ಯಾದಗಿರಿ : ಯುವಜನರಲ್ಲಿ ನಾಯಕತ್ವದ ಗುಣ, ಸಂಸದೀಯ ಮೌಲ್ಯಗಳು ಹಾಗೂ ರಾಷ್ಟ್ರ ನಿರ್ಮಾಣದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ‘ವಿಕಸಿತ ಭಾರತ ಯುವ ಸಂಸತ್ತು–2027’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಮೈ ಭಾರತ್, ಯಾದಗಿರಿ ಇವರ ವತಿಯಿಂದ ಹಾಗೂ ಡಾನ್ ಬಾಸ್ಕೊ ಪದವಿ ಕಾಲೇಜು, ಯಾದಗಿರಿ ಆತಿಥ್ಯದಲ್ಲಿ 2026ರ ನವೆಂಬರ್ 7ರ ಶನಿವಾರ ಈ ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ‘ಒಂದೇ ರಾಷ್ಟ್ರ, ಒಂದೇ ಚುನಾವಣೆ’ (One Nation, One Election) ಎಂಬ ವಿಷಯದ ಕುರಿತು 3 ನಿಮಿಷಗಳ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಯುವಕ-ಯುವತಿಯರು ಕನ್ನಡ, ಹಿಂದಿ ಅಥವಾ ಇಂಗ್ಲಿಷ್ ಭಾಷೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಬಹುದು.
ಯಾದಗಿರಿ ಜಿಲ್ಲೆಯ 18ರಿಂದ 25 ವರ್ಷ ವಯೋಮಿತಿಯ ಯುವಕ-ಯುವತಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಯುವಜನರಲ್ಲಿ ಪ್ರಜಾಪ್ರಭುತ್ವದ ಅರಿವು, ಸಂಸದೀಯ ವ್ಯವಸ್ಥೆಯ ತಿಳಿವಳಿಕೆ, ವಾಕ್ಚಾತುರ್ಯ ಹಾಗೂ ದೇಶದ ಅಭಿವೃದ್ಧಿಯ ಕುರಿತು ಚಿಂತನೆ ಬೆಳೆಸುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ.
ಆಸಕ್ತ ಯುವಜನರು ಕೆಳಗಿನ 77950 59023 ಮೊಬೈಲ್ ನಂಬರ್ ಮೂಲಕ ನೋಂದಣಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು ಎಂದು ಆಯೋಜಕರು ತಿಳಿಸಿದ್ದಾರೆ.
ಆಯೋಜಕರು: ಮೈ ಭಾರತ್, ಯಾದಗಿರಿ
ಆತಿಥ್ಯ: ಡಾನ್ ಬಾಸ್ಕೊ ಪದವಿ ಕಾಲೇಜು, ಯಾದಗಿರಿ
ದಿನಾಂಕ: 7 ನವೆಂಬರ್ 2026, ಶನಿವಾರ.
Leave a Reply