
ಸುದ್ದಿ ಬೆಳಕು ವಾರ್ತೆ
ಯಾದಗಿರಿ: ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಭಾರತೀಯ ಜನತಾ ಪಕ್ಷ ರಾಜ್ಯವು ರಾಯಚೂರು ಜಿಲ್ಲೆಯ ಲಿಂಗಸೂಗುರಿನ ಗುರಗುಂಟಿಯಿಂದ ಆರಂಭಿಸಿರುವ ಆರಂಭವಾಗಿರುವ ಪಾದಯಾತ್ರೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಬುಧವಾರ ಯಾದಗಿರಿ ಜಿಲ್ಲಾ ಬಿಜೆಪಿ ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ ನೇತೃತ್ವದಲ್ಲಿ ಅನೇಕರು
ಭಾಗವಹಿಸಿದ್ದರು.
ಈ ವೇಳೆ ಮಾತನಾಡಿದ ರಾಚಣ್ಣಗೌಡ ಮುದ್ನಾಳ, ಮಾಜಿ ಸಚಿವ ನಾಗೇಂದ್ರ ಅವರು ಭಾಗಿಯಾಗಿರುವ ನೂರಾರು ಕೋಟಿ ರೂ. ಅವ್ಯವಹಾರ ಸೇರಿದಂತೆಯೇ ವಿವಿಧ ಭ್ರಷ್ಟಾಚಾರದ ವಿರುದ್ಧ ಹಮ್ಮಿಕೊಂಡಿರುವ ಈ ಪಾದಯಾತ್ರೆ ಮುಂದಿನ 2028ರ ಬದಲಾವಣೆಯ ದಿಕ್ಸೂಚಿ ಎಂದು ಹೇಳಿದರು.












Leave a Reply