ಯಾದಗಿರಿಯಲ್ಲಿ ಸ್ಥಗಿತಗೊಂಡ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳಿಸಲು ಕರವೇ ಆಗ್ರಹ

Posted by

–

ಸುದ್ದಿ ಬೆಳಕು ವಾರ್ತೆ

ಯಾದಗಿರಿ : ಸೇಡಂ-ಯಾದಗಿರಿ ರಾಜ್ಯ ಹೆದ್ದಾರಿ 63 ರಲ್ಲಿ ಬರುವ ಇಲ್ಲಿನ ಟಿಪ್ಪು ವೃತ್ತದಿಂದ ಗಂಗಾನಗರ ವರೆಗಿನ ಸ್ಥಗಿತಗೊಳಿಸಿದ ರಸ್ತೆ ಅಗಲೀಕರಣ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ ಜನತೆಗೆ ಅನುಕೂಲ ಮಾಡಿಕೊಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಈಗಾಗಲೇ ಕೆಕೆಆರ್‌ಡಿಬಿ ಮ್ಯಾಕ್ರೋ ಯೋಜನೆಯಡಿ 5ಕೋ ರೂ.ವೆಚ್ಚದ ಕಾಮಗಾರಿಗೆ ಚಾಲನೆಯನ್ನು ನೀಡಲಾಗಿದ್ದರೂ ಇದುವರೆಗೆ ಕಾಮಗಾರಿ ಪ್ರಗತಿ ಕಾಣದೇ ಇರುವುದರಿಂದ ಈ ರಸ್ತೆಯಲ್ಲಿ ಜನತೆಗೆ ನಿತ್ಯ ಅನಾನುಕೂಲದಿಂದ ಸಂಕಷ್ಟಕ್ಕೀಡಾಗುತ್ತಿದ್ದಾರೆ.


ಗುತ್ತಿಗೆದಾರರು ರಸ್ತೆ ಅಗಲೀಕರಣ ಕಾಮಗಾರಿ ಕೈಗೊಳ್ಳಲು ಮೊದಲು ಅತಿಕ್ರಮಣ ತೆರವು ಮಾಡಬೇಕಿದ್ದು ಇದನ್ನು ನಗರಸಭೆಯಿಂದ ಮಾಡಿಕೊಟ್ಟಲ್ಲಿ ಕಾಮಗಾರಿ ಪೂರ್ಣಗೊಳಿಸಲು ಸಾಧ್ಯವಾಗಲಿದೆ.
ನಗರಸಭೆ ಆಡಳಿತಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ಕೂಡಲೇ ಈ ಕಾಮಗಾರಿ ಕುರಿತು ತ್ವರಿತವಾಗಿ ಆದೇಶ ನೀಡುವ ಮೂಲಕ ಒತ್ತುವರಿ ತೆರವು ಮಾಡಲು ಮುಂದಾಗಬೇಕು.

ಈಗಾಗಲೇ ಅಲ್ಲಿನ ಜನತೆ ಸ್ವಯಂ ಪ್ರೇರಣೆಯಿಂದ ತೆರವು ಕಾರ್ಯ ಕೈಗೊಂಡಿದ್ದರೂ ಸಹ ಇನ್ನುಳಿದ ತೆರವು ಕಾರ್ಯ ಪೂರ್ಣಗೊಳಿಸಿ ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಂಡು ಅಲ್ಲಿನ ಜನತೆಗೆ ಹಾಗೂ ಸೇಡಂ ರಾಜ್ಯ ಹೆದ್ದಾರಿ ಸಂಚಾರ ಸುಗಮವಾಗಿ ಸಾಗಲು ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.

ಆದ್ದರಿಂದ ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಂಡು ತ್ವರಿತವಾಗಿ ತೆರವು ಕಾರ್ಯಾಚರಣೆಗೆ ಆದೇಶ ನೀಡುವ ಮೂಲಕ ಅಭಿವೃದ್ಧಿಗೆ ಮುಂದಾಗಬೇಕು ಇಲ್ಲವಾದಲ್ಲಿ ಕರವೇ ಉಗ್ರ ಹೋರಾಟ ನಡೆಸಲು ಮುಂದಾಗಲಿದೆ ಎಂದು ಮಲ್ಲು ಮಾಳೀಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ಭೀಮಾಶಂಕರ ಹತ್ತಿಕುಣಿ, ನಿಂಗಪ್ಪ ಗುಡಗುಡಿ, ವಿಶ್ವರಾಜ ಹೊನಗೇರಾ, ಭೀಮರಾಯ ರಾಮಸಮುದ್ರ, ಅಶೋಕ ನಾಯಕ ಇನ್ನಿತರರು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *

↑
Suddi Belaku