ಮೇ 26ರಂದು ಯಾದಗಿರಿಯಲ್ಲಿ ಬಿಜೆಪಿ ಉಗ್ರ ಪ್ರತಿಭಟನೆ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ನಗರ ಸೇರಿದಂತೆಯೇ ಇಡಿ ಯಾದಗಿರಿ ಸುಮಾರು 16 ಕ್ಕೂ ಹೆಚ್ಚು ಬೇಡಿಕೆಗಳಿಗೆ ಆಗ್ರಹಿಸಿ ಮೇ 26ರಂದು ನಗರದಲ್ಲಿ ಉಗ್ರ ಹೋರಾಟ ಮತ್ತು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಿ ಮಂಡಳಿ ಸದಸ್ಯ ಮಹೇಶರೆಡ್ಡಿ ಮುದ್ದಾಳ ಹೇಳಿದ್ದಾರೆ.

ಇಲ್ಲಿನ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಅಂದು ಬೆಳಗ್ಗೆ 9ಕ್ಕೆ ಮೈಲಾಪುರ ಅಗಸಿಯಿಂದ ನಗರಸಭೆಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಅಲ್ಲಿಯೇ ಧರಣಿ ಕುಳಿತುಕೊಳ್ಳಲಾಗುವುದು. ಜಿಲ್ಲಾಧಿಕಾರಿ ಮತ್ತು ಪೌರಾಯುಕ್ತರು ಸ್ಥಳಕ್ಕೇ ಭೇಟಿ ನೀಡಿ ಮನವಿ ಸ್ವೀಕರಿಸಿ ಬೇಡಿಕೆಗಳಿಗೆ ಸೂಕ್ತಕಕ್ರಮ ಭರವಸೇ ನೀಡಿದ ನಂತರವೇ ಧರಣಿಯಿಂದ ಹಿಂದಕ್ಕೆ ಸರಿಯಲಾಗುವುದು ಎಂದರು.

ಸುಮಾರು 10 ಸಾವಿರ ಜನರು ಅಂದಿನ ಹೋರಾಟದಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಲಿದ್ದಾರೆಂದ ಅವರು, ಕಳೆದ ಮೂರು ವರ್ಷಗಳಲ್ಲಿ ಕೇಳಿಕೊಳ್ಳುವಂತಹ ಅಭಿವೃದ್ಧಿಗಳು ನಡೆಯುತ್ತಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಅವಧಿಯಲ್ಲಿ ಮಂಜೂರಾದ ಅನೇಕ ಕೆಲಸಗಳು ಸಹ ಮುಗಿಸಲು ಸಹ ಹಾಲಿ ಶಾಸಕರಿಂದ ಆಗುತ್ತಿಲ್ಲ ಎಂದು ಅವರು ದೂರಿದರು.

ರೈತರಿಗೆ ಏಳು ತಾಸು ಕರೆಂಟ್ ಕೊಡಲು ಆಗದ ಜೆಸ್ಕಾಂ ಇಲಾಖೆ, ಕೊಡುವುದೇ 2-3ತಾಸು, ಅದು ಮನಸ್ಸಿಗೆ ಬಂದಾಗ ವಿದ್ಯುತ್ ಕೊಡುವುದರಿಂದ ರೈತರಿಗೆ ತುಂಬಾ ತೊಂದರೇ ಆಗುತ್ತಿದೆ. ಹೊಸ ಟಿಸಿ ಕೂಡಿಸಲು ಕನಿಷ್ಠ 2-3ತಿಂಗಳು ಸಮಯ ತೆಗೆದುಕೊಳ್ಳಲಾಗುತ್ತಿದೆ. ನಗರ ಮತ್ತು ಹಳ್ಳಿಗಳಲ್ಲಿ ಮನಬಂದಂತೆಯೇ ಕರೆಂಟ್ ತೆಗೆಯಲಾಗುತ್ತಿದೆ. ವಿಚಾರಿಸಬೇಕೆಂದರೆ ಬಹುತೇಕ ಅಧಿಕಾರಿಗಳು ದೂರವಾಣಿ ಕರೆ ಸ್ವೀಕರಿಸುವುದೇ ಇಲ್ಲ. ನೂರಾರು ಹಳ್ಳಿಗಳಲ್ಲಿ ವಿದ್ಯುತ್ ತಂತಿಗಳು ನೆಲಕ್ಕೆ ಉರುಳಿವೇ. ಕೆಲವು ಕಡೆ ಮನೆ ಮೇಲೆ ತಂತಿ ಹಾದುಹೋಗಿದ್ದ ಬಗ್ಗೆ ಗಮನಕ್ಕೆ ತಂದರೂ ಚೆಸ್ಕಾಂ ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ದೂರಿದರು.

