
ಸುದ್ದಿ ಬೆಳಕು ವಾರ್ತೆ
ಯಾದಗಿರಿ : ಜಿಲ್ಲೆಯ ಗುರುಮಠಕಲ್ ತಾಲೂಕಿನ ಕಡೆ ಚೂರು-ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಅನೀಲ ಸೋರಿಕೆಯಿಂದ ಮೂವರು ಬಡ ಕಾರ್ಮಿಕರ ಮೃತಪಟ್ಟಿರುವ ನೋವು ತಣ್ಣಗಾಗುವ ಮುನ್ನವೇ ಗುರುವಾರ ಸಂಜೆ ಮತ್ತೊಂದು ಅವಘಡ ಸಂಭವಿಸಿದೆ. ರಾಮಿಸ್ ಕೆಮಿಕಲ್ ಕಂಪನಿಯಲ್ಲಿ ರಾಸಾಯನಿಕ ವಸ್ತುಗಳನ್ನು ಅಪ್ಲೋಡ್ ಮಾಡುವ ವೇಳೆ ಅಯಾನ್ ಸಂಶೋದ್ದಿನ್ ಹುಮನಾಬಾದ (21) ಎಂಬ ಕಾರ್ಮಿಕ ಗಂಭೀರವಾಗಿ ಅಸ್ವಸ್ಥಗೊಂಡು ಉಸಿರಾಟದ ತೊಂದರೆ ಅನುಭವಿಸಿದ್ದಾನೆ. ಕೂಡಲೇ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಆತನನ್ನು ಕಳುಹಿಸಲಾಗಿದೆ. ಹೀಗಾಗಿ ಈ ಕೈಗಾರಿಕೆ ಪ್ರದೇಶದಲ್ಲಿರುವ 70ಕ್ಕೂ ಹೆಚ್ಚು ಕೆಮಿಕಲ್ ಕಂಪನಿಗಳಲ್ಲಿ ಯಾವಾಗ ಏನು ದುರ್ಘಟನೆ ನಡೆಯುತ್ತದೆಯೋ ಎಂಬ ಆಂತಕ ಅಲ್ಲಿನ ಸಾವಿರಾರು ಕಾರ್ಮಿಕರಲ್ಲಿ ಮನೆ ಮಾಡಿದೆ.ಬು ಧವಾರ ಬೆಳಗ್ಗೆ ಅಲ್ಲಿನ ಸಿಲ್ ಕೆಮಿಕಲ್ ಕಂಪನಿಯಲ್ಲಿ ಅನೀಲ ಸೋರಿಕೆಯಿಂದಾಗಿ ಮೂವರು ಮೃತಪಟ್ಟಿದ್ದರು. ಗಾಯಗೊಂಡ ಇಬ್ಬರನ್ನು ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರು ಚಿಕಿತ್ಸೆ ಸ್ಪಂಧಿಸುತ್ತಿದ್ದಾರೆ.











Leave a Reply