ಸುದ್ದಿ ಬೆಳಕು ವಾರ್ತೆ
ಬೆಳಗೇರಾ : ಶ್ರೀ ಮಾರುತೇಶ್ವರ ಗಜಾನನ ತರುಣ ಸಂಘದ ವತಿಯಿಂದ ಬೆಳಗೇರಾ ಗ್ರಾಮದಲ್ಲಿ ಯುವಕರಿಗಾಗಿ ಉಸುಕಿನ ಚೀಲ ಎತ್ತುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬೆಳಗೇರಾ ಗ್ರಾಮದ ಹಲವಾರು ಯುವಕರು ಉತ್ಸಾಹದಿಂದ ಭಾಗವಹಿಸಿ ತಮ್ಮ ದೈಹಿಕ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಈ ವೇಳೆ ಗ್ರಾಮದ ಯುವಕನೊಬ್ಬ ಹಣಮಂತ ಕಂದಾರ್ 170 ಕೆ.ಜಿ. ತೂಕದ ಉಸುಕಿನ ಚೀಲವನ್ನು ಎತ್ತಿ ಪ್ರಥಮ ಸ್ಥಾನ ಪಡೆದರು ಹಾಗೇ ದ್ವೀತಿಯ ಸ್ಥಾನ ಪಡೆದ ತಾಯಪ್ಪ ಯಾಗಾಪೂರ 160 ಕೆಜಿ ತೂಕದ ಉಸುಕಿನ ಚೀಲವನ್ನು ಎತ್ತಿ ಗಮನ ಸೆಳೆದರು.
ಯುವಕರಲ್ಲಿ ದೈಹಿಕ ಸಾಮರ್ಥ್ಯ, ಆತ್ಮವಿಶ್ವಾಸ ಹಾಗೂ ಕ್ರೀಡಾ ಮನೋಭಾವ ಬೆಳೆಸುವ ಉದ್ದೇಶದಿಂದ ಆಯೋಜಿಸಿದ್ದ ಈ ಕಾರ್ಯಕ್ರಮಕ್ಕೆ ಗ್ರಾಮಸ್ಥರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.














Leave a Reply