾಯತ ರೆಡ್ಡಿ ಸಮಾಜ ಬೆಂಗಳೂರು ಹಾಗೂ ಧಾರವಾಡ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಈ ಸಮಾರಂಭ ಆಯೋಜಿಸಲಾಗಿದೆ. ಹುಬ್ಬಳ್ಳಿಯ…
by

ರೈತರ ಖಾತೆಗೆ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರ ಜಮೆ ಮಾಡಿ: ರೈತ ಸಂಘ ಒತ್ತಾಯ
ಸುದ್ದಿ ಬೆಳಕು ವಾರ್ತೆ ಯಾದಗಿರಿ: ಜಿಲ್ಲೆಯಲ್ಲಿ ಬರಗಾಲ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ರೈತರ ಖಾತೆಗೆ ಪ್ರತಿ ಹೆಕ್ಟೇರ್‌ಗೆ ₹50 ಸಾವಿರ ಪರಿಹಾರವನ್ನು ತಕ್ಷಣ ಜಮೆ ಮಾಡಬೇಕು. ಬೆಳೆ ವಿಮೆ ಹಾಗೂ ಇನ್ಶುರೆನ್ಸ್ ಮೊತ್ತವನ್ನು ವಿಳಂಬವಿಲ್ಲದೆ ಪಾವತಿಸಬೇಕು. ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಆಗ್ರಹಿಸಿದೆ. ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ವೆಂಕೋಬ ಕಟ್ಟಿಮನಿ, ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಈ…
by

ಅರ್ಹ ಮತದಾರರ ಹಕ್ಕು ಕಸಿಯಲು ಬಿಡುವುದಿಲ್ಲ: ಪ್ರಕಾಶ್ ರೈ
ಸುದ್ದಿ ಬೆಳಕು ವಾರ್ತೆ ಶಹಾಪುರ : ಅರ್ಹ ಮತದಾರರ ಹೆಸರುಗಳನ್ನು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಕೈಬಿಡಬಾರದು. ಮತದಾನದ ಹಕ್ಕಿನ ರಕ್ಷಣೆಗೆ ಎಲ್ಲರೂ ಜಾಗೃತರಾಗಬೇಕು ಎಂದು ನಟ ಹಾಗೂ ಸಾಮಾಜಿಕ ಹೋರಾಟಗಾರ ಪ್ರಕಾಶ್ ರೈ ಕರೆ ನೀಡಿದರು. ನಗರದ ಹಳೆ ಪ್ರವಾಸಿ ಮಂದಿರದಲ್ಲಿ ಬುಧವಾರ ನಡೆದ ‘ಎಸ್‌ಐಆರ್ ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’ದ ಸಂದರ್ಭದಲ್ಲಿ ಮಾತನಾಡಿದ ಅವರು, ಎಸ್‌ಐಆರ್ (ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆ ಕರ್ನಾಟಕದಲ್ಲಿ ಹಲವು ಪರಿಣಾಮಗಳನ್ನು ಉಂಟುಮಾಡಿದೆ ಎಂದು ಹೇಳಿದರು. ‘ಇದು…
by

ವಡಗೇರಾ ತಡಿಬಿಡಿಯಲ್ಲಿ ಕೋಳಿ ಸಾಕಾಣಿಕೆ ಕೇಂದ್ರ ಕಾಮಗಾರಿ ಸ್ಥಗಿತಕ್ಕೆ ಕರವೇ ಆಗ್ರಹ
ಸುದ್ದಿ ಬೆಳಕು ವಾರ್ತೆ ಯಾದಗಿರಿ : ವಡಗೇರಾ ತಾಲೂಕಿನ ತಡಿಬಿಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿರುವ ಕೋಳಿ ಸಾಕಾಣಿಕೆ ಕೇಂದ್ರದ ಕಾಮಗಾರಿ ಕೂಡಲೇ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಸ್ವಾಭಿಮಾನಿ ಬಣದ ವತಿಯಿಂದ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಸಂಘಟನೆಯ ಜಿಲ್ಲಾಧ್ಯಕ್ಷ ಬೀರೇಶ ಚಿರತೆನೋರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ತಡಿಬಿಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಂಡೇಕಲ್ ಗ್ರಾಮದ ಸರ್ವೇ ನಂಬರ್‌ಗಳಿಗೆ ಸಂಬಂಧಿಸಿದ ಜಮೀನಿನಲ್ಲಿ ದಂಡಿರಾಮರಡ್ಡಿ ಅವರ ಪರವಾಗಿ ರಾಕಾಶಿ ನಾಗರಡ್ಡಿ ಅವರ ಎಂ.ಎಸ್.…
by