ಜಿಲ್ಲೆಯಲ್ಲಿ ಬಿಜೆಪಿ ಅವಧಿಯಲ್ಲಿ ಕೂಡಿಸಲಾದ ಶುದ್ದ ಕುಡಿಯುವ ನೀರಿನ ಘಟಕಗಳು ದುರಸ್ತಿಗೆ ಬಂದು ವರ್ಷವಾದರೂ ರಿಪೇರಿ ಮಾಡಿಸಿ ಮೆಂಟನ್ ಮಾಡಲು ಅಧಿಕಾರಿ ಮತ್ತು ಶಾಸಕರಿಂದ ಸಾಧ್ಯವಾಗುತ್ತಿಲ್ಲ, ಗ್ರಾಮೀಣ ಪ್ರದೇಶದಲ್ಲಿ ರಸ್ತೆಗಳು ಹಾಳಾಗಿವೆ. ನಗರದ ಶಾಸ್ತ್ರಿ ಸರ್ಕಲ್ ದಿಂದ ರೈಲ್ವೆ ನಿಲ್ದಾಣದ ರಸ್ತೆ ಅತಿಹೆಚ್ಚಿನ ಜನಸಂದಣಿಯಿಂದ ಕೂಡಿದೆ. ಇಲ್ಲಿ ಸಂಚಾರ ಹದಗೆಟ್ಟಿದ್ದೆ ಆದರೂ ನಿಯಂತ್ರಣ ಮಾಡಲು ಸಂಬಂಧಪಟ್ಟವರು ಕ್ರಮ ಜರುಗಿಸುತ್ತಿಲ್ಲ. ಹೀಗೆ ಅನೇಕ ಸಮಸ್ಯೆಗಳು ಯಾದಗಿರಿ ಮತಕ್ಷೇತ್ರದಲ್ಲಿ ಹುಟ್ಟಿಕೊಂಡರೂ ಸ್ಥಳಿಯ ಶಾಸಕರು ಕೇವಲ ಶಂಕುಸ್ಥಾಪನೆ ಮಾಡುವಲ್ಲಿಯೇ ಬಿಜಿಯಾಗಿದ್ದಾರೆಂದು ಅವರು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡಂನೋರ, ಬಿಜೆಪಿ ಜಿಲ್ಲಾ ವಕ್ತಾರ ಹಣಮಂತ ಇಟಗಿ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ್, ಬಿಜೆಪಿ ಜಿಲ್ಲಾ ಮಾಧ್ಯಮ ವಕ್ತಾರ ವೀರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಿ ಸೇರಿದಂತೆಯೇ ಇತರರಿದ್ದರು.


