
ಯಾದಗಿರಿ : ಸ್ವಾತಂತ್ರ್ಯ ಪೂರ್ವ ಮತ್ತು ನಂತರವೂ ಸಮಾಜದಲ್ಲಿ ಅಸಮಾನತೆ, ಜಾತೀಯತೆ ಹಾಗೂ ಮೇಲು–ಕೀಳು ಮನೋಭಾವಗಳು ಜೀವಂತವಾಗಿದ್ದ ಸಂದರ್ಭದಲ್ಲಿ ಅದನ್ನು ಬೇರು ಸಮೇತ ಕಿತ್ತೊಗೆಯಲು ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿ ಕತ್ತಲಿನಲ್ಲಿದ್ದ ಸಮಾಜಕ್ಕೆ ಬೆಳಕಿನ ದಾರಿ ತೋರಿದ ಮಹಾಪುರುಷರು ಎಂದು ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ಸಿಬ್ಬಂದಿ ಶ್ರೀಮತಿ ನಿರ್ಮಲ ಹೇಳಿದರು.
ನಗರ ಸಮೀಪದ ಲಿಂಗೇರಿ ಸ್ಟೇಷನ್‌ನ ಡಾ. ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.
ಸಮನ್ವಯ ಸೇವಾ ಸಂಸ್ಥೆಯ ಅಧ್ಯಕ್ಷ ಡಿ.ಕೆ. ದೇವಿಂದ್ರ ಮಾತನಾಡಿ, ಡಾ. ಅಂಬೇಡ್ಕರ್ ಹಲವು ರಾಷ್ಟ್ರಗಳ ಸಂವಿಧಾನಗಳನ್ನು ಅಧ್ಯಯನ ಮಾಡಿ ವಿಶ್ವದ ಅತಿ ದೊಡ್ಡ ಸಂವಿಧಾನವನ್ನು ರೂಪಿಸಿದ ಮಹಾನ್ ಚಿಂತಕರಾಗಿದ್ದಾರೆ. ಸರಳ, ಸಮಗ್ರ ಮತ್ತು ಬಲಿಷ್ಠ ಸಂವಿಧಾನದ ಮೂಲಕ ದೇಶದ ಜನರಿಗೆ ನ್ಯಾಯಯುತ ಬದುಕಿನ ದಾರಿ ತೋರಿದ ಅವರು ವಿಶ್ವ ನಾಯಕರೆಂದು ಕೊಂಡಾಡಿದರು.
ಈ ಸಂದರ್ಭದಲ್ಲಿ ವಸತಿ ನಿಲಯದ ವಾರ್ಡನ್ ದೇವಿಂದ್ರಪ್ಪ, ಬ್ರಿಲಿಯಂಟ್ ಕೋಚಿಂಗ್ ಕ್ಲಾಸಸ್ ವ್ಯವಸ್ಥಾಪಕ ನಿರ್ದೇಶಕ ಮಂಜುನಾಥ, ಶಿಕ್ಷಕರಾದ ಶ್ಯಾಮದಾಸ್, ಶಂಕರ, ಅಡುಗೆ ಸಿಬ್ಬಂದಿ ಶ್ರೀಕಂಠ ಕಡೆಚೋರ ಸೇರಿದಂತೆ ಪೋಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.










Leave a Reply