ಯಾದಗಿರಿ ಆರೋಗ್ಯ ಇಲಾಖೆ ಸಭಾಂಗಣದಲ್ಲಿ ಭಾಗಪ್ಪ ಕೋರೆ ನಿವೃತ್ತಿ ಬೀಳ್ಕೊಡುಗೆ ಕಾರ್ಯಕ್ರಮ

Posted by

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಭಾಗಪ್ಪ ಕೋರೆಯವರು ನಮ್ಮ ಇಲಾಖೆಯಲ್ಲಿ ಅತ್ಯಂತ ಶಿಸ್ತು, ಸಂಯಮದಿAದ ಕಾರ್ಯನಿರ್ವಹಿಸಿ ಇಲಾಖೆಯಲ್ಲಿ ಮತ್ತು ನಮ್ಮ ಆಧೀನ ಕಚೇರಿಗಳಲ್ಲಿ ಹಲವರಿಗೆ ಹಿರಿಯಣ್ಣನಂತೆ ಸಲಹೆ ನೀಡಿ ಬಹುಜನರ ಸ್ನೇಹ ಜೀವಿಯಾಗಿದ್ದರು, ಇವರ ಸೇವೆ ಗಮನಾರ್ಹವಾಗಿದೆ. ಈ ತಮ್ಮ ನಿಷ್ಠೆ ಹಾಗೂ ಪ್ರೀತಿಯಿಂದ ನಿಸ್ವಾರ್ಥ ಸೇವೆಯನ್ನು ನೀಡಿದ್ದಾರೆ. ಇವರು ನಿವೃತ್ತಿ ಜೀವನದಲ್ಲಿ ದೇವರು ಆರೋಗ್ಯ ಮತ್ತು ನೆಮ್ಮದಿಯನ್ನು ನೀಡಲಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಬಿರೆದಾರ ಶುಭ ಹಾರೈಸಿದರು.

ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಭಾಂಗಣದಲ್ಲಿ ಸೋಮವಾರ ನಡೆದ ಹಿರಿಯ ವೈದ್ಯಕೀಯ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ಭಾಗಪ್ಪ ಕೋರೆಯವರ ನಿವೃತ್ತಿ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಇವರು ನಿವೃತ್ತಿ ಜೀವನಕ್ಕೆ ಕಾಲಿಡುತ್ತಿರುವ ಇವರಿಗೆ ಮುಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲವು ನುಡಿಮುತ್ತುಗಳನ್ನು ತಿಳಿಸಿ ಅರುವತ್ತರ ನಂತರ ಮರಳಿ ಅರಳಬೇಕು, ಆಸರೆಗೊಂದು ವ್ಯವಸ್ಥೆ, ಕೇಳಲಿಕ್ಕೊಂದು ಕಿವಿ ಇದ್ದರೆ ಬದುಕು ನೆಮ್ಮದಿಯಾಗಿರುತ್ತದೆ ಎಂದರು.

ವೃತ್ತಿಯಿAದ ನಿವೃತ್ತಿ ಅನಿವಾರ್ಯ, ನಿವೃತ್ತಿಯವರೆಗೆ ದುಡಿಮೆ ಅನಿವಾರ್ಯ ಮುಂದಿನ ಜೀವನವನ್ನು ನಮ್ಮದಾಗಿ ಕಳೆಯೋಣ. ಇಲಾಖೆಯಲ್ಲಿ ಮತ್ತು ಕಚೇರಿಯಲ್ಲಿ ಅಚ್ಚುಕಟ್ಟಾಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸಿದ್ದೀರಿ. ತಮಗೆ ಬಯಸಿದ್ದು ದೇವರು ಕರುಣಿಸಲಿ ಎಂದು ಶುಭ ಹಾರೈಸಿದರು.

ಸೇವಾ ನಿವೃತ್ತಿ ಹೊಂದುತ್ತಿರುವ ಭಾಗಪ್ಪ ಕೋರೆಯವರಿಗೆ ಶಾಲು ಹೊದಿಸಿ ಇಲಾಖೆಯ ಮತ್ತು ಕಚೇರಿಯ ಹಲವರು ಗೌರವಿಸಿದರು.

ಈ ಸಂದರ್ಭದಲ್ಲಿ ನಿವೃತ್ತ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ.ಭಗವಂತ ಅನವಾರ್, ಜಿಲ್ಲಾ ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಪದ್ಮಾನಂದ ಗಾಯಕವಾಡ್, ಸಾಹೇಬಗೌಡ ಮಾನೇಗಾರ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಲ್ಲಪ್ಪ ನಾಯ್ಕಲ್‌ಜಿಲ್ಲಾ ರೋಗ ನಿಯಂತ್ರಣಾಧಿಕಾರಿ ಡಾ.ಮುಬಾಸಿರ್ ಅಹ್ಮದ್ ಸಾಜೀದ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಜ್ಯೋತಿ ಕಟ್ಟಿಮನಿ, ತಾಲೂಕು ಅಧಿಕಾರಿ ಹಣಮಂತರಡ್ಡಿ, ಸಹಾಯಕ ಆಡಳಿತಾಧಿಕಾರಿ ಡಾ.ಗೀರಿಶ, , ಜಿಲ್ಲಾ ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಶಿವುಕುಮಾರ, ಜಿಲ್ಲಾ ಪ್ರಧಾನಕಾರ್ಯದರ್ಶಿ ಅಶ್ವಿನ್‌ಕಮಾರ, ಖಜಾಂಚಿ ಚಂದ್ರಶೇಖರ, ಉಪಾಧ್ಯಕ್ಷರಾದ ನಸೀಮಾ, ಅಲ್ಲಿಪೂರ ಆರೋಗ್ಯ ಕೇಂದ್ರ ರಮೇಶ, ಗಾಜರಕೋಟ್ ಆರೋಗಯ ಕೇಂದ್ರದ ಕವಿತಾ, ನಗನೂರ ಆರೋಗ್ಯ ಕೇಂದ್ರದ ವಿದ್ಯಾಶ್ರೀ, ಗೋಗಿ ಆರೋಗ್ಯ ಕೇಂದ್ರದ ಅನ್ವರ್, ಮುದ್ನಾಳ ಆರೋಗ್ಯ ಕೇಂದ್ರದ ಲಲಿತಾ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *

Suddi Belaku