ಸುದ್ದಿ ಬೆಳಕು ವಾರ್ತೆ
ತುಮಕೂರು : “ಬಸವಣ್ಣನವರ ಕಾಯಕ ಮತ್ತು ದಾಸೋಹ ತತ್ತ್ವಗಳು ಜಾತಿ, ಮತ, ಲಿಂಗ ಭೇದವಿಲ್ಲದ ಸಮಾನತೆಯ ಸಮಾಜಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿವೆ. ‘ಬಸವಯುಗ ವೈಭವ’ ಕೇವಲ ಒಂದು ಪುಸ್ತಕವಲ್ಲ; ಅದು ಶರಣರ ಅನುಭವ, ವಚನ ಸಾಹಿತ್ಯ ಹಾಗೂ ಮಾನವೀಯ ಮೌಲ್ಯಗಳನ್ನು ಸಾರುವ ಮಹತ್ವದ ಸಾಹಿತ್ಯಿಕ ಪ್ರಯತ್ನವಾಗಿದೆ,” ಎಂದು ಯಾದಗಿರಿ ಮತಕ್ಷೇತ್ರದ ಯುವ ಮುಖಂಡ ಹಾಗೂ ಚಿಂತಕ ಮಹೇಶರಡ್ಡಿ ವೆಂಕಟರಡ್ಡಿ ಮುದ್ನಾಳ್ ಅಭಿಪ್ರಾಯಪಟ್ಟರು.
ತುಮಕೂರಿನ ಐತಿಹಾಸಿಕ ಶ್ರೀ ಸಿದ್ಧಗಂಗಾ ಮಠದ ಪ್ರಾರ್ಥನಾ ಸಭಾಂಗಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ತುಮಕೂರು ಹಾಗೂ ಕರ್ನಾಟಕ ಗ್ರಂಥ ಪ್ರಕಟಣಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಗುರುವಾರ ಆಯೋಜಿಸಲಾಗಿದ್ದ “ಬಸವಯುಗ ವೈಭವ” ಬೃಹತ್ ಗ್ರಂಥ ಲೋಕಾರ್ಪಣೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.














Leave a Reply