ಲಿಂಗಪ್ಪ ಹತ್ತಿಮನಿ ಆರೋಪ
ಕಳಪೆ ಕಾಮಗಾರಿಗೆ ಶಾಸಕ, ಅಧಿಕಾರಿಗಳೇ ಹೊಣೆ.
ನಗರ ಮಂಡಲ ಜೆಪಿ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ ಮಾತನಾಡಿ, ನಗರಸಭೆ ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಪ್ರತಿಯೊಂದು ಕೆಲಸಕ್ಕೂ ಲಂಚದ ರೇಟ್ ಫಿಕ್ಸ್ ಮಾಡಿದ್ದಾರೆ. ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ತಿದ್ದುಪಡೆ ಮತ್ತು ಹೊಸ ಖಾತ ಪಡೆಯಲು ಮತ್ತು ಖಾತೆ ನವೀಕರಣ ಮಾಡಲು ಸಾರ್ವಜನಿಕರಿಂದ 25 ಸಾವಿರ ರೂ.ದಿಂದ ರಿಂದ 50 ಸಾವಿರ ರೂ.ಗಳ ಹೆಚ್ಚಿನ ಹಣವನ್ನು ಕೇಳಲಾಗುತ್ತಿದೆ ಎಂದು ಆರೋಹಿಸಿದರು. ನಗರದ ಎಲ್ಲ 31 ವಾರ್ಡ್‌ಗಳು ಹದಗೆಟ್ಟಿವೆ.ಶಾಸಕರ ನಿರ್ಲಕ್ಷ್ಯ ಮತ್ತು ಭ್ರಷ್ಟ ಅಧಿಕಾರಿಗಳಿಗೆ ಬೆಂಬಲ ನೀಡುತ್ತಿರುದರಿಂದಲೇ ವ್ಯವಸ್ಥೆ ಹಾಳಾಗಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದರು.


ರಾಚಣ್ಣಗೌಡ ಮುದ್ದಾಳ ಪ್ರಶ್ನೆ
ಕಾಮಗಾರಿ ಆರಂಭಕ್ಕೆ ವಿಳಂಬವೇಕೆ ?
ನಗರದ ಮೈಲಾಪೂರ ಬೇಸ್‌ನಿಂದ ಹತ್ತಿಕುಣಿ ರಸ್ತೆಯವರೆಗೆ 2 ಕೋಟಿ 31 ಲಕ್ಷ ರೂ(ಕೆಕೆಆರ್ಡಿ) ಕಾಮಗಾರಿ ಟೆಂಡರ್ ಆಗಿ 2 ವರ್ಷವಾದರು ಕೆಲಸ ಆರಂಭಿಸಿಲ್ಲ. ಇದಕ್ಕೇ ಕಾರಣವೇನು ಎಂದು ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ದಾಳ ಪ್ರಶ್ನಿಸಿದರು.ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ಬಾಣಂತಿಯ ತೆರಿಗೆ ಮತ್ತು ತಾಯಿ ಮಕ್ಕಳಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಮತ್ತು ಸೌಲಭ್ಯ ಸಿಗುತ್ತಿಲ್ಲ, ಎಂಆರ್‌ಐ ಸ್ಕ್ಯಾನಿಂಗ್ ಮತ್ತು ಔಷಧಿಗಳ ಕೊರತೆಯಿದ್ದು ಶೀಘ್ರವೇ ವ್ಯವಸ್ಥೆ ಮಾಡಬೇಕು. ನಗರದ ಜನರಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆ ಕನಸಿನ ಮಾತಾಗಿದೆ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ಜಾಕವೆಲ್ ಕಾಮಗಾರಿಗೆ ಸುಮಾರು 80 ಕೋಟಿ ರೂ. ಮಂಜೂರು ಆಗಿದ್ದರೂ (30 ಮತ್ತು 50 ಕೋಟಿ ರೂ. ಎರಡು ಕಂತುಗಳಲ್ಲಿ) ಕೆಲಸವೇ ಆರಂಭಿಸಿಲ್ಲ ಎಂದು ರಾಚಣ್ಣಗೌಡ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಗಳ ಸುರಿಮಳೆಗೈದರು.

Leave a Reply

Your email address will not be published. Required fields are marked *

Suddi Belaku