ವಾಲಿಬಾಲ್ ಬಾಗಲಕೋಟ ಅಗ್ನಿಶಾಮಕ ಠಾಣೆ ಚಾಂಪಿಯನ್

Posted by

ಸುದ್ದಿ ಬೆಳಕು ವಾರ್ತೆ

ಬಾಗಲಕೊಟ : ಗಣೇಶ ಚತುರ್ಥಿಯ ಅಂಗವಾಗಿ ಬಾಗಲಕೋಟ ಅಗ್ನಿಶಾಮಕ ಠಾಣೆಯ ಆವರಣದಲ್ಲಿ ಜರುಗಿದ ವಾಲಿಬಾಲ್ ಕ್ರೀಡಾಕೂಟದಲ್ಲಿ 16 ಅಗ್ನಿಶಾಮಕ ಠಾಣೆಯ ವಾಲಿಬಾಲ್ ತಂಡಗಳು ಭಾಗವಹಿಸಿದ್ದವು
ಬಾಗಲಕೋಟ ಜಿಲ್ಲಾ ಅಗ್ನಿಶಾಮಕ ಠಾಣೆ ಪ್ರಥಮ ಬಹುಮಾನ ಪಡೆಯುವ ಮೂಲಕ ಚಾಂಪಿಯನ್ ಪಟ್ಟಗೇರಿತು.
ದ್ವಿತೀಯ ಬಹುಮಾನ ವಿಜಯಪುರ ಅಗ್ನಿಶಾಮಕ ಠಾಣೆ ಪಡೆದುಕೊಂಡಿತು. ತೃತೀಯ ಬಹುಮಾನವನ್ನು ವಿಜಯಪುರ ಏರ್ಪೋರ್ಟ್ ಅಗ್ನಿಶಾಮಕ ಠಾಣೆಯ ವಶವಾಯಿತು.

ವಾಲಿಬಾಲ್ ಆಯೋಜಕರು ಬಾಗಲಕೋಟ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಶ್ರೀ ಪ್ರಕಾಶ ಪವಾರ್ ಮಾತನಾಡಿ
ಸದಾಕಾಲ ಜನರ ಮತ್ತು ಆಸ್ತಿ ಆಸ್ತಿಗಳ ರಕ್ಷಣೆಗಾಗಿ ಶ್ರಮಿಸುವ ನಮ್ಮ ಸಿಬ್ಬಂದಿಯವರು ದಿನದ 24 ತಾಸು ಕೆಲಸ ನಿರ್ವಹಿಸಿ ಒತ್ತಡದಲ್ಲಿ ಇರುತ್ತಾರೆ ಹಾಗಾಗಿ ಸಿಬ್ಬಂದಿಯವರ ಪ್ರೇರೇಪಿಸಲು ಇಂತಹ ಆಟಗಳು ಸಹಾಯಕಾರಿಯಾಗುವುದರ ಜೊತೆಗೆ ಸಿಬ್ಬಂದಿಯವರ ಮನಸ್ತೈರ್ಯವನ್ನು ಹೆಚ್ಚಿಸುವಲ್ಲಿ ಇಂತಹ ಕ್ರೀಡಾಕೂಟಗಳು ಸಹಾಯಕಾರಿಯಾಗಲಿವೆ. ಹಾಗಾಗಿ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ ಕ್ರೀಡಾಕೂಟಗಳನ್ನು ಏರ್ಪಡಿಸುವುದರ ಮೂಲಕ ಅವರನ್ನು ಪ್ರೇರೇಪಿಸಲು ಮತ್ತು ನಾವೆಲ್ಲರೂ ಅಗ್ನಿಶಾಮಕ ಇಲಾಖೆ ಎಂಬ ಒಂದೇ ಕುಟುಂಬದ ಸದಸ್ಯರು ಎಂದು ಹೇಳಿ. ಸೋಲು ಗೆಲುವನ್ನು ನಾವೆಲ್ಲರೂ ಸಮಾನವಾಗಿ ಸ್ವೀಕರಿಸಬೇಕು ಯಾರೇ ಗೆದ್ದರು ಅಗ್ನಿಶಾಮಕ ಠಾಣೆಯ ಕುಟುಂಬದ ಸದಸ್ಯರೇ ಚಾಂಪಿಯನಾಗುತ್ತಾರೆ ಎನ್ನುವ ಮನೋಭಾವನೆಯನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು..

ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಪ್ರಕಾಶ್ ಪವಾರ ಅವರಿಗೆ ವಿವಿಧ ಅಗ್ನಿಶಾಮಕ ಠಾಣೆಯಿಂದ ಆಗಮಿಸಿದ ಅಗ್ನಿಶಾಮಕ ಅಧಿಕಾರಿ ಮತ್ತು ಸಿಬ್ಬಂದಿಯವರು ಈ ರೀತಿ ಕ್ರೀಡಾಕೂಟದಲ್ಲಿ ಬಾಗಿಯಾಗುವಂತೆ ಪ್ರೇರೇಪಿಸಿದ ನಿಮಗೆ ತುಂಬು ಹೃದಯದ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಕ್ರೀಡಾಕೂಟಕ್ಕೆ ಆಗಮಿಸಿದ ಅಧಿಕಾರಿ ಮತ್ತು ಸಿಬ್ಬಂದಿಯವರು ತಿಳಿಸಿದರು…

You Might Also Like

Leave a Reply

Your email address will not be published. Required fields are marked *

Suddi Belaku