ಕಿಲ್ಲನಕೇರಾದಲ್ಲಿ ಕಮಲಮ್ಮ ಅವರ ಶತಮಾನೋತ್ಸವ: 100ನೇ ಹುಟ್ಟುಹಬ್ಬ ಆಚರಣೆ
ಸುದ್ದಿ ಬೆಳಕು ವಾರ್ತೆ ಯಾದಗಿರಿ : ನೂರು ವರ್ಷ ಎನ್ನುವುದು ಕೇವಲ ಒಂದು ಸಂಖ್ಯೆ ಅಲ್ಲ; ಅದು ಬದುಕಿನ ನೂರಾರು ನೆನಪುಗಳು, ಸಾವಿರಾರು ಅನುಭವಗಳು, ಕಷ್ಟ–ಸುಖಗಳ ಪಯಣ ಹಾಗೂ ಹಲವು ತಲೆಮಾರುಗಳನ್ನು ಕಣ್ಣಾರೆ ಕಂಡ ಅಪರೂಪದ ಜೀವನಗಾಥೆ. ಇಂತಹ ಸಾರ್ಥಕ ಬದುಕಿನ ಶತಮಾನೋತ್ಸವಕ್ಕೆ ಯಾದಗಿರಿ ತಾಲೂಕಿನ ಕಿಲ್ಲನಕೇರಾ ಗ್ರಾಮದ ಶ್ರೀಮತಿ ಕಮಲಮ್ಮ ಗಂಡ ಯಲ್ಲಪ್ಪ ಹಡಪದ ಅವರು ಸಾಕ್ಷಿಯಾಗಿದ್ದು, ಅವರ 100ನೇ ವರ್ಷದ ಹುಟ್ಟುಹಬ್ಬವನ್ನು ಕುಟುಂಬಸ್ಥರು ಪ್ರೀತಿ–ಸಂಭ್ರಮದಿಂದ ಆಚರಿಸಿದರು. ಬದುಕಿನ ಶತಮಾನವನ್ನು ಪೂರೈಸಿದ ಕಮಲಮ್ಮ ಅವರ ಸುತ್ತ ಮಕ್ಕಳು,…
by

ಯಾದಗಿರಿಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ: ಆಯುಷ್ ಜಿಲ್ಲಾಸ್ಪತ್ರೆ ನಿರ್ಮಾಣಕ್ಕೆ ಒತ್ತು
ಸುದ್ದಿ ಬೆಳಕು ವಾರ್ತೆ ಯಾದಗಿರಿ : ನಮ್ಮ ದೇಶದಲ್ಲಿ ಆಯುರ್ವೇದ ಮೂಲ ಚಿಕಿತ್ಸಾ ಪದ್ದತಿಯಾಗಿದೆ, ಅದರ ಲಾಭಗಳು ಹೆಚ್ಚು, ಅದರ ಸೇವೆಗಳು ಜಿಲ್ಲೆಯ ಜನರಿಗೆ ಹೆಚ್ಚಿನ ಪ್ರಮಾಣದಲ್ಲಿ ಸಿಗಬೇಕು, ಆ ದಿಶೆಯಲ್ಲಿ ಬಹಳ ವರ್ಷದಿಂದ ನೆನೆಗುದಿಗೆ ಬಿದ್ದಿರುವ ಆಯುಷ್ ಜಿಲ್ಲಾಸ್ಪತ್ರೆ ನಿರ್ಮಾಣ ಯೋಜನೆಗೆ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಅನುಷ್ಟಾನಕ್ಕೆ ಗಮನ ಹರಿಸುತ್ತೇವೆ ಎಂದು ನಗರಾಭಿವೃದ್ಧಿ ಅಧ್ಯಕ್ಷ ಬಾಬುರಾವ್ ಕಾಡ್ಲೂರ ಹೇಳಿದರು, ನಗರದ ಹೊರವಲಯದಲ್ಲಿರುವ ನಿವೇದಿತಾ ನರ್ಸಿಂಗ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾಡಳಿತ, ಆಯುಷ್ ಇಲಾಖೆಯಿಂದ ಹಮ್ಮಿಕೊಂಡಿದ್ದ…
by
- ಅಕ್ಟೋಬರ್ 3ರಿಂದ ಗುರುಮಠಕಲ್–ಮುಂಬೈ ಬಸ್ ಸೇವೆ ಪುನರಾರಂಭ

- ಯಾದಗಿರಿಯಲ್ಲಿ ಹಿರಿಯ ನಾಗರಿಕರ ದಿನಾಚರಣೆ: ಹಿರಿಯರ ಪಾಲನೆ ಪ್ರತಿಯೊಬ್ಬರ ಕರ್ತವ್ಯ

- ಕಡೆಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದ ಕಾರ್ಮಿಕ ಸಾವು: ಮರಣೋತ್ತರ ಪರೀಕ್ಷೆಗೆ ಆಗ್ರಹ

- ವಿಧಾನಸೌಧದ ಮೆಟ್ಟಿಲುಗಳಲ್ಲಿ ಉರ್ದು ಹಬ್ಬ: ಟಿ.ಎನ್. ಭೀಮುನಾಯಕ ವಿರೋಧ

- ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ ಆರೋಪ: ಅಜ್ಜನ ವಿರುದ್ಧ ಪೋಕ್ಸೋ ಪ್ರಕರಣ
















