ಮೇ 1ರಂದು ಭಗವಾನ ಗೌತಮ ಬುದ್ಧರ ಜಯಂತಿ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಜಿಲ್ಲಾಡಳಿತ, ಜಿಪಂ ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಭಗವಾನ ಗೌತಮ ಬುದ್ದ ಜಯಂತ್ಯೋತ್ಸವ ಸಮಿತಿ ಸಂಯುಕ್ತಾಶ್ರಯದಲ್ಲಿ ಮೇ 1 ರಂದು ಬೆಳಗ್ಗೆ 11ಕ್ಕೆ ಇಲ್ಲಿನ ಲುಂಬಿನಿ ಉದ್ಯಾನವನದಲ್ಲಿ ಭಗವಾನ ಗೌತಮ ಬುದ್ಧರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಪ್ರಮುಖರಾದ ಮರೆಪ್ಪ ಚಟ್ಟರಕರ್ ಮತ್ತು ಬಾಬುರಾವ ಭೂತಾಳೆ ತಿಳಿಸಿದ್ದಾರೆ.
ಇಲ್ಲಿನ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೀದರನ ನಾಗಲೋಕ ಬುದ್ಧವಿಹಾರದ ಪೂಜ್ಯ ಭಂತೆ ಶಾಂತಿ ಸಮಣ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯುವ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಲಿದ್ದಾರೆ. ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅಧ್ಯಕ್ಷತೆ ವಹಿಸಲಿದ್ದಾರೆ. ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಮತ್ತು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಅವರುಗಳು ವಿಶೇಷ ಅತಿಥಿಗಳಾಗಿ ಭಾಗವಹಿಸಲಿದ್ದಾರೆಂದರು. ಸಂಸದರಾದ ರಾ ಧಾಕೃಷ್ಣ ದೊಡ್ಡಮನಿ, ಜಿ.ಕುಮಾರನಾಯಕ, ಶಾಸಕರಾದ ಶರಣಗೌಡ ಕಂದಕೂರ, ರಾಜಾ ವೇಣುಗೋಪಾಲ ನಾಯಕ, ಡಾ.ಬಿ.ಜಿ. ಪಾಟೀಲ್, ಶಶೀಲ ನಮೋಶಿ, ಡಾ.ಚಂದ್ರಶೇಖರ ಪಾಟೀಲ್ ಸೇರಿದಂತೆಯೇ ಸ್ಥಳೀಯ ಜನಪ್ರತಿನಿಧಿಗಳು ಅತಿಥಿಗಳಾಗಿ ಭಗವಹಿಸಲಿದ್ದಾರೆ. ಸಾಹಿತಿ ಡಾ.ರವೀಂದ್ರನಾಥ ಹೊಸಮನಿ ಮತ್ತು ಬಾಬುರಾವ ಭೂತಾಳಿ ಅವರಿಂದ ವಿಶೇಷ ಉಪನ್ಯಾಸ ನಡೆಯಲಿದೆ. ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

ಡಾ.ಭಗವಂತ ಅನವಾರ, ವೆಂಕಟೇಶ ಹೊಸಮನಿ, ಮಲ್ಲಪ್ಪ ಬಿರನೂರ, ಮೋನಪ್ಪ ಗೋಗಿ ಸೇರಿದಂತೆಯೇ ಇತರರಿದ್ದರು.

Leave a Reply

Your email address will not be published. Required fields are marked *

Suddi Belaku