by
Category: ಯಾದಗಿರಿ ಸುದ್ದಿ
News Acritical

ಯಾದಗಿರಿಯಲ್ಲಿ ಜೆಸ್ಕಾಂ ಇಎಚ್ ಟಿ, ಎಚ್ ಟಿ ಗ್ರಾಹಕರ ಕುಂದುಕೊರತೆ ಸಭೆ
ಸುದ್ದಿ ಬೆಳಕು ವಾರ್ತೆ ಯಾದಗಿರಿ : ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿ ನಿಯಮಿತದ ಯಾದಗಿರಿ ಜಿಲ್ಲೆಯ ಎಲ್ಲಾ ಇಎಚ್ ಟಿ ಮತ್ತು ಎಚ್ ಟಿ ವಿದ್ಯುತ್ ಗ್ರಾಹಕರ ಕುಂದು,ಕೊರತೆ ಸಭೆಯು ಮಂಗಳವಾರ ಇಲ್ಲಿನ ಜೆಸ್ಕಾಂ ಕಚೇರಿ ಸಭಾಂಗಣದಲ್ಲಿ ನಡೆಯಿತು. ಜೆಸ್ಕಾಂ ಎಸ್ ಸಿ ಖಂಡೆಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಉದ್ಯಮಿಗಳು, ಕೈಗಾರಿಕಾ ಮಾಲಿಕರು ಮತ್ತು ಅನೇಕ ಗ್ರಾಹಕರು ಭಾಗವಹಿಸಿದ್ದರು. ಈ ವೇಳೆ ವಿದ್ಯುತ್ ಸಂಪರ್ಕದಲ್ಲಿ ಆಗುತ್ತಿರುವ ತೊಂದರೇ ಮತ್ತು ಅಗತ್ಯ ಸೌಲಭ್ಯಗಳ ಬಗ್ಗೆ ಗ್ರಾಹಕರು…

ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಫಾರ್ಮಾಸಿಸ್ಟ್ ಗಳ ಪಾತ್ರ ಮುಖ್ಯ: ದೇಸಾಯಿ
ಸುದ್ದಿ ಬೆಳಕು ವಾರ್ತೆ ಯಾದಗಿರಿ : ಫಾರ್ಮಾಸಿಸ್ಟ್ ಗಳು ಭವಿಷ್ಯದ ಆರೋಗ್ಯದ ಕಾಳಜಿ ವಹಿಸಿ ಸಾರ್ವಜನಿಕರ ಆರೋಗ್ಯ ರಕ್ಷಣೆಯಲ್ಲಿ ಫಾರ್ಮಾಸಿಸ್ಟ್ ಗಳ ಪಾತ್ರ ಬಹು ಮುಖ್ಯವಾಗಿದೆ ಎಂದು ಅಖಿಲ ಭಾರತೀಯ ಫಾರ್ಮಾಸಿಸ್ಟ್ ಸಂಘದ (ಎಐಪಿಎ) ರಾಷ್ಟ್ರೀಯ ಅಧ್ಯಕ್ಷರಾದ ಡಾ.ಬಿ.ಎಸ್.ದೇಸಾಯಿ ಅವರು ಹೇಳಿದ್ದಾರೆ. ಅವರು ಮಂಗಳವಾರ ನಗರದ ಕನಕವೃತ್ತದ ಸಮೀಪದ ಡಿಎಚ್ ಓ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘ ದಿಂದ ಹಮ್ಮಿಕೊಂಡ ವಿಶ್ವ ಫಾರ್ಮಾಸಿಸ್ಟ್ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ವೈದ್ಯರು ರೋಗ ನಿರ್ಣಯ…
by

ಟ್ರ‍್ಯಾಕ್ಟರ್ ಮೂಲಕ ಹತ್ತಿ ಬೆಳೆ ನಾಶ ಮಾಡಿದ ರೈತ
ಸುದ್ದಿ ಬೆಳಕು ವಾರ್ತೆ ಶಹಾಪುರ : ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟ ಹಿನ್ನೆಲೆಯಲ್ಲಿ ತೇವಾಂಶದ ಕೊರತೆಯಿಂದ ಹತ್ತಿ ಗಿಡಗಳು ಬೆಳವಣಿಗೆ ಕಾಣದೆ ಒಣಗಿ ಹೋದ ಪರಿಣಾಮ, ಕಂಗಾಲಾದ ರೈತರೊಬ್ಬರು ತಾವು ಸಾಲ-ಸೋಲ ಮಾಡಿ ಬೆಳೆದಿದ್ದ ಬರೋಬ್ಬರಿ 7 ಎಕರೆ ಹತ್ತಿ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ಮಾಡಿ ಸಂಪೂರ್ಣ ನಾಶಪಡಿಸಿದ ಮನಕಲಕುವ ಘಟನೆ ಸಮೀಪದ ದೋರನಹಳ್ಳಿ ಗ್ರಾಮದಲ್ಲಿ ನಡೆದಿದೆ. ದೋರನಹಳ್ಳಿ ಪಟ್ಟಣದ ರೈತ ಕಾಳಪ್ಪ ಪತ್ತಾರ ಅವರು ಗ್ರಾಮದ ಸರ್ವೆ ನಂ. 44/01 ರಲ್ಲಿರುವ ತಮ್ಮ 7 ಎಕರೆ…
by

ಯಾದಗಿರಿಯಲ್ಲಿ ಎನ್. ರವಿಕುಮಾರ್, ಬಿ.ಜಿ. ಪಾಟೀಲರಿಗೆ ಸನ್ಮಾನ
ಸುದ್ದಿ ಬೆಳಕು ವಾರ್ತೆ ಯಾದಗಿರಿ : ಜಿಲ್ಲಾ ಭಗೀರಥ ಸಮಾಜದ ಜಿಲ್ಲಾಧ್ಯಕ್ಷರಾದ ಮಲ್ಲಿಕಾರ್ಜುನ ಕಟ್ಟಿಮನಿ ಅವರು ಪಾಟೀಲ ನಗರದ ತಮ್ಮ ನಿವಾಸಕ್ಕೆ ಭೇಟಿ ಕೊಟ್ಟ ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಬಿ.ಜಿ.ಪಾಟೀಲ ಅವರಿಗೆ ಮಲ್ಲಿಕಾರ್ಜುನ ಕಟ್ಟಿಮನಿ ಅವರು ಸನ್ಮಾನಿಸಿ ಗೌರವಿಸಿದರು. ಈ ವೇಳೆ ಬಿಜೆಪಿ ಮುಖಂಡರು ಇದ್ದರು.
by

ಎಸ್‌ಐಆರ್ ವಿರುದ್ಧ ಯಾದಗಿರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
ಯಾದಗಿರಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಹಾಗೂ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿದ್ದ ಪ್ರತಿಭಟನೆಯ ಭಾಗವಾಗಿ ಯಾದಗಿರಿ ಜಿಲ್ಲಾ ಕೇಂದ್ರದಲ್ಲಿಯೂ ಕಾಂಗ್ರೆಸ್ ಸಮಿತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು. ನಗರದ ಸುಭಾಷ್ ಚಂದ್ರ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಸ್‌ಐಆರ್ ಪ್ರಕ್ರಿಯೆ ಹಾಗೂ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಕಾಂಗ್ರೆಸ್ ಮುಖಂಡರು…
by

ಗುರುಸುಣಗಿ ಹಲ್ಲೆ ಪ್ರಕರಣ: ಅ.1ರಂದು ವಡಗೇರಾ ಬಂದ್ ಎಚ್ಚರಿಕೆ
ಸುದ್ದಿ ಬೆಳಕು ವಾರ್ತೆ ವಡಗೇರಾ : ಗುರುಸುಣಗಿ ಬೆಟ್ಟದ ದೇವಸ್ಥಾನದ ಆವರಣದಲ್ಲಿ ದಲಿತರ ಮೇಲೆ ನಡೆದಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಿದ್ದರೆ ಅಕ್ಟೋಬರ್ 1ರಂದು ವಡಗೇರಾ ತಾಲೂಕು ಬಂದ್ ನಡೆಸಲಾಗುವುದು ಎಂದು ಮಾದಿಗ ದಂಡೋರ (MRPS) ಯಾದಗಿರಿ ಜಿಲ್ಲಾ ಸಮಿತಿ ಅಧ್ಯಕ್ಷ ಕಾಶಪ್ಪ ಮಾದಿಗ ಹೆಗ್ಗಣಗೆರಾ ಎಚ್ಚರಿಕೆ ನೀಡಿದರು. ಪಟ್ಟಣದಲ್ಲಿ ಸೆ.27ರಂದು ನಡೆದ ಮಾದಿಗ ದಂಡೋರ (MRPS) ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಗುರುಸುಣಗಿ ಬೆಟ್ಟದ…
by

ಪ್ರಾಚೀನ ಸ್ಮಾರಕಗಳನ್ನು ಉಳಿಸುವುದು ಪ್ರತಿಯೊಬ್ಬರ ಕರ್ತವ್ಯ: ಬಾಬುರಾವ್ ಕಾಡ್ಲುರ್
ಸುದ್ದಿ ಬೆಳಕು ವಾರ್ತೆ ಯಾದಗಿರಿ : ಜಗತ್ತನ್ನು ಅರಿಯಲು ಹಾಗೂ ಜ್ಞಾನವನ್ನು ಪಡೆಯಲು ಪ್ರವಾಸ ಉತ್ತಮ ಮಾರ್ಗವಾಗಿದೆ. ಪ್ರಾಚೀನ ಭವ್ಯ ಕುರುಹುಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲುರ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ, ಯಾದಗಿರಿ ಜಿಲ್ಲೆ ವತಿಯಿಂದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಭಾನುವಾರ ನಗರದ ಲುಂಬಿನಿ ವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿ…
by

ಯಾದಗಿರಿಯ ಆರ್.ವಿ. ವಿದ್ಯಾಸಂಸ್ಥೆಯಲ್ಲಿ ಶ್ರೀಗೌರಿ–ಗಣೇಶ ಹಬ್ಬ ಸಂಭ್ರಮ; ಎಐ ಶಿಕ್ಷಣಕ್ಕೆ ಒತ್ತು
ಸುದ್ದಿ ಬೆಳಕು ವಾರ್ತೆ ಯಾದಗಿರಿ : ಆರ್.ವಿ. ವಿದ್ಯಾಸಂಸ್ಥೆಯು ಶೈಕ್ಷಣಿಕ ಕ್ಷೇತ್ರದಲ್ಲಿ ವಿವಿಧ ಆಯಾಮಗಳು ಹಾಗೂ ನೂತನ ಆಲೋಚನೆಗಳೊಂದಿಗೆ ಹಲವು ವರ್ಷಗಳಿಂದ ಶೈಕ್ಷಣಿಕ ಚಟುವಟಿಕೆಗಳನ್ನು ಹಮ್ಮಿಕೊಂಡು ಬರುತ್ತಿದೆ. ಇದರ ಭಾಗವಾಗಿ ಸಂಸ್ಥೆಯಲ್ಲಿ ಶ್ರೀಗೌರಿ-ಗಣೇಶ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ರಾಜ್ಯಮಟ್ಟದ ರಾಜೀವ್ ಗಾಂಧಿ ಶ್ರೇಷ್ಠ ಶಿಕ್ಷಕ ಪ್ರಶಸ್ತಿ ವಿಜೇತ ಶ್ರೀ ನಾಗರಾಜ್ ಭಾಸ್ಕರ್ ಅವರು, ಶೈಕ್ಷಣಿಕ ಕ್ಷೇತ್ರದಲ್ಲಿ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಭಾವನೆ ಮೂಡಿಸುವಲ್ಲಿ ಸಂಸ್ಥೆ ಮಹತ್ವದ ಪಾತ್ರ ವಹಿಸುತ್ತಿದೆ ಎಂದರು. ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳಲ್ಲಿ…
by

ಚಟ್ನಳ್ಳಿ–ಗುಂಡಳ್ಳಿ ಕ್ರಾಸ್ ರಸ್ತೆಯಲ್ಲಿ ಜಾಲಿ ಗಿಡಗಳ ಹಾವಳಿ: ವಾಹನ ಸವಾರರಿಗೆ ತೀವ್ರ ತೊಂದರೆ
ಸುದ್ದಿ ಬೆಳಕು ವಾರ್ತೆ ಶಹಾಪುರ : ತಾಲೂಕಿನ ಚಟ್ನಳ್ಳಿ ಗ್ರಾಮದಿಂದ ಗುಂಡಳ್ಳಿ ಕ್ರಾಸ್‌ವರೆಗೆ ತೆರಳುವ ರಸ್ತೆಯ ಎರಡೂ ಬದಿಗಳಲ್ಲಿ ಜಾಲಿ ಹಾಗೂ ಮುಳ್ಳಿನ ಗಿಡಗಳು ಬೆಳೆದು, ರಸ್ತೆ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಗಿಡಗಳು ರಸ್ತೆಯ ಭಾಗಕ್ಕೆ ಚಾಚಿಕೊಂಡಿರುವುದರಿಂದ ಎದುರಿನಿಂದ ಬರುವ ವಾಹನಗಳು ಸರಿಯಾಗಿ ಕಾಣದೆ, ವಾಹನ ಸವಾರರು ಅಪಾಯದ ನಡುವೆ ಸಂಚರಿಸುವಂತಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಚಟ್ನಳ್ಳಿ–ಗುಂಡಳ್ಳಿ ಕ್ರಾಸ್ ರಸ್ತೆ ಸುತ್ತಮುತ್ತಲಿನ ಗ್ರಾಮಗಳಿಗೆ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಪ್ರತಿನಿತ್ಯ ನೂರಾರು ವಾಹನಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ರೈತರು…
by

ಯಾದಗಿರಿಯಲ್ಲಿ ಸೆ.27ಕ್ಕೆ ಕನಕ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಸುದ್ದಿ ಬೆಳಕು ವಾರ್ತೆ ಯಾದಗಿರಿ : ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕನಕ ನೌಕರರ ಸಂಘದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಸೆಪ್ಟೆಂಬರ್ 27ರಂದು ಭಾನುವಾರ ಬೆಳಗ್ಗೆ 10 ಗಂಟೆಗೆ ನಗರದ ಹೊಸಳ್ಳಿ ರಸ್ತೆಯ ಕೆಇಬಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನಕ ನೌಕರರ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ಬುಗ್ಗಪ್ಪ ಗಣಪುರ ತಿಳಿಸಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಯಾದಗಿರಿ ಹಾಗೂ ಗುರುಮಠಕಲ್ ತಾಲೂಕುಗಳ ಕನಕ ನೌಕರರ ಸಂಘದ…
by
- ಅಕ್ಟೋಬರ್ 3ರಿಂದ ಗುರುಮಠಕಲ್–ಮುಂಬೈ ಬಸ್ ಸೇವೆ ಪುನರಾರಂಭ

- ಯಾದಗಿರಿಯಲ್ಲಿ ಹಿರಿಯ ನಾಗರಿಕರ ದಿನಾಚರಣೆ: ಹಿರಿಯರ ಪಾಲನೆ ಪ್ರತಿಯೊಬ್ಬರ ಕರ್ತವ್ಯ

- ಕಡೆಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದ ಕಾರ್ಮಿಕ ಸಾವು: ಮರಣೋತ್ತರ ಪರೀಕ್ಷೆಗೆ ಆಗ್ರಹ

- ವಿಧಾನಸೌಧದ ಮೆಟ್ಟಿಲುಗಳಲ್ಲಿ ಉರ್ದು ಹಬ್ಬ: ಟಿ.ಎನ್. ಭೀಮುನಾಯಕ ವಿರೋಧ

- ಮೊಮ್ಮಗಳ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನ ಆರೋಪ: ಅಜ್ಜನ ವಿರುದ್ಧ ಪೋಕ್ಸೋ ಪ್ರಕರಣ